ಕನ್ನಡ ಸುದ್ದಿ  /  Karnataka  /  Cheater Sukesh Chandrashekar Luxury Cars Auction On November 28 Rolls Royce Jaguar Porsche Lamborghini And More Rmy

ರೋಲ್ಸ್ ರಾಯ್ಸ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ಲ್ಯಾಂಬೋರ್ಗಿನಿ; ನವೆಂಬರ್ 28 ರಂದು ವಂಚಕ ಸುಕೇಶ್ ಐಷಾರಾಮಿ ಕಾರುಗಳ ಹರಾಜು

ವಂಚಕ ಸುಕೇಶ್‌ಗೆ ಸೇರಿದ ಐಷಾರಾಮಿ ಕಾರುಗಳ ಹರಾಜು ಹಾಕಲಾಗುತ್ತಿದೆ. ಆರೋಪಿ ಕಾರುಗಳನ್ನ ಹೇಗೆ ಖರೀದಿಸಿದ, ಐಷಾರಾಮಿ ಜೀವನಕ್ಕೆ ಕಂಡುಕೊಂಡ ಮಾರ್ಗ ಯಾವುದು ಅನ್ನೋದರ ವಿವರ ಇಲ್ಲಿದೆ.

ಇ-ಹರಾಜಿಗೆ ಇಡಲಾಗಿರುವ ವಂಚಕ ಸುಕೇಶ್‌ಗೆ ಸೇರಿದ ಐಷಾರಾಮಿ ಕಾರುಗಳು
ಇ-ಹರಾಜಿಗೆ ಇಡಲಾಗಿರುವ ವಂಚಕ ಸುಕೇಶ್‌ಗೆ ಸೇರಿದ ಐಷಾರಾಮಿ ಕಾರುಗಳು

ಬೆಂಗಳೂರು: ಕೇಂದ್ರ ಸರ್ಕಾರದ ಅಧಿಕಾರಿ ಎಂದು ನಂಬಿಸಿ ಉದ್ಯಮಿಗಳಿಗೆ ನೂರಾರು ಕೋಟಿ ವಂಚನೆ ಮಾಡಿ ದೆಹಲಿ ಜೈನಲ್ಲಿರುವ ವಂಚನ ಸುಕೇಶ್ ಚಂದ್ರಶೇಖರ್‌ಗೆ ಸೇರಿದ ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಆದಾಯ ತೆರಿಗೆ ಅಧಿಕಾಗಳು ಮುಂದಾಗಿದ್ದಾರೆ.

ಬೆಂಗಳೂರು ಕೇಂದ್ರ ವಲಲಯದ ಆದಾಯ ತೆರಿಗೆ ಇಲಾಖೆಯ ಆವರಣದಲ್ಲಿ ನಿಲ್ಲಿಸಿರುವ ಸುಕೇಶ್‌ಗೆ ಸೇರಿದ ರೋಲ್ಸ್ ರಾಯ್ಸ್ ಘೋಸ್ಟ್, ಬೆಂಟ್ಲಿ ಬೈಂಟೈಗಾ, ಫೆರಾರಿ 458 ಇಟಾಲಿಯಾ, ಲಂಬೋರ್ಗಿನಿ ಉರಸ್, ಎಸ್ಕಲೇಡ್, ಮರ್ಸಿಡ್ಸ್ ಎಎಂಜಿ, ಜಾಗ್ವಾರ್, ರೇಂಜ್ ರೋವರ್, ಪೋರ್ಷೆ, ಡುಕಾಟಿ ಡಿಯಾವೆಲ್ ಸೇರಿದಂತೆ 11 ಕಾರುಗಳು ಮತ್ತು ಒಂದು ಡುಕಾಟಿ ಬೈಕ್‌ ಅನ್ನು ನವೆಂಬರ್ 28 ರಂದು ಇ-ಹರಾಜಿಗೆ ಇಲಾಡಲಾಗಿದೆ. ಅಧಿಕಾರಿಗಳು 2017 ರಿಂದ ವಶಪಡಿಸಿಕೊಂಡಿದ್ದ ಕಾರುಗಳು ಬೆಂಗಳೂರಿನ ಐಟಿ ಕಚೇರಿಯ ಆವರಣದಲ್ಲೇ ಇವೆ. ಎಲ್ಲಾ ವಾಹನಗಳು ಉತ್ತಮ ಕಂಡಿಷನ್‌ನಲ್ಲಿ ಇವೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ಹರಾಜಿನಲ್ಲಿ ಯಾವ ಕಾರಿಗೆ ಎಷ್ಟು ಬೆಲೆ

