ಜನವರಿ 1ರಿಂದ ದುಬಾರಿ: ಪಾರ್ಲೆ-ಜಿಯಿಂದ ಸೋಪ್‌ ತನಕ ಹೊಸ ವರ್ಷದಲ್ಲಿ ಈ ಗ್ರಾಹಕ ವಸ್ತುಗಳ ರೇಟ್‌ ಜಾಸ್ತಿ ಕಣ್ರೀ
ಕನ್ನಡ ಸುದ್ದಿ  /  ಕರ್ನಾಟಕ  /  ಜನವರಿ 1ರಿಂದ ದುಬಾರಿ: ಪಾರ್ಲೆ-ಜಿಯಿಂದ ಸೋಪ್‌ ತನಕ ಹೊಸ ವರ್ಷದಲ್ಲಿ ಈ ಗ್ರಾಹಕ ವಸ್ತುಗಳ ರೇಟ್‌ ಜಾಸ್ತಿ ಕಣ್ರೀ

ಜನವರಿ 1ರಿಂದ ದುಬಾರಿ: ಪಾರ್ಲೆ-ಜಿಯಿಂದ ಸೋಪ್‌ ತನಕ ಹೊಸ ವರ್ಷದಲ್ಲಿ ಈ ಗ್ರಾಹಕ ವಸ್ತುಗಳ ರೇಟ್‌ ಜಾಸ್ತಿ ಕಣ್ರೀ

Changes in New Year: ಜನವರಿ 1, 2025ರಿಂದ ಹಲವು ನಿಯಮಗಳು ಬದಲಾಗಲಿವೆ. ಇದರಿಂದ ವಿವಿಧ ವಸ್ತುಗಳ ದರದ ಮೇಲೆ ಪರಿಣಾಮ ಬೀರಲಿದೆ. ಕೆಲವು ವಸ್ತುಗಳ ದರ ಅಗ್ಗವಾದರೆ, ಇನ್ನು ಕೆಲವು ವಸ್ತುಗಳ ದರ ಇನ್ನಷ್ಟು ದುಬಾರಿಯಾಗಲಿದೆ.

ಪಾರ್ಲೆ-ಜಿಯಿಂದ ಸೋಪ್‌ ತನಕ ಹೊಸ ವರ್ಷದಲ್ಲಿ ಈ ಗ್ರಾಹಕ ವಸ್ತುಗಳ ದರ ಹೆಚ್ಚಳ
ಪಾರ್ಲೆ-ಜಿಯಿಂದ ಸೋಪ್‌ ತನಕ ಹೊಸ ವರ್ಷದಲ್ಲಿ ಈ ಗ್ರಾಹಕ ವಸ್ತುಗಳ ದರ ಹೆಚ್ಚಳ

ಜನವರಿ 1ರ ನಂತರ ದರ ಬದಲಾವಣೆಗಳು: ಹೊಸ ವರ್ಷದ ಆರಂಭದಿಂದ ಏನೆಲ್ಲ ಬದಲಾವಣೆಯಾಗಲಿದೆ ಎಂದು ಸಾಕಷ್ಟು ಜನರು ಕಾತರದಿಂದ ಕಾಯುತ್ತಿರಬಹುದು. ಖಂಡಿತಾ, ಈ ಸಮಯದಲ್ಲಿ ಸಾಕಷ್ಟು ಜನರು ಹೊಸ ಸಂಕಲ್ಪದಿಂದ ಹೊಸದಾಗಿ ಬದುಕು ರೂಪಿಸಲು ಪ್ರಯತ್ನಿಸಬಹುದು. ಆದರೆ, ಇದೇ ಸಮಯದಲ್ಲಿ ಜನರ ಕಿಸೆಗೆ ಹೊರೆಯಾಗಬಹುದಾದ ಅನೇಕ ಸಂಗತಿಗಳು ನಡೆಯಬಹುದು. ವಿಶೇಷವಾಗಿ ಗ್ರಾಹಕ ವಸ್ತುಗಳು ದುಬಾರಿಯಾಗುವ ಸೂಚನೆ ದೊರಕಿದೆ. ಎಫ್‌ಎಂಸಿಜಿ ವಲಯಕ್ಕೆ 2024 ವರ್ಷ ಒಂದಿಷ್ಟು ಸವಾಲಿನಿಂದ ಕೂಡಿತ್ತು. ವಿಶೇಷವಾಗಿ ಕಚ್ಚಾ ವಸ್ತುಗಳ ದರ ಹೆಚ್ಚಳದಿಂದಾಗಿ ಕಂಪನಿಗಳಿಗೆ ದರ ಹೆಚ್ಚಿಸುವಂತಹ ಅನಿವಾರ್ಯತೆ ಉಂಟಾಗಿದೆ. ತಾಳೆ ಎಣ್ಣೆ, ಕಾಫಿ, ಕೋಕೋ ಮುಂತಾದ ಕಮಾಡಿಟಿಗಳ ದರ ಹೆಚ್ಚಳದಿಂದಾಗಿ ವಿವಿಧ ವಸ್ತುಗಳ ದರವನ್ನು ಈಗಾಗಲೇ ಹೆಚ್ಚಿಸಿವೆ. ಜನವರಿ ಒಂದರಿಂದ ಇನ್ನಷ್ಟು ಗ್ರಾಹಕ ವಸ್ತುಗಳ ದರ ದುಬಾರಿಯಾಗಲಿದೆ.

