ಎಫ್ಐಆರ್​​ಗೆ ಸಿಎಂ ಪ್ರತಿಕ್ರಿಯೆ; ಹೆಚ್​ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ-chief minister siddaramaiah first reaction on fir being registered in mysuru lokayukta for muda site scam prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಎಫ್ಐಆರ್​​ಗೆ ಸಿಎಂ ಪ್ರತಿಕ್ರಿಯೆ; ಹೆಚ್​ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ

ಎಫ್ಐಆರ್​​ಗೆ ಸಿಎಂ ಪ್ರತಿಕ್ರಿಯೆ; ಹೆಚ್​ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ

CM Siddaramaiah: 17ಎ ಪ್ರಕಾರ ತನಿಖೆ ಮಾಡಿ ವರದಿ ಕೊಡಿ ಎಂದು ಕೋರ್ಟ್ ಹೇಳಿದೆ‌. ಅದರ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೇಲೂ ಎಫ್‌ಐಆರ್ ಆಗಿದೆ. ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡ್ತಾ ಇದ್ದರು. ಈಗ ಎಫ್‌ಐಆರ್ ಆದ ಮೇಲೆ ಅವರು ರಾಜೀನಾಮೆ ಕೊಡ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)

ಮೈಸೂರು: ಮುಡಾ ಸೈಟ್​ ಹಗರಣಕ್ಕೆ (MUDA Land Scam) ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಹೌದಪ್ಪ, 17ಎ ಪ್ರಕಾರ ತನಿಖೆ ಮಾಡಿ ವರದಿ ಕೊಡಿ ಎಂದು ಕೋರ್ಟ್ ಹೇಳಿದೆ‌. ಅದರ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೇಲೂ ಎಫ್‌ಐಆರ್ ಆಗಿದೆ. ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡ್ತಾ ಇದ್ದರು. ಈಗ ಎಫ್‌ಐಆರ್ ಆದ ಮೇಲೆ ಅವರು ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದ್ದಾರೆ.

ನನ್ನ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಹೇಳಿದೆ. ಮೊದಲು ಹೆಚ್​​ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಅವರನ್ನು ಕೆಳಗಿಳಿಸಲಿ. ಆ ಮೇಲೆ ಅವರು ನನ್ನನ್ನು ಕೇಳಲಿ. ಮೋದಿ‌ ಅವರೂ ರಾಜೀನಾಮೆ ನೀಡಬೇಕು. ಅವರು ಚುನಾವಣೆ ಬಾಂಡನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ಕೆಡಿಪಿ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಯ ಕುರಿತು ಮಾತನಾಡಿದ್ದಾರೆ. ಬಹಳ ದಿನಗಳ ನಂತರ ಕೆಡಿಪಿ ಮೀಟಿಂಗ್ ಮಾಡಿದ್ದೇನೆ. ಬಹುತೇಕ ಎಲ್ಲ ಇಲಾಖೆಯ ರಿವ್ಯೂ ಮಾಡಿದ್ದೇನೆ. ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಬೇಕಿತ್ತು. ಇದುವರೆಗೂ ತಮಿಳುನಾಡಿಗೆ 207 ಟಿಎಂಸಿ ನೀರು ಹರಿದಿದೆ ಎಂದು ಹೇಳಿದ್ದಾರೆ.

ದಸರಾದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದ ಸಿದ್ದರಾಮಯ್ಯ

ಈ ವರ್ಷ ತಮಿಳುನಾಡು ನಮ್ಮ ನಡುವೆ ಸಮಸ್ಯೆ ಇರಲ್ಲ. ದಸರಾವನ್ನು ಅಚ್ಚುಕಟ್ಟಾಗಿ ಮಾಡಲು ಅಧಿಕಾರಿಗಳಿಗೆ ಹೇಳಿದ್ದೇನೆ. ನಗರದ ರಸ್ತೆಗಳ ಅಭಿವೃದ್ದಿಗೆ ಸೂಚಿಸಿದ್ದೇನೆ. ದಸರಾ ಪ್ರಯುಕ್ತ ವಿದ್ಯುತ್ ದೀಪಾಲಂಕಾರ ಆರಂಭಿಸಲು ರೆಡಿಯಾಗಿದ್ದೇವೆ. ಪೊಲೀಸರ ಫೆಲ್ಯೂರ್ ನಿಂದ ನಾಗಮಂಗಲದಲ್ಲಿ ಗಲಾಟೆ ನಡೆಯಿತು. ಆ ರೀತಿ ಘಟನೆ ಮೈಸೂರಲ್ಲಿ ಆಗದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕ್ಲಬ್ ಗಳಲ್ಲಿ ಡ್ರಗ್ಸ್ ಮತ್ತು ಗಾಂಜಾ ತಡೆಯಲು ಹೇಳಿದ್ದೇನೆ. ಯುವ ಸಮೂಹ ಹೆಚ್ಚು ಅದರಿಂದ ಬಲಿಯಾಗ್ತಿದೆ. ಸರ್ಕಾರಿ ಜಮೀನು ಉಳಿಸುವ ಜೊತೆಗೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಒತ್ತುವರಿ ತೆರವು ಮಾಡಿ ಕೆರೆಗಳ ಅಭಿವೃದ್ದಿಗೆ ಒತ್ತು ನೀಡಲು ತಿಳಿಸಿದ್ದೇನೆ. ಅಕ್ಟೋಬರ್ 2ನೇ ತಾರೀಖು ಮೈಸೂರಿಗೆ ಬರುತ್ತೇನೆ. 3ರಂದು ದಸರಾ ಉದ್ಘಾಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.

ಅಕ್ಟೋಬರ್ 3ರಂದು ದಸರಾದ ಹಲವು ಕಾರ್ಯಕ್ರಮ ಉದ್ಘಾಟನೆಯಾಗಲಿವೆ. ಈ ವರ್ಷದ ಹಂಪ ನಾಗರಾಜಯ್ಯ ದಸರಾ ಉದ್ಘಾಟಿಸುತ್ತಾರೆ. ನಾನು ಕೂಡ ದಸರಾದಲ್ಲಿ ಭಾಗವಹಿಸಲಿದ್ದೇನೆ. ದಸರಾ ಜನರ ಉತ್ಸವದ ರೀತಿ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಕೃಷಿ ಇಲಾಖೆಯಲ್ಲಿ ಶೇ 98ರಷ್ಟು ಸಾಧನೆಯಾಗಿದೆ. ಕೆಲವೆಡೆ ಮಳೆಯಾಗಿಲ್ಲ. ಮತ್ತೆ ಮಳೆ ಬರುತ್ತೇ ಎಂಬ ನಂಬಿಕೆ ಇದೆ. ಬೆಳೆಗಳಿಗೆ ಯಾವುದೇ ರೋಗಗಳು ಇಲ್ಲ. ಖುಷ್ಕಿ ಬೆಳೆಗೆ ಮಳೆ ಇಲ್ಲದೇ ಹೊಡೆತ ಬಿದ್ದಿದೆ. ಮಳೆ‌ ಕಡಿಮೆ ಆಗಿರುವ ಕಾರಣ ರಾಗಿ ಬೆಳೆಗೆ ತೊಂದರೆಯಾಗಿದೆ. ಭತ್ತ, ಕಬ್ಬು ಬೆಳೆಗೆ ಯಾವುದೇ ತೊಂದರೆ‌ ಇಲ್ಲ ಎಂದಿದ್ದಾರೆ.

mysore-dasara_Entry_Point