ರೋಲ್ಸ್ ರಾಯ್ ಫೋಸ್ಟ್ ಕಾರು ದೆಹಲಿ ನೋಂದಣಿಯಾಗಿದ್ದು, ಹರಾಜಿನಲ್ಲಿ ಇದರ ಕನಿಷ್ಠ ಬೆಲೆ 1.74 ಕೋಟಿ ರೂಪಾಯಿ ಇರಲಿದೆ. ದೆಹಲಿ ನೋಂದಣಿಯ ಬೆಂಟ್ಲಿ ಕಾರಿನ ಆರಂಭಿಕ ಹರಾಜು ಬೆಲೆ 83.35 ಲಕ್ಷ ರೂಪಾಯಿ, ತಮಿಳುನಾಡು ನೋಂದಣಿಯ ರೇಂಜ್ ರೋವರ್‌ಗೆ 44.43 ಲಕ್ಷ, ದೆಹಲಿ ನೋಂದಣಿಯ ಲಂಬೋರ್ಗಿನಿಗೆ 38.52 ಲಕ್ಷ, ಪಾಂಡಿಚೇರಿ ನೋಂದಣಿಯ ಜಾಗ್ವಾರ್ ಕೂಪೆಗೆ 31.07 ಲಕ್ಷ, ತಮಿಳುನಾಡು ನೋಂದಣಿಯ ಟೊಯೊಟಾ ಪ್ರಾಡೊಗೆ 22.5 ಲಕ್ಷ ರೂ, ಪಾಂಡಿಚೇರಿ ನೆೋಂದಣಿಯ ಬಿಎಂಡಬ್ಲ್ಯೂ ಎಂ5ಗೆ 18.79 ಲಕ್ಷ, ತಮಿಳುನಾಡು ನೋಂದಣಿಯ ಟೊಯೊಟಾ ಫಾರ್ಚುನರ್‌ಗೆ 15.31 ಲಕ್ಷ , ತಮಿಳುನಾಡು ನೋಂದಣಿಯ ನಿಸ್ಸಾನ್ ಟೀನಾಗೆ 2.03, ಪಶ್ಚಿಮ ಬಂಗಾಳ ನೋಂದಣಿಯ ಪೋರ್ಷೆಗೆ 5.08 ಲಕ್ಷ, ಒಡಿಶಾ ನೋಂದಣಿಯ ಡುಕಾಟಿ ಡಯಾವೆಲ್ ಬೈಕ್‌ಗೆ 3.56 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ಆರೋಪಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು

ಮಹಾನ್ ವಂಚಕ ಸುಕೇಶ್ ಚಂದ್ರಶೇಖರ್ ಬಾಲಿವುಡ್‌ನ ಕೆಲ ತಾರೆಯರಿಗೆ ಐಷಾರಾಮಿ ಉಡುಗೊರೆಗಳನ್ನು ನೀಡಿದ್ದಾರೆ. ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ ಅವರಂತಹ ನಟಿಯರಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಚೆನ್ನೈನಲ್ಲಿ ಬೀಜ್ ಮನೆ, ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾನೆ. ಇದಕ್ಕಾಗಿ ರ್ಯಾನ್‌ಬ್ಯಾಕ್ಸಿ ಔಷಧಿ ಉತ್ಪಾದನಾ ಕಂಪನಿಯ ಪ್ರವರ್ತಕರಿಗೆ ಜಾಮೀನು ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾನೆ. ಬಳಿಕ ಈ ಅಕ್ರಮ ಹಣವನ್ನು ಐಷಾರಾಮಿ ಜೀವನಕ್ಕೆ ಬಳಿಸಿಕೊಂಡಿದ್ದಾನೆ.

ಡಿಎಂಕೆ ನಾಯಕ ದಿವಂಗತ ಎಂ ಕರುಣಾನಿಧಿ ಅವರ ಮೊಮ್ಮಗ, ಕೇಂದ್ರ ಮಾಜಿ ಸಚಿವ ಆರ್ ಬಾಲುವ, ಕರ್ನಾಟಕದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರ ಮಗ, ಆಂಧ್ರ ಮಾಜಿ ಸಿಎಂ ವೈಎಸ್‌ ರಾಜಶೇಖರ್ ರೆಡ್ಡಿ ಅವರ ಸೋದರಳಿಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಾರ್ಯದರ್ಶಿ ಎಂದು ಹೇಳಿಕೊಂಡು ದೊಡ್ಡ ಶ್ರೀಮಂತರನ್ನೇ ಮೋಸ ಮಾಡಿದ್ದಾನೆ.

