Chikkaballapur News: ಭೋಗನಂದೀಶ್ವರ ದೇಗುಲದಲ್ಲಿ ದೀಪ ಹಚ್ಚುವೆ, ಅವರೂ ದೀಪ ಹಚ್ಚಲಿ; ಪ್ರದೀಪ್ ಈಶ್ವರ್‌ಗೆ ಡಾ ಕೆ ಸುಧಾಕರ್ ನೇರ ಸವಾಲ್
Chikkaballapur News: ಹಿಂದಿನ ಬಿಜೆಪಿ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಾಗಿ, ನಾಯಕರಾಗಿ ಗುರುತಿಸಿಕೊಂಡಿದ್ದ ಡಾ.ಕೆ. ಸುಧಾಕರ್, ಕೊನೆಗೂ ಮೌನ ಮುರಿದಿದ್ದಾರೆ. ಹಾಲಿ ಶಾಸಕ ಪ್ರದೀಪ್ ಈಶ್ವರ್‌ಗೆ ಭೋಗನಂದೀಶ್ವರ ದೇಗುಲಕ್ಕೆ ದೀಪ ಹಚ್ಚಲು ಬರುವಂತೆ ಸವಾಲು ಎಸೆದು ಗಮನಸೆಳೆದಿದ್ದಾರೆ.
ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ, ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಸುಧಾಕರ್ ಕೊನೆಗೂ ಮೌನ ಮುರಿದಿದ್ದಾರೆ. ಹಾಲಿ ಶಾಸಕ ಪ್ರದೀಪ್ ಈಶ್ವರ್‌ಗೆ ಭೋಗನಂದೀಶ್ವರ ದೇಗುಲಕ್ಕೆ ದೀಪ ಹಚ್ಚಲು ಬರುವಂತೆ ಸವಾಲು ಎಸೆದು ಗಮನಸೆಳೆದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಾಗಿ, ನಾಯಕರಾಗಿ ಗುರುತಿಸಿಕೊಂಡಿದ್ದ ಡಾ.ಕೆ. ಸುಧಾಕರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿ ಮೌನಕ್ಕೆ ಶರಣಾಗಿದ್ದರು. ಡಾ.ಕೆ. ಸುಧಾಕರ್ ಅವರನ್ನು ಸೋಲಿಸಿ ಜೇಂಟ್ ಕಿಲ್ಲರ್ ಎನಿಸಿಕೊಂಡಿದ್ದ ಪ್ರದೀಪ್ ಈಶ್ವರ್, ಕ್ಷೇತ್ರದಲ್ಲಿ 555 ಎಕರೆ ಜಮೀನನ್ನು 22,000 ಸೈಟ್‌ಗಳನ್ನಾಗಿ ಮಾಡಿ ಅನೇಕರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಒಂದು ಹಂತದಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದ ಡಾ.ಕೆ.ಸುಧಾಕರ್ ಬಳಿಕ ಮೌನವಾಗಿದ್ದರು.
ಆದರೆ, ಇಂದು (ಜುಲೈ 3) ಮತ್ತೆ ಮಾತನಾಡಿರುವ ಡಾ.ಕೆ.ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಎಲ್ಲ ಕಾಲಕ್ಕೂ ಸಿನಿಮಾ ಡೈಲಾಗ್ ವರ್ಕ್‌ಔಟ್ ಆಗಲ್ಲ…
ಒಂದು ಸಲ, ಎರಡು ಸಲ ಸಿನಿಮಾ ಡೈಲಾಗ್ ಹೇಳಿ ಜನರನ್ನು ಮೆಚ್ಚಿಸಬಹುದು. ಆದರೆ, ವಾಸ್ತವ ಏನು ಎಂಬುದು ಬಹುಬೇಗ ಜನರಿಗೆ ಅರ್ಥವಾಗಿ ಬಿಡುತ್ತದೆ. ಹಕ್ಕುಪತ್ರ ಮಂಜೂರಾತಿ ಪತ್ರದ ವಿಚಾರವಾಗಿ ಪ್ರದೀಪ್ ಈಶ್ವರ್ ಸುಳ್ಳು ಹೇಳಿದ್ದಾರೆ. ಹಕ್ಕು ಪತ್ರ ಎಂದರೇನು? ಮಂಜೂರಾತಿ ಪತ್ರ ಎಂದರೇನು? ಹಕ್ಕು ಪತ್ರ ಯಾವಾಗ ಕೊಡ್ತಾರೆ? ಮಂಜೂರಾತಿ ಪತ್ರ ಯಾವಾಗ ಕೊಡ್ತಾರೆ? ಎಂಬ ಬೇಸಿಕ್ ಸೆನ್ಸ್ ಇಲ್ಲದ ವ್ಯಕ್ತಿ ಪ್ರದೀಪ್ ಈಶ್ವರ್ ಎಂದು ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.
