Central Bank Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಾನಾ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಡಿಸೆಂಬರ್ 3 ಕಡೆ ದಿನ
Central Bank of India Recruitment 2024: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಪ್ರಕ್ರಿಯೆ ಶುರುವಾಗಿದೆ.
Central Bank of India Recruitment 2024: ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅದರಲ್ಲೂ ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ, ವ್ಯವಸ್ಥಾಪಕ. ಸಹಾಯಕ ವ್ಯವಸ್ಥಾಪಕ ಸಹಿತ ವಿವಿಧ 253 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ,. ಅಗತ್ಯವಿರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮುಂದಿನ ತಿಂಗಳು ಡಿಸೆಂಬರ್ 3 ರೊಳಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಅರ್ಜಿ ಸಲ್ಲಿಸಬಹುದು. ಡಿಸೆಂಬರ್‌ನಲ್ಲಿಯೇ ಆನ್ ಲೈನ್ ಪರೀಕ್ಷೆ ಇರಲಿದ್ದು, 2025ರ ಜನವರಿಯಲ್ಲಿ ನೇಮಕಾತಿ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ನೇಮಕ ಮಾಡಿಕೊಳ್ಳಲಿರುವ ಹುದ್ದೆಗಳ ವಿವರ: ಹೀಗಿದೆ
- ಚೀಫ್ ಮ್ಯಾನೇಜರ್ ಒಟ್ಟು 10 ಹುದ್ದೆ
- ಸೀನಿಯರ್ ಮ್ಯಾನೇಜರ್ ಒಟ್ಟು 56 ಹುದ್ದೆ
- ಮ್ಯಾನೇಜರ್ ಒಟ್ಟು162 ಹುದ್ದೆ
- ಅಸಿಸ್ಟಂಟ್ ಮ್ಯಾನೇಜರ್ ಒಟ್ಟು 25 ಹುದ್ದೆ
* ಒಟ್ಟು ಹುದ್ದೆಗಳ ಸಂಖ್ಯೆ – ಎಲ್ಲ ಸೇರಿ ಒಟ್ಟು 253 ಹುದ್ದೆ
ಕರ್ನಾಟಕದ ಜತೆಗೆ ಭಾರತದ ನಾನಾ ಭಾಗಗಳಲ್ಲಿನ ಶಾಖೆಗಳಿಗೆ ಈ ಉದ್ಯೋಗ ಪ್ರಕ್ರಿಯೆ ನಡೆಯುತ್ತಿದೆ.
ಅರ್ಜಿ ಸಲ್ಲಿಕೆಗೆ ಶೈಕ್ಷಣಿಕ ಅರ್ಹತೆ ಏನು: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಯಾವುದೇ ವಿದ್ಯಾಸಂಸ್ಥೆಯಿಂದ ಬಿಇ/ ಬಿ.ಟೆಕ್/ ಎಂಸಿಎ/ ಪದವಿ / ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಯಾವುದೇ ಪದವೀಧರರೂ ಅರ್ಹರು
ಇದನ್ನೂ ಓದಿರಿ: ಕರ್ಣಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ; ತಿಂಗಳಿಗೆ 24,050- 64,480 ರೂ ವೇತನ
ಅರ್ಹ ಅಭ್ಯರ್ಥಿಗಳಿರಬೇಕಾದ ವಯೋಮಿತಿ ವಿವರ ಹೀಗಿದೆ:
- ಚೀಫ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 34 ವರ್ಷ, ಗರಿಷ್ಠ 40 ವರ್ಷ ಆಗಿರಬೇಕು.
- ಸೀನಿಯರ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 30 ವರ್ಷ, ಗರಿಷ್ಠ 38 ವರ್ಷ ವಯಸ್ಸು ಆಗಿರಲೇಬೇಕು.
- ಮ್ಯಾನೇಜರ್ ಹುದ್ದೆಗೆ ಕನಿಷ್ಠ 27 ವರ್ಷ, ಗರಿಷ್ಠ 33 ವರ್ಷದೊಳಗೆ ಇರಬೇಕು
- ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 23 ವರ್ಷ, ಗರಿಷ್ಠ 27 ವರ್ಷ ವಯಸ್ಸು ಇರುವುದು ಕಡ್ಡಾಯ
- ಇದಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ( PWD)ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ಎಲ್ಲಾ ಹುದ್ದೆಗಳಿಗೆ ನೀಡಲಾಗಿದೆ.
ಇದನ್ನೂ ಓದಿರಿ: ಭಾರತೀಯ ರೈಲ್ವೆ ಉದ್ಯೋಗ ಯಾಕೆ ಉತ್ತಮ? ಈ 10 ಪ್ರಯೋಜನಗಳ ವಿವರ ತಿಳಿದ್ರೆ ನೀವೂ ರೈಲ್ವೆ ಜಾಬ್ ಕನಸು ಕಾಣುವಿರಿ
ಸಂಬಳ ಎಷ್ಟು
- ಚೀಫ್ ಮ್ಯಾನೇಜರ್ ಹುದ್ದೆಗೆ ರೂ. 102300 - 120940
- ಸೀನಿಯರ್ ಮ್ಯಾನೇಜರ್ ಹುದ್ದೆಗೆ ರೂ. 85920 - 105280
- ಮ್ಯಾನೇಜರ್ ಹುದ್ದೆಗೆ ರೂ. 64820 - 93960
- ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ರೂ. 48480 - 85920 ವೇತನ ನಿಗದಿಯಾಗಿದೆ.
ಅರ್ಜಿ ಶುಲ್ಕ ಎಷ್ಟು
- ಪ.ಜಾತಿ/ ಪ.ಪಂ./ ಪಿಡಬ್ಲ್ಯೂಡಿ/ ಮಹಿಳಾ ಅಭ್ಯರ್ಥಿಗಳು – ರೂ. 175 ನಿಗದಿಪಡಿಸಿದ್ದರೆ, ಉಳಿದ ಎಲ್ಲ ಅಭ್ಯರ್ಥಿಗಳು – ರೂ. 850 ಪಾವತಿಸಬೇಕು.
ಅರ್ಜಿ ಸಲ್ಲಿಕೆ. ಪರೀಕ್ಷೆ, ಸಂದರ್ಶನ ಯಾವಾಗ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವನ್ನು , 2024ರ ಡಿಸೆಂಬರ್ 03 ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ.
- ಆನ್‌ಲೈನ್ ಪರೀಕ್ಷೆ ನಡೆಯುವ ದಿನಾಂಕ 2024ರ ಡಿಸೆಂಬರ್ 14ರಂದು ನಿಗದಿ ಮಾಡಲಾಗಿದೆ.
- ಸಂದರ್ಶನ ನಡೆಯುವ (ತಾತ್ಕಾಲಿಕ) ದಿನಾಂಕ : 2025ರ ಜನವರಿ 2ನೇ ವಾರರಂದು ನಡೆಯಬಹುದು.
ಮಾಹಿತಿಗೆ: https://www.centralbankofindia.co.in/en/recruitments ಸಂಪರ್ಕಿಸಬಹುದು.