ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ; ಪಿಎಸ್​ಐ ಪರೀಕ್ಷೆ ಅಕ್ಟೋಬರ್​ 3-candidates eligible for maximum age relaxation of 3 years for recruitment to group b posts are allowed to apply mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ; ಪಿಎಸ್​ಐ ಪರೀಕ್ಷೆ ಅಕ್ಟೋಬರ್​ 3

ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ; ಪಿಎಸ್​ಐ ಪರೀಕ್ಷೆ ಅಕ್ಟೋಬರ್​ 3

Karnataka Government Jobs: ಉದ್ಯೋಗಾಂಕ್ಷಿಗಳಿಗೆ ಬಂಪರ್ ಅವಕಾಶ. ಅಕ್ಟೋಬರ್ 3ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆಯಲಿದೆ. ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ರದ್ದು ಮಾಡಲಾಗಿದೆ. (ವರದಿ-ಎಚ್. ಮಾರುತಿ)

ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ; ಪಿಎಸ್​ಐ ಪರೀಕ್ಷೆಗೆ ದಿನಾಂಕ ಫಿಕ್ಸ್
ಗರಿಷ್ಠ ವಯೋಮಿತಿ 3 ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ; ಪಿಎಸ್​ಐ ಪರೀಕ್ಷೆಗೆ ದಿನಾಂಕ ಫಿಕ್ಸ್

ಬೆಂಗಳೂರು: ವಿವಿಧ ಇಲಾಖೆಗಳ ಗ್ರೂಪ್-ಬಿ ಹುದ್ದೆಗಳ ನೇಮಕಾತಿಗಾಗಿ ಇದೇ ಶನಿವಾರ ಸೆಪ್ಟೆಂಬರ್ 14 ಶನಿವಾರ ಮತ್ತು ಸೆಪ್ಟೆಂಬರ್ 15 ಭಾನುವಾರ ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (KPSC Recruitment) ಶುಕ್ರವಾರ ಮುಂದೂಡಿದೆ. ಇದೇ ಹುದ್ದೆಗಳ ನೇಮಕಾತಿಗಾಗಿ ಇತರೆ ದಿನಾಂಕಗಳಲ್ಲಿ ನಡೆಯಬೇಕಿದ್ದ ವಿಷಯವಾರು ಪತ್ರಿಕೆಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದೂ ಕೆಪಿಎಸ್‌ಸಿ ತಿಳಿಸಿದೆ.

ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಸಡಿಲಿಸಿ ಸೆಪ್ಟೆಂಬರ್ 10ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಈ ವಯೋಮಿತಿ ಸಡಿಲಿಕೆಯು ಒಂದು ಬಾರಿಗೆ ಮಾತ್ರ ಅನ್ವಯವಾಗಲಿದ್ದು, ಈಗಾಗಲೇ ಹೊರಡಿಸಲಾಗಿರುವ ನೇರ ನೇಮಕಾತಿ ಅಧಿಸೂಚನೆಗಳು ಮತ್ತು ಮುಂದಿನ ಒಂದು ವರ್ಷದಲ್ಲಿ ನಡೆಯಲಿರುವ ನೇಮಕಾತಿಗಳಲ್ಲಿ ಇದನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. 

ಈ ಕಾರಣದಿಂದ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಗರಿಷ್ಠ ವಯೋಮಿತಿ ಮೂರು ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ನಂತರ ಪರೀಕ್ಷೆಗಳ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಆಯೋಗ ಹೇಳಿದೆ. ಸರ್ಕಾರದ ಈ ಆದೇಶದಿಂದ ಲಕ್ಷಾಂತರ ಉದ್ಯೋಗಾಂಕ್ಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 

ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್ ಬಿ, ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗಳನ್ನು ಕೋವಿಡ್, ಚುನಾವಣೆ ಮತ್ತಿತರ ಕಾರಣಗಳಿಗೆ ರಾಜ್ಯ ಸರ್ಕಾರ ಮುಂದೂಡುತ್ತಲೇ ಬರುತ್ತಿತ್ತು. ಇದರಿಂದ ಅಭ್ಯರ್ಥಿಗಳ ವಯೋಮಿತಿ ಹೆಚ್ಚಿದ್ದು, ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗುತ್ತಿದ್ದರು. ಆದ್ದರಿಂದ ನೇರ ನೇಮಕಾತಿಗೆ ಪ್ರಸ್ತುತ ನಿಗದಿಪಡಿಸಿರುವ ಗರಿಷ್ಠವಯೋಮಿತಿಯನ್ನು ಸಡಿಲಿಸಬೇಕು ಎಂದು ಉದ್ಯೋಗಾಂಕ್ಷಿಗಳು ಮತ್ತು ಅಭ್ಯರ್ಥಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು.