ಸಿನಿಮಾ ಡೈಲಾಗ್ ಹೊಡ್ಕೊಂಡು ಹೋದರೆ ರಾಜಕಾರಣ ಆಗಲ್ಲ. ಈ ರೀತಿ ಮಾಡುವ ಮೂಲಕ ಒಂದು ಸಲ ಜನರನ್ನು ಯಾಮಾರಿಸಬಹುದು, ಎರಡು ಸಲ ಯಾಮಾರಿಸಬಹುದು. ಆದರೆ, ಪದೇಪದೆ ಯಾಮಾರಿಸುವುದು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು. ಜನರಿಗೆ ಈಗ ಬುದ್ಧಿ ಬರ್ತಾ ಇದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಭೋಗನಂದೀಶ್ವರ ದೇಗುಲದಲ್ಲಿ ದೀಪ ಹಚ್ಚುವೆ, ಅವರೂ ದೀಪ ಹಚ್ಚಲಿ
ಶಾಸಕ ಪ್ರದೀಪ್ ಈಶ್ವರ್ ಅವರು 555 ಎಕರೆ ಪ್ರದೇಶದಲ್ಲಿ 22,000 ಸೈಟ್‌ಗಳ ನಿರ್ಮಾಣ, ಹಕ್ಕು ಪತ್ರ ಎಂಬಿತ್ಯಾದಿ ಮಾತುಗಳನ್ನಾಡಿದ್ದಾರೆ. ನನಗೆ ನಮ್ಮವರನ್ನು ವಂಚಿಸಿ ಆಗಬೇಕಾದ್ದು ಏನೂ ಇಲ್ಲ. ನಾನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ನಾನು ಸುಳ್ಳು ಹೇಳಿದ್ದು ಹೌದೇ ಆದರೆ, ವಂಚಿಸಿದ್ದು ನಿಜವೇ ಆದರೆ, ಸಿಂಪಲ್ಲಾಗಿ ಬಗೆಹರಿದು ಬಿಡಲಿ. ನಾನು ಬೇರೆಲ್ಲೂ ಹೋಗಲ್ಲ. ಭೋಗನಂದೀಶ್ವರ ದೇಗುಲಕ್ಕೆ ಹೋಗುತ್ತೇನೆ. ಅಲ್ಲಿ ದೀಪ ಹಚ್ಚುತ್ತೇನೆ. ಆರೋಪ ಮಾಡಿದ ಅವರೂ ಬರಲಿ ದೀಪ ಹಚ್ಚಲಿ ಎಂದು ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ಗೆ ನೇರ ಸವಾಲು ಹಾಕಿದ್ಧಾರೆ.
ಗಮನಿಸಬಹುದಾದ ಸುದ್ದಿಗಳು
Bengaluru Opposition Meet: ಜುಲೈ 17,18 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಪ್ರತಿಪಕ್ಷಗಳ ಮುಂದಿನ ಸಭೆ; ಕಾಂಗ್ರೆಸ್ ಘೋಷಣೆ
Dakshina Kannada News: ಕಾಂಗ್ರೆಸ್ ಘೋಷಿಸಿದ್ದ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಗೆ ಬಜೆಟ್ನಲ್ಲಿ ಜಾಗ ಸಿಗಬಹುದೇ?
Community Radio: ಕರ್ನಾಟಕ ಬಜೆಟ್ನಲ್ಲಿ ಸಮುದಾಯ ಬಾನುಲಿಗೂ ಪಾಲಿರಲಿ; ಡಾ ರಶ್ಮಿ ಅಮ್ಮೆಂಬಳ ಮನವಿ