ಕನ್ನಡ ಸುದ್ದಿ  /  ಕರ್ನಾಟಕ  /  Gauribidanur Crime: ಗೌರಿಬಿದನೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಜಿಪುಣ ಗಂಡನ ಮೇಲೆ ಅನುಮಾನ

Gauribidanur Crime: ಗೌರಿಬಿದನೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಜಿಪುಣ ಗಂಡನ ಮೇಲೆ ಅನುಮಾನ

Chikkaballapura News: ಗಂಗಾನಗರದಲ್ಲಿ ವಾಸವಾಗಿದ್ದ ಲಕ್ಷ್ಮಿದೇವಿ ಎಂಬವರು ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರ ಮನೆ ಹೊರಗೆ ಕೆಟ್ಟ ವಾಸನೆ ಬಂದಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಮನೆಯ ಕಿಟಕಿಯಲ್ಲಿ ಇಣುಕಿ ನೋಡಿದಾಗ ರೂಮಿನ ಮಂಚದ ಮೇಲೆ ಲಕ್ಷ್ಮಿದೇವಿ ಅವರ ಶವ ಕಾಣಿಸಿದೆ.

ಲಕ್ಷ್ಮಿದೇವಿ - ಕೃಷ್ಣಪ್ಪ ದಂಪತಿ
ಲಕ್ಷ್ಮಿದೇವಿ - ಕೃಷ್ಣಪ್ಪ ದಂಪತಿ

ಗೌರಿಬಿದನೂರು ( ಚಿಕ್ಕಬಳ್ಳಾಪುರ): ಒಡವೆ ವಿಚಾರಕ್ಕೆ ಗಂಡ ಹೆಂಡತಿ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಅನುಮಾನ ಮೂಡಿಸುವ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ (Gauribidanur) ಗಂಗಾನಗರದಲ್ಲಿ ನಡೆದಿದೆ. ಘಟನೆಯ ವಿವರ ಇಲ್ಲಿದೆ ನೋಡಿ..

ಗಂಗಾನಗರದಲ್ಲಿ ವಾಸವಾಗಿದ್ದ ಲಕ್ಷ್ಮಿದೇವಿ ಎಂಬವರು ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರ ಮನೆ ಹೊರಗೆ ಕೆಟ್ಟ ವಾಸನೆ ಬಂದಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಮನೆಯ ಕಿಟಕಿಯಲ್ಲಿ ಇಣುಕಿ ನೋಡಿದಾಗ ರೂಮಿನ ಮಂಚದ ಮೇಲೆ ಲಕ್ಷ್ಮಿದೇವಿ ಅವರ ಶವ ಕಾಣಿಸಿದೆ. ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಲಕ್ಷ್ಮಿದೇವಿ ಮೃತಪಟ್ಟಿದ್ದಾರೆ.

ತಕ್ಷಣವೇ ಸ್ಥಳೀಯರು ಲಕ್ಷ್ಮಿದೇವಿ ಅವರ ಮಕ್ಕಳಿಗೆ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಗೌರಿಬಿದನೂರು ನಗರಠಾಣೆ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್ ನಾಗೇಶ್​ ಅವರು ಪರಿಶೀಲನೆ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಂದಹಾಗೆ, ಲಕ್ಷ್ಮಿದೇವಿ ಅವರ ಪತಿ ಕೃಷ್ಣಪ್ಪ (53) ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಆರ್ಥಿಕವಾಗಿ ಯಾವುದಕ್ಕೂ ಕಮ್ಮಿ ಇರಲಿಲ್ಲ ಈ ದಂಪತಿಗೆ. ಆದರೆ ಈ ಕೃಷ್ಣಪ್ಪ ತುಂಬಾ ಜಿಪುಣ. ಪತ್ನಿ ಮತ್ತು ಮಕ್ಕಳ ಖರ್ಚಿಗೆ ದುಡ್ಡು ಕೊಡ್ತಾ ಇರಲಿಲ್ಲ. ಅವರ ಚಿನ್ನಾಭರಣಗಳನ್ನು ಬಳಸಲು ಬಿಡ್ತಾ ಇರಲಿಲ್ಲ. ಅವನ್ನೆಲ್ಲಾ ಬೀರುವಿನಲ್ಲಿ ಲಾಕ್​ ಮಾಡಿ ಇಟ್ಟಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು.

ಮೇ 19 ರಂದು ಲಕ್ಷ್ಮಿದೇವಿ ಅವರ ಮಕ್ಕಳು ಮನೆಗೆ ಬಂದಿದ್ದರು. ಈ ವೇಳೆ ಒಡವೆ ವಿಚಾರಕ್ಕೆ ಕೃಷ್ಣಪ್ಪ ಮಚ್ಚಿನಿಂದ ಹೆಂಡತಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದ. ಇದನ್ನು ತಡೆದ ಮಕ್ಕಳು ಅಪ್ಪನಿಗೆ ಬುದ್ಧಿ ಹೇಳಿ ಹೋಗಿದ್ದಾರೆ. ಆದರೆ ಇದೀಗ ಲಕ್ಷ್ಮಿದೇವಿ ಹೆಣವಾಗಿದ್ದಾರೆ. ಇತ್ತ ಕೃಷ್ಣಪ್ಪ ತನ್ನ ಮೊಬೈಲ್​ ಅನ್ನು ಮಂಚದ ಮೇಲೆಯೇ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಜಿಪುಣ ಗಂಡನೇ ಹೆಂಡತಿಯನ್ನು ಕೊಂದಿದ್ದಾನೆ ಎಂದು ಕುಟುಂಬಸ್ಥರಲ್ಲಿ ಅನುಮಾನ ಮೂಡಿದೆ.

ಕೃಷ್ಣಪ್ಪನ ವಿರುದ್ಧ ಅವರ ಮಗಳು ಲೀಲಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಕೃಷ್ಣಪ್ಪನಿಗಾಗಿ ಬಲೆ ಬೀಸಿದ್ದಾರೆ.

ತನ್ನ ತಂದೆಯನ್ನೇ ಕೊಲ್ಲಲು ಮಗಳು ಸುಪಾರಿ ಕೊಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ಆಕೆಯ ಅಪ್ಪನನ್ನು ಹಂತಕರು 15 ಬಾರಿ ಇರಿದು ಕೊಂದಿದ್ದಾರೆ. ಅಪ್ಪನನ್ನು ಕೊಲ್ಲಲು ನಿಯೋಜಿಸಿದ ಬಾಡಿಗೆ ಹಂತಕರಿಗೆ ಪ್ರಿಯಾ 5 ಲಕ್ಷ ರೂಪಾಯಿ ಹಣ ನೀಡಿದ್ದಳು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