ಬೆಂಗಳೂರು ನಗರದ ವಿವಿಧೆಡೆ ಏಪ್ರಿಲ್ 17ರಂದು ಬೆಳಿಗ್ಗೆ ಜಲ ಮಂಡಳಿಯಿಂದ ನೀರಿನ ಅದಾಲತ್; ಅಹವಾಲುಗಳಿದ್ದರೆ ಸ್ಥಳದಲ್ಲೇ ಇತ್ಯರ್ಥ
ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಜಲ ಮಂಡಳಿಯ ವಾಯುವ್ಯ-2, ವಾಯುವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2–2, ನೈರುತ್ಯ -2, ನೈರುತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ.

ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಮಹಾನಗರದಲ್ಲಿ ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಏಪ್ರಿಲ್ 17 ರಂದು ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ. ವಿಶೇಷವಾಗಿ, ಬೆಂಗಳೂರು ಜಲ ಮಂಡಳಿಯ ವಾಯುವ್ಯ-2, ವಾಯುವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2–2, ನೈರುತ್ಯ -2, ನೈರುತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್ ನಡೆಯಲಿದೆ. ಈ ವಿಭಾಗಳಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ನೀರಿನ ಅದಾಲತ್ ನಡೆಸಲಾಗುವುದು ಎಂದು ಬೆಂಗಳೂರು ಜಲ ಮಂಡಳಿ ಮೂಲಗಳು ತಿಳಿಸಿವೆ.
ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ಎಲ್ಲೆಲ್ಲಿ
ನೀರಿನ ಅದಾಲತ್ ಸೇವಾಠಾಣೆಗಳು ಹೆಚ್.ಎಂ.ಟಿ ಪೀಣ್ಯ, ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳಿ, ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಫ್ರೇಜರ್‍ಟೌನ್, ಮಚಲಿಬೆಟ್ಟ, ಪಿಳ್ಳಣ್ಣಗಾರ್ಡನ್ 1&2, ಕೆಂಪೇಗೌಡ ಟವರ್, ಕುಮಾರ ಪಾರ್ಕ್, ಜಯಮಹಲ್, ಸಂಜಯನಗರ, ನ್ಯೂ ಬಿ.ಇ.ಎಲ್. ರಸ್ತೆ, ಆರ್.ಟಿ.ನಗರ ಕಾವಲ್ ಬೈರಸಂದ್ರ, ಗಂಗಾನಗರ, ಆನಂದನಗರ, ಮನೋರಾಯನಪಾಳ್ಯ, ಸಿಂಗಾಪುರ, ವಿದ್ಯಾರಣ್ಯಪುರ, ಸಹಕಾರನಗರ, ಹೆಚ್.ಎಸ್.ಆರ್-1, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಬೇಗೂರು, ವಿ.ವಿ.ಪುರಂ, ಸುಧಾಮನಗರ-2, ಕೆಂಪೇಗೌಡ ನಗರ, ಜಗಜೀವನರಾಮ್ ನಗರ, ಚಾಮರಾಜಪೇಟೆ, ಬನಗಿರಿನಗರ, ಬಿ.ಎಸ್.ಕೆ-1 &2, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಪೂರ್ಣ ಪ್ರಜ್ಞಾ ಲೇಔಟ್, ಪೂರ್ವ ವಿಲೇಜ್-2-1,& 2-2, ಕಾಡುಗೋಡಿ ವರ್ತೂರು, ಐ.ಎಸ್.ಪಿ.ಎಸ್. ಹೊರಮಾವು, ರಾಜಾಕೆನಲ್ ವ್ಯಾಪ್ತಿಯಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಮೂಲಗಳು ತಿಳಿಸಿವೆ.
ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ಸಹಾಯವಾಣಿ
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಜಲ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