ಮುಂಬರುವ ವಾರ್ಷಿಕ ಬಜೆಟ್‌ನಲ್ಲಿ ಎಫ್‌ಎಂಸಿಜಿ ವಲಯಕ್ಕೆ ಅನುಕೂಲಕರವಾದ ಕೊಡುಗೆಗಳು, ವಿನಾಯಿತಿಗಳು ದೊರಕುವುದೇ ಎಂಬ ನಿರೀಕ್ಷೆಯೂ ಇದೆ. ಇಲ್ಲವಾದರೆ ಮಧ್ಯಮ ಆದಾಯದ ಗುಂಪಿಗೆ ದರ ಹೆಚ್ಚಳವು ಹೊರೆಯಾಗುವ ಸಾಧ್ಯತೆಯಿದೆ. 2024ರಲ್ಲಿ ಆಹಾರ ಹಣದುಬ್ಬರ ಏರಿಕೆ ಕಂಡಿರುವುದು ಕೂಡ ದರ ಹೆಚ್ಚಳವನ್ನು ಅನಿವಾರ್ಯವಾಗಿಸಿದೆ. ಜನವರಿ 1ರಿಂದ ಯಾವೆಲ್ಲ ವಸ್ತುಗಳು ದುಬಾರಿಯಾಗಬಹುದು ಎಂದು ನೋಡೋಣ.

ಎಟಿಎಂ ಶುಲ್ಕ ಹೆಚ್ಚಳ

ಜನವರಿ 1ರಿಂದ ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವುದಕ್ಕೆ ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಬ್ಯಾಂಕ್‌ ಮತ್ತು ಎಟಿಎಂ ಆಪರೇಟರ್‌ಗಳು ಇಂತಹ ಒಂದು ಪ್ರಸ್ತಾಪ ಮಾಡಿದ್ದಾರೆ. ಈ ಕುರಿತಂತೆ ಏನಾದರೂ ಸಂದೇಹಗಳಿದ್ದರೆ ನಿಮ್ಮ ಬ್ಯಾಂಕ್‌ ಅನ್ನು ಸಂಪರ್ಕಿಸಿ.

ಮೊಬೈಲ್‌ ರೀಚಾರ್ಜ್‌ ಅಗ್ಗ

ಜನವರಿ 1ರಿಂದ ಮೊಬೈಲ್‌ ರೀಚಾರ್ಜ್‌ ದರ ಇಳಿಕೆ ಕಾಣುವ ಸಾಧ್ಯತೆಯಿದೆ. ಟ್ರಾಯ್‌ ಸೂಚನೆಯಿಂದಾಗಿ ಕೆಲವು ಪ್ಲ್ಯಾನ್‌ಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಇಂಟರ್‌ನೆಟ್‌ ಇಲ್ಲದ ಕಾಲ್‌ ಪ್ಲ್ಯಾನ್‌ಗಳನ್ನು ಪರಿಚಯಿಸುವಂತೆಯೂ ಸೂಚಿಸಲಾಗಿದೆ.

ಪಾರ್ಲೆ-ಜಿ ಬಿಸ್ಕೆಟ್‌ ದರ ದುಬಾರಿ

ಜನವರಿ 1ರಿಂದ ಪಾರ್ಲೆ-ಜಿ ಬಿಸ್ಕೆಟ್‌ ದರ ದುಬಾರಿಯಾಗಲಿದೆ. ಉತ್ಪಾದನೆ ವೆಚ್ಚ ಹೆಚ್ಚಾಗಿರುವ ಕಾರಣ ದುಬಾರಿಯಾಗಲಿದೆ. ಇದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಬದಲಾವಣೆಯಾಗುವ ಸೂಚನೆ ಇರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಳಿತವಾಗಬಹುದು.

ಸೋಪು ದುಬಾರಿ

ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಸೋಪು ದರ ಶೇಕಡ 7-8ರಷ್ಟು ಹೆಚ್ಚಾಗಲಿದೆ. ಇದು ಮಧ್ಯಮ ವರ್ಗಕ್ಕೆ ಹೆಚ್ಚು ಹೊರೆಯಾಗಲಿದೆ.

ಮದ್ಯ ದರ ದುಬಾರಿಯಾಗುವುದೇ?

ಕೆಲವೊಂದು ರಾಜ್ಯಗಳಲ್ಲಿ ಹೊಸ ವರ್ಷದಿಂದ ಮದ್ಯದ ದರ ದುಬಾರಿಯಾಗುವ ಸಾಧ್ಯತೆಯಿದೆ. ಸದ್ಯ ಕರ್ನಾಟಕ ಸರಕಾರ ಈ ಕುರಿತು ಯಾವುದೇ ಸೂಚನೆ ನೀಡದೆ ಇರುವುರಿಂದ ಮದ್ಯಪ್ರಿಯರು ನಿರಾಳವಾಗಿರಬಹುದು.

ಎಲ್‌ಪಿಜಿ, ಸಿಎನ್‌ಜಿ ದರ

ಜನವರಿ 1ರಿಂದ ಎಲ್‌ಪಿಜಿ ಮತ್ತು ಸಿಎನ್‌ಜಿ ದರ ಇಳಿಕೆಯಾಗುವ ಸೂಚನೆಯಿದೆ.

ಗ್ರಾಹಕ ವಸ್ತುಗಳು ದುಬಾರಿ

ಪ್ರತಿದಿನ ಬಳಸುವ ಎಫ್‌ಎಂಸಿಜಿ ಪ್ರಾಡಕ್ಟ್‌ಗಳು ದುಬಾರಿಯಾಗಲಿವೆ. ಬಿಸ್ಕೆಟ್‌, ಆಯಿಲ್‌, ಸೋಪುಗಳ ದರ ಜನವರಿ 1ರಿಂದ ದುಬಾರಿಯಾಗಲಿದೆ.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner