Chamarajanagar News: ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagar News: ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ

Chamarajanagar News: ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರಿನ ಶಂಕರನಗರದ ಗೋವಿಂದರಾಜು, ಚಾಮರಾಜನಗರ ತಾಲೂಕಿನ ಸರಗೂರುಮೋಳೆ ಗ್ರಾಮದ ಗೋವಿಂದರಾಜು, ಆನಂದ್, ನಾಗವಳ್ಳಿ ಗ್ರಾಮದ ಮಹೇಂದ್ರ, ಚಾಮರಾಜನಗರದ ಅಸ್ಗರ್ ಪಾಷ ಬಂಧಿತ ಆರೋಪಿಗಳು.

ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ
ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಚಾಮರಾಜನಗರ (ಗುಂಡ್ಲುಪೇಟೆ): ತರಕಾರಿ ವಾಹನದಲ್ಲಿ ರಕ್ತಚಂದನ ಮರದ ತುಂಡು ಗಳನ್ನು ಸಾಗಿಸುತ್ತಿದ್ದ 5 ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರಿನ ಶಂಕರನಗರದ ಗೋವಿಂದರಾಜು, ಚಾಮರಾಜನಗರ ತಾಲೂಕಿನ ಸರಗೂರುಮೋಳೆ ಗ್ರಾಮದ ಗೋವಿಂದರಾಜು, ಆನಂದ್, ನಾಗವಳ್ಳಿ ಗ್ರಾಮದ ಮಹೇಂದ್ರ, ಚಾಮರಾಜನಗರದ ಅಸ್ಗರ್ ಪಾಷ ಬಂಧಿತ ಆರೋಪಿಗಳು.

ತರಕಾರಿ ಸಾಗಿಸುವ ವಾಹನದಲ್ಲಿ ಮರದ ತುಂಡುಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಬಂಡೀಪುರ ಹುಲಿಯೋಜನೆಯ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಅವರ ನಿರ್ದೇಶನದಂತೆ ವಿಶೇಷ ಹುಲಿ ಸಂರಕ್ಷಣಾ ದಳದ ಎಸಿಎಫ್ ಗಳಾದ ಜಿ.ರವೀಂದ್ರ ಹಾಗೂ ಕೆ.ಪರಮೇಶ್ ಅವರ ಮಾರ್ಗದರ್ಶನದಲ್ಲಿ ಆ.ಎಫ್.ಒ.ಎನ್.ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ 3 ತಂಡಗಳಾಗಿ ದಾಳಿ ನಡೆಸಿ, ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಬಳಿ ಮಹೇಂದ್ರ ಬೊಲೇರೋ ಪಿಕಪ್ ವಾಹನವನ್ನು ಪರಿಶೀಲಿಸಿದ ವೇಳೆ ತರಕಾರಿ ಚೀಲದ ಕೆಳಭಾಗದಲ್ಲಿ ಎರಡು ರಕ್ತಚಂದನ ಮರದ ತುಂಡುಗಳು ಪತ್ತೆಯಾಗಿದೆ.

ವಾಹನದಲ್ಲಿ ಪತ್ತೆಯಾದ ಸುಮಾರು 50 ಕೆಜಿ ತೂಕದ ಎರಡು ಮರದ ತುಂಡುಗಳನ್ನು ವಶಪಡಿಸಿ ಕೊಂಡು ಐದು ಜನರನ್ನು ಬಂಧಿಸಿ, ಬೊಲೆರೋ ವಾಹನ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ಪ್ರಕರಣ ದಾಖಲು ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ದಾಳಿ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಗಳಾದ ರಾಮಲಿಂಗಪ್ಪ, ಎಸ್. ಮುದ್ದರಾಜು, ಭರತ್, ವಿಶೇಷ ಹುಲಿ ಸಂರಕ್ಷಣಾ ದಳದ ಆರ್ ಎಫ್‌ಒ ಕಿರಣ್ ಕುಮಾರ್, ನವೀನ್ ಕುಮಾರ್, ಸಿದ್ದು ಅರಿ, ರಮೇಶ್‌ ಮಠಪತಿ ಗಸ್ತು ವನಪಾಲಕ ಅಭಿಲಾಷ, ಪರಸಪ್ಪ, ಶೇಖರ್ ಆರ್.ಜಾದವ್, ಶ್ರೀ ಕಾಂತ, ಕುಮಾರ್, ಕರಿಗೌಡ, ಬಸವೇಗೌಡ ಸೇರಿದಂತೆ ಇತರರು ಭಾಗವಹಿಸಿದರು.

Whats_app_banner