37 ವರ್ಷದ ಆರೋಪಿ ಸುಕೇಶ್ ಓದಿರೋದು ಕೇವಲ ಎಸ್‌ಎಸ್‌ಎಲ್‌ಎಲ್‌ಸಿ ಮಾತ್ರ ಕಾಲೇಜು ಡ್ರಾಪ್‌ಔಟ್ ಆಗಿದ್ದ ಈತ ತುಂಬಾ ಆಡಂಬರದ ಜೀವನ ಮಾಡಬೇಕು ಎಂದು ನಿರ್ಧಾರ ಮಾಡುತ್ತಾನೆ. ಇದಕ್ಕಾಗಿ ನಾನಾ ವೇಷಗಳನ್ನು ಹಾಕುತ್ತಾನೆ. ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳು ನನ್ನ ಸಂಪರ್ಕದಲ್ಲಿದ್ದಾರೆ ನಿಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಎಂದು ಜನರನ್ನು ಮೋಸಮಾಡುವ ಅಡ್ಡದಾರಿಗೆ ಇಳಿದಿದ್ದಾನೆ.

ಐಟಿ ಅಧಿಕಾರಿಗಳಿಗೆ ಸುಕೇಶ್ ಸಿಕ್ಕಿಹಾಕಿಕೊಂಡಿದ್ದೇ ರೋಚಕ

ತಮಿಳುನಾಡಿನ ಟಿಟಿವಿ ದಿನಕರನ್ ನೇತೃತ್ವದ ಬಣಕ್ಕೆ ಎಐಎಡಿಎಂಕೆ ಚುನಾವಣಾ ಚಿಹ್ನೆಯನ್ನು ಪಡೆಯಲು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡುವುದಕ್ಕಾಗಿ 5 ಕೋಟಿ ಹಣ ಪಡೆದಿರುವುದು ಬಹಿರಂಗವಾಗಿತ್ತು. 2017ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಆರೋಪಿ ಈ ಅಕ್ರಮ ಹಣದಿಂದ ಐಶಾರಾಮಿ ಕಾರು ಖರೀದಿಸಿರೋದು ಕಂಡುಬಂದಿತ್ತು.

ಇದೇ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದಲ್ಲಿ ಸುಕೇಶ್‌ನ ಸಹವರ್ತಿ ಕೊಚ್ಚಿಯ ನವಾಸ್ ಎಂಬಾತನ ಪಾತ್ರವು ಬಹಿರಂಗವಾಗಿತ್ತು. ಈತನ ಜಾಡು ಹಿಡಿದು ಹೊರಟಾಗ ಬೆಂಟ್ಲಿ ಮತ್ತು ಜಾಗ್ವಾರ್ ಕಾರುಗಳನ್ನು ಪತ್ತೆಯಾಗಿದ್ದವು. ಬಳಿಕ ಇವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಚ್ಚಿಯ ಖಾಸಗಿ ಆಸ್ತಿಯಲ್ಲಿ ಸುಕೇಶ್‌ಗೆ ಸೇರಿ ಇನ್ನೂ ಆರು ಕಾರುಗಳು ಮತ್ತು ಬೈಕ್ ಪತ್ತೆಯಾಗಿತ್ತು.

ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿ ಬಿಡುಗಡೆಯಾದ ಬಳಿಕವೂ ತಮ್ಮ ವಂಚನೆಯ ಕೃತ್ಯವನ್ನು ಮುಂದುವರಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಹಲವೆಡೆಗೆ ವಿಸ್ತರಿಸಿಕೊಂಡಿದ್ದರು. ಸದ್ಯ ಆರೋಪಿ ಸುಕೇಶ್ 200 ಕೋಟಿ ರೂಪಾಯಿಗಳ ಸುಲಿಗೆ ಪ್ರಕರಣದಲ್ಲಿ ದೆಹಲಿಯ ರೋಹಿಣಿ ಜೈಲಿನಲ್ಲಿದ್ದಾನೆ.