Ropeway Projects: ಕೊಲ್ಲೂರು -ಕೊಡಚಾದ್ರಿ ರೋಪ್‌ವೇ ಶೀಘ್ರ, ದೇಶಾದ್ಯಂತ 18 ರೋಪ್‌ವೇ ಪ್ರಾಜೆಕ್ಟ್‌ಗಳು, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್
ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರು ಯೋಜನೆಯು ಇದೇ ಡಿಸೆಂಬರ್‌ನಲ್ಲಿಆರಂಭವಾಗುವ ನಿರೀಕ್ಷೆಯಿದೆ.
ಬೆಂಗಳೂರು: ಕರ್ನಾಟಕದ ಕೊಲ್ಲೂರು-ಕೊಡಚಾದ್ರಿ ರೋಪ್ ಸೇರಿದಂತೆ ದೇಶಾದ್ಯಂತ ಹದಿನೆಂಟು ರೋಪ್‌ವೇಗಳ ನಿರ್ಮಾಣ ಕಾರ್ಯ ಮುಂದಿನ ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿದೆ. ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರು ಯೋಜನೆಯು ಇದೇ ಡಿಸೆಂಬರ್‌ನಲ್ಲಿಆರಂಭವಾಗುವ ನಿರೀಕ್ಷೆಯಿದೆ.
ಟ್ರೆಂಡಿಂಗ್ ಸುದ್ದಿ
ಶ್ರೀನಗರದ ಶಂಕರಾಚಾರ್ಯ ದೇಗುಲದಿಂದ ಒಂದು ಕಿಲೋಮೀಟರ್‌ನಷ್ಟು ದೂರದ ಕರ್ನೂಲ್ ಶ್ರೀಶೈಲಂ ಜ್ಯೋತಿರ್ಲಿಂಗ ದೇಗುಲದವರೆಗೆ ರೋಪ್ ವೇ ನಿರ್ಮಾಣಗೊಳ್ಳಲಿದೆ. ಕೃಷ್ಣಾ ನದಿಯ ಸಮೀಪದಲ್ಲಿ ಈ ರೋಪ್ ವೇ ಇರಲಿದೆ. ಲೇಹ್ ಪ್ಯಾಲೇಸ್, ಗ್ವಾಲೀಯರ್ ಕೋಟೆ ಸೇರಿದಂತೆ ಇಂತಹ ಹದಿನೆಂಟು ರೋಪ್‌ವೇಗಳ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ.
ಈಗಾಗಲೇ ಈ ರೋಪ್‌ವೇ ಪ್ರಾಜೆಕ್ಟ್‌ಗಳಲ್ಲಿ ಕೆಲವು ರೋಪ್‌ವೇ ಪ್ರಾಜೆಕ್ಟ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಉಜ್ಜಯಿನ ಮಹಕಾಳೇಶ್ವರ ದೇಗುಲಕ್ಕೆ ಒಂದು ಕಿ.ಮೀ. ದೂರದ ರೋಪ್‌ವೇ ನಿರ್ಮಾಣಗೊಳ್ಳಲಿದೆ. ವಾರಣಾಸಿಗೂ ರೋಪ್‌ವೇ ಪರಿಚಯಿಸುವಂತೆ ಈ ವರ್ಷದ ಆರಂಭದಲ್ಲಿಯೇ ಟೆಂಡರ್ ಆಹ್ವಾನಿಸಲಾಗಿದೆ. ಉತ್ತರಾಖಂಡದ ಕೇದರನಾಥ, ಹೇಮಕುಂಡ ಸಾಹೀಬ್‌ಗೂ ಕೇಬಲ್‌ಕಾರ್ ದೊರಕಲಿದೆ.