ವಯೋಮಿತಿ ಹೆಚ್ಚಿಸಬೇಕೆಂಬ ಅಭ್ಯರ್ಥಿಗಳ ಮನವಿ ಕುರಿತು ಸೆಪ್ಟೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಸಡಿಲಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದರಿಂದ ವಯೋಮಿತಿ ಮೀರಿದ್ದ ಲಕ್ಷಾಂತರ ಉದ್ಯೋಗಾಂಕ್ಷಿಗಳಿಗೆ ಒಂದು ಅವಕಾಶ ಸಿಕ್ಕಂತಾಗಿದೆ.

ಪಿಎಸ್​ಐ ಪರೀಕ್ಷೆ ಅಕ್ಟೋಬರ್​ 3ಕ್ಕೆ

ಪೊಲೀಸ್ ಸಬ್​​ ಇನ್​ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ನಡೆಯಬೇಕಿದ್ದ ಪರೀಕ್ಷೆಗೆ (PSI Exam Date Fix) ಕೊನೆಗೂ ಕಾಲ ಕೂಡಿ ಬಂದಿದೆ. ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅಕ್ಟೋಬರ್ 3ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಸ್ವತಃ ಗೃಹ ಸಚಿವ ಜಿ.ಪರಮೇಶ್ವರ ಈ ಮಾಹಿತಿಯನ್ನು ತಿಳಿಸಿದ್ದಾರೆ.

402 ಪಿಎಸ್‌ಐ ಹುದ್ದೆಗಳಿಗೆ ಮೊದಲಿಗೆ ಸೆಪ್ಟೆಂಬರ್ 22ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪರೀಕ್ಷೆ ಮುಂದೂಡಬೇಕೆಂಬ ಒತ್ತಾಯ ಕೇಳಿ ಬಂದಿದ್ದರಿಂದ ಸೆ.28 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆ ದಿನವೂ ಯುಪಿಎಸ್‌ಸಿ ನೇಮಕಾತಿಗೆ ಇಂಗ್ಲಿಷ್ ಕಡ್ಡಾಯ ಪರೀಕ್ಷೆ ಇರುವುದರಿಂದ ಅಂತಿಮವಾಗಿ ಅ.3ಕ್ಕೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕೆಇಎ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ.

ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಕೆ ಇ ಎ ಇದೇ ತಿಂಗಳ 22 ರಂದು ನಡೆಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಇತ್ತೀಚೆಗೆ ಬಿಜೆಪಿ ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಧೀರಜ್ ಮುನಿರಾಜ್ ಅವರ ನೇತೃತ್ವದ ನಿಯೋಗ ಮಂಗಳವಾರ ಗೃಹ ಸಚಿವರಿಗೆ ಮನವಿ ಸಲ್ಲಿಸಿತ್ತು.

ಪಿಎಸ್‌ಐ ಪರೀಕ್ಷೆ ಬರೆಯಬೇಕಾದ 100ಕ್ಕೂ ಹೆಚ್ಚು ಆಕಾಂಕ್ಷಿಗಳು, ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಬರೆಯುತ್ತಿದ್ದಾರೆ. ಆದ್ದರಿಂದ ಪರೀಕ್ಷಾ ದಿನವನ್ನು ಮುಂದೂಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಈ ತೀರ್ಮಾನದಿಂದ ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪಿಎಸ್‌ಐ ಪರೀಕ್ಷೆ ಬರೆಯಲೂ ಸಹಾಯಕವಾಗಲಿದೆ.

mysore-dasara_Entry_Point