ಕನ್ನಡ ಸುದ್ದಿ  /  Karnataka  /  Central Silk Board Recruitment 2022 Notification Full Details Age Limit Education Post Details

Silk Board Recruitment: ಬೆಂಗಳೂರು ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ, ಇಲ್ಲಿದೆ ನೇರ ನೇಮಕದ ಕುರಿತು ಹೆಚ್ಚಿನ ವಿವರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯು ವಿವಿಧ ಹುದ್ದೆಗಳಿಗೆ (Central Silk Board Recruitment) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಹೆಚ್ಚಿನ ವಿವರವನ್ನು ಈ ಮುಂದೆ ನೀಡಲಾಗಿದೆ.

ಸಿಲ್ಕ್‌ ಬೋರ್ಡ್‌ ಉದ್ಯೋಗ
ಸಿಲ್ಕ್‌ ಬೋರ್ಡ್‌ ಉದ್ಯೋಗ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯು ವಿವಿಧ ಹುದ್ದೆಗಳಿಗೆ (Central Silk Board Recruitment) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಹೆಚ್ಚಿನ ವಿವರವನ್ನು ಈ ಮುಂದೆ ನೀಡಲಾಗಿದೆ.

ಬೆಂಗಳೂರಿನ ಮಡಿವಾಳದ ಬಿಟಿಎಂ ಬಡಾವಣೆಯಲ್ಲಿರುವ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಎನ್ನುವುದು ಜವಳಿ ಸಚಿವಾಲಯದಡಿ ಬರುವ ಭಾಎರತ ಸರಕಾರದ ಒಂದು ಅಂಗಸಂಸ್ಥೆ. ಸೆರಿಕಲ್ಚರ್‌ ಅಥವಾ ರೇಷ್ಮೆಗೆ ಸಂಬಂಧಪಟ್ಟ ಸಂಶೋಧನೆಯನ್ನು ಇದು ಮಾಡುತ್ತಿದ್ದು, ಜಗತ್ತಿನ ರೇಷ್ಮೆ ಮಾರುಕಟ್ಟೆಯಲ್ಲಿ ಭಾರತಕ್ಕೆ ಹೊಸ ಹೊಳಪು ನೀಡುತ್ತಿದೆ.

ಇದೀಗ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ತನ್ನ ಪ್ರಧಾನ ಕಚೇರಿ ಮತ್ತು ತನ್ನ ಇತರೆ ಕಚೇರಿಗಳಲ್ಲಿ ಸೈಂಟಿಸ್ಟ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ. ಐಸಿಎಆರ್‌ ಎಐಸಿಎ-ಜೆಆರ್‌ಎಫ್‌/ಎಸ್‌ಆರ್‌ಎಫ್‌ (ಪಿಎಚ್‌.ಡಿ)-೨೦೨೨ರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಈ ಹುದ್ದೆಗಳಿಗೆ ನೇರ ನೇಮಕ ಮಾಡಲಾಗುತ್ತದೆ.

ಎಷ್ಟು ಹುದ್ದೆಗಳಿವೆ?

ಕ್ರಾಪ್‌ ಸೈನ್ಸ್-‌೧ರಲ್ಲಿ 2, ಕ್ರಾಪ್‌ ಸೈನ್ಸ್‌ ೨ರಲ್ಲಿ 12, ಕ್ರಾಪ್‌ ಸೈನ್ಸ್‌ ೩ರಲ್ಲಿ 4, ವೆಟರ್ನರಿ ಆಂಡ್‌ ಅನಿಮಲ್‌ ಸೈನ್ಸ್‌ನಲ್ಲಿ 8, ನ್ಯಾಚುರಲ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಒಂದು, ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿಯಲ್ಲಿ ಎರಡು, ಅಗ್ರಿಕಲ್ಚರ್‌ ಎಕಾನಮಿಕ್ಸ್‌ನಲ್ಲಿ ಒಂದು ಸೇರಿದಂತೆ ಒಟ್ಟು30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಆಯೋಗದ ಲೆವೆಲ್‌-೧೦ರ ಅನ್ವಯ 56,100- 177500 ರೂ.ವರೆಗೆ ವೇತನ ದೊರಕಲಿದೆ.

ಅರ್ಹತೆಗಳೇನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ICAR AICE JRF/SRF (ph.d)-2022 ಪರೀಕ್ಷೆ ಬರೆದಿರಬೇಕು. ಈ ಪರೀಕ್ಷೆಯನ್ನು ಸಂಬಂಧಪಟ್ಟ ವಿಷಯಗಳಲ್ಲಿಯೇ ಬರೆದಿರಬೇಕು. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಮಾತ್ರ ಸೈಂಟಿಸ್ಟ್‌ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸುವ ಈ ಪರೀಕ್ಷೆಗೆ icar.nta.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು 19-08-2022 ಕೊನೆಯ ದಿನಾಂಕವಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನ ವೆಬ್‌ಸೈಟ್‌ csb.gov.in ನಲ್ಲಿ ನೀಡಲಾದ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಳ್ಳಿ. ಈ ವೆಬ್‌ಸೈಟ್‌ನ ಜಾಬ್‌ ಅಪಾರ್ಚುನಿಟಿ ವಿಭಾಗದಲ್ಲಿ ಅಧಿಸೂಚನೆ ಇರುತ್ತದೆ.

ಮೇಲೆ ತಿಳಿಸಿದ ಎನ್‌ಟಿಎ ಪರೀಕ್ಷೆಯ ಜತೆಗೆ ಅಭ್ಯರ್ಥಿಗಳು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅಗ್ರಿಕಲ್ಚರಲ್‌ ಸೈನ್ಸಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳಾಗಿವೆ. ಹೆಚ್ಚಿನ ವಿವರಕ್ಕೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: icar.nta.nic.in. ಈ ಹುದ್ದೆಗಳ ಕುರಿತು ಯಾವುದೇ ಸಂದೇಹಗಳಿದ್ದರೂ jobs.csb@nic.in ಗೆ ಇಮೇಲ್‌ ಮಾಡಬಹುದು.

IPL_Entry_Point

ವಿಭಾಗ