ಜಮ್ಮು ಮತ್ತು ಕಾಶ್ಮೀರದ ಲೇಹ್‌ಗೆ, ತ್ರಿಪುರ, ಅರುಣಾಚಲ ಪ್ರದೇಶ, ಮಣಿಪುರಗಳಲ್ಲಿಯೂ ಹೊಸ ರೋಪ್‌ವೇ ಪ್ರಾಜೆಕ್ಟ್‌ಗಳು ಆರಂಭಗೊಳ್ಳಲಿವೆ. ಉಡುಪಿ ಜಿಲ್ಲೆಯ ಕೊಲ್ಲೂರಿನಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಏಳು ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಾಣಗೊಳ್ಳಲಿದೆ. ತಮಿಳುನಾಡಿನ ಪಳನಿಯಿಂದ ಕೊಡೈಕನಲ್‌ವರೆಗೆ ರೋಪ್‌ವೇ ನಿರ್ಮಾಣಗೊಳ್ಳಲಿದೆ.
ಹಿಮಾಚಲ ಪ್ರದೇಶದ ಬಿಜ್ಲಿ ಮಹಾದೇವ ದೇಗುಲದಿಂದ ಮೂರು ಕಿ.ಮೀ. ಉದ್ದದ ರೋಪ್ ವೇ ನಿರ್ಮಾಣಗೊಳ್ಳಲಿದೆ. ಜಮ್ಮು ಕಾಶ್ಮೀರದ ಪುರಾತನ ಶಂಕರಾಚಾರ್ಯ ದೇಗುಲದ ಶಿಖರಕ್ಕೆ ಮಾತ್ರವಲ್ಲದೆ ಮಹಾ ವೈಷ್ಣೋದೇವಿ ಮಂದಿರದ ಸಮೀಪದಲ್ಲಿ ದರ್ಶನ್ ಡಿಯೊಪ್ಡಿಯಿಂದ ಶಿವಖೋರಿ ದೇಗುಲಕ್ಕೂ ರೋಪ್ ವೇ ನಿರ್ಮಾಣಗೊಳ್ಳಲಿದೆ.
ಮಹಾರಾಷ್ಟ್ರದಲ್ಲಿ ರಾಜಗಢ ಕೋಟೆಗೆ ರೋಪ್‌ವೇ ನಿರ್ಮಿಸಲು ಯೋಜಿಸಲಾಗಿದೆ. ಆಂಧ್ರಪ್ರದೇಶದ ಶ್ರೀಸೈಲಂ ದೇಗುಲಕ್ಕೂ ತೆಲಂಗಾಣದ ಈಗಲಪೆಂಟದಿಂದ ರೋಪ್ ವೇ ನಿರ್ಮಾಣಗೊಳ್ಳಲಿದೆ. ಉತ್ತರ ಪ್ರದೇಶದ ವೈಶಾಲಿ ಮೆಟ್ರೊ ನಿಲ್ದಾಣದಿಂದ ಹತ್ತು ಕಿ.ಮೀ. ಉದ್ದದ ರೋಪ್‌ವೇ ನಿರ್ಮಾಣಗೊಳ್ಳಲಿದೆ.
ಕೊಲ್ಲೂರು-ಕೊಡಚಾದ್ರಿ ರೋಪ್‌ವೇ
ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ 1200ಕೋಟಿ ರೂ. ವೆಚ್ಚದ, 7 ಕಿ.ಮೀ. ಉದ್ದದ ರೋಪ್‌ವೇ ಯೋಜನೆ ಇದಾಗಿದೆ. ಈ ಯೋಜನೆಗೆ ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಈ ರೋಪ್‌ವೇ ನಿರ್ಮಾಣಪೂರ್ತಿಗೊಂಡರೆ ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್‌ವೇ ಮೂಲಕ 15 ನಿಮಿಷಗಳಲ್ಲಿ ತಲುಪಬಹುದಾಗಿದೆ. ರಸ್ತೆ ಮೂಲಕ ಹೋಗಲು 40 ಕಿ.ಮೀ. ಇದ್ದು, ಒಂದೂವರೆ ಗಂಟೆ ಬೇಕಿರುತ್ತದೆ. ಈ ರಸ್ತೆಯಲ್ಲಿ ಜೀಪ್ ಮೂಲಕ ಮಾತ್ರ ಪ್ರಯಾಣಿಸಬಹುದು. ರೋಪ್‌ವೇಯಿಂದ ಈ ದೂರವು ಕೇವಲ 8 ಕಿ.ಮೀ. ನೇರ ಅಂತರ ಇರಲಿದೆ.