ಕನ್ನಡ ಸುದ್ದಿ  /  Karnataka  /  Chikkamagaluru Habba: Three Days Chikkamagaluru Habba Will Be Celebrated In February 2023 Pre Orgnaising Committee Meeting At Vikasa Soudha

Chikkamagaluru Habba: ಫೆಬ್ರವರಿಯಲ್ಲಿ ಚಿಕ್ಕಮಗಳೂರು ಹಬ್ಬ; ಮೂರು ದಿನಗಳ ಸಂಭ್ರಮ

Chikkamagaluru Habba 2023: ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಹಬ್ಬವನ್ನು ಆಚರಿಸಲು ತಿರ್ಮಾನಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಸಭೆ ನಡೆಯಿತು.

ಚಿಕ್ಕಮಗಳೂರು ಹಬ್ಬ 2023ರ ಆಯೋಜನೆಗೆ ಸಂಬಂಧಿಸಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ), ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೃಷಿ ಸಚಿವ ಬಿ.ಸಿ.ಪಾಟೀಲ, ತೋಟಗಾರಿಕೆ, ಯೋಜನೆ ‌ಮತ್ತು ಸಾಂಖ್ಯಿಕ ಸಚಿವ ಮುನಿರತ್ನ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಚಿಕ್ಕಮಗಳೂರು ಹಬ್ಬ 2023ರ ಆಯೋಜನೆಗೆ ಸಂಬಂಧಿಸಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ), ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೃಷಿ ಸಚಿವ ಬಿ.ಸಿ.ಪಾಟೀಲ, ತೋಟಗಾರಿಕೆ, ಯೋಜನೆ ‌ಮತ್ತು ಸಾಂಖ್ಯಿಕ ಸಚಿವ ಮುನಿರತ್ನ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಬೆಂಗಳೂರು: ಚಿಕ್ಕಮಗಳೂರಿಗೆ ಸಂಬಂಧಿಸಿದ ಮಹತ್ವದ ಸುದ್ದಿ ಇದು. ಮುಂದಿನ ಅಂದರೆ 2023 ರ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಹಬ್ಬವನ್ನು ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

ಚಿಕ್ಕಮಗಳೂರು ಹಬ್ಬ 2023ರ ಆಯೋಜನೆಗೆ ಸಂಬಂಧಿಸಿ ಬೆಂಗಳೂರಿನ ವಿಕಾಸ ಸೌಧದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ), ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕೃಷಿ ಸಚಿವ ಬಿ.ಸಿ.ಪಾಟೀಲ, ತೋಟಗಾರಿಕೆ, ಯೋಜನೆ ‌ಮತ್ತು ಸಾಂಖ್ಯಿಕ ಸಚಿವ ಮುನಿರತ್ನ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಮೂರು ದಿನ ಹಬ್ಬಕ್ಕೆ ಹಲವು ರೀತಿಯ ಸಲಹೆ ಸೂಚನೆಗಳು ಬಂದಿವೆ. ಅವೆಲ್ಲವನ್ನೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಹಾಗೂ ಪರಿಣತರನ್ನು ಒಳಗೊಂಡ ಸಂಘಟನಾ ಸಮಿತಿ ಪರಿಶೀಲಿಸಿ ಕಾರ್ಯಕ್ರಮಕ್ಕೆ ಅಂತಿಮ ರೂಪು ರೇಷೆ ನೀಡಲು ಮುಂದಾಗಿದೆ.

ಚಿಕ್ಕಮಗಳೂರು ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ, ಧಾರ್ಮಿಕ ಹಾಗೂ ಯಾತ್ರಾಸ್ಥಳ ವಾಗಿರುತ್ತದೆ. ತನ್ನದೇ ಆದ ವಿಶಿಷ್ಟವನ್ನು ಹೊಂದಿರುವ ಕಾಫಿ ನಾಡು ಮಲೆಗಳ ಬೀಡಾಗಿದ್ದು ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. ಹೆಲಿ ಟೂರಿಸಂ, ಜಲ ಕ್ರೀಡೆ, ಜಾನುವಾರು, ಕೃಷಿ, ಹೈನುಗಾರಿಕೆ, ಆಹಾರ, ತೋಟಗಾರಿಕೆ ಮೇಳಗಳನ್ನು ನಡೆಸಲಾಗುತ್ತದೆ.

ಸಾಹಿತ್ಯ, ಕಲೆ, ಸಂಸ್ಕೃತಿಯ ಕಾರ್ಯಕ್ರಮಗಳು ನಡೆಸಲು ಪ್ರಾಥಮಿಕವಾಗಿ ಚಿಂತನೆ ನಡೆಸಲಾಗಿದೆ. ಇದರ ಸ್ಪಷ್ಟ ಚಿತ್ರಣ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇಂದು ಗಮನಿಸಬಹುದಾದ ವಿಧಾನಸಭೆಯ ಕೆಲವು ಸುದ್ದಿಗಳು

Karnataka Assembly Session 2022: ಕಾಫಿ ಮಂಡಳಿ ರದ್ದುಪಡಿಸುವಂತೆ ಮಲೆನಾಡು ಶಾಸಕ ಎಂ.ಪಿ.ಕುಮಾರ ಸ್ವಾಮಿ ವಿಧಾನ ಸಭೆಯಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ, ಕಾಫಿ ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ವ್ಯಾಪ್ತಿಗೆ ತರಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. Coffee Board of India: ಕಾಫಿ ಮಂಡಳಿ ರಾಜ್ಯಕ್ಕೆ ಬೇಕಾ? ಅದರಿಂದ ಬೆಳೆಗಾರರಿಗೇನು ಪ್ರಯೋಜನ?; ಸದನದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಶ್ನೆ

Karnataka Assembly Session 2022: ರಾಯಚೂರು ಭಾಗದ ಕೃಷಿಕರ ಬಹುಕಾಲದ ಬೇಡಿಕೆಯ ಎನ್‌ಆರ್‌ಬಿಸಿ -5ಎ ಕಾಲುವೆ ಯೋಜನೆ (NRBC 5-A canal project) ಅನುಷ್ಠಾನ ಸಾಧ್ಯ ಇಲ್ಲ ಎಂದು ಸರ್ಕಾರ ಇಂದು ವಿಧಾನಸಭೆಗೆ ತಿಳಿಸಿದೆ. ಯಾಕೆ ಏನು ಎಂಬ ವಿವರ ಇಲ್ಲಿದೆ ಗಮನಿಸಿ. NRBC 5-A canal project: ಎನ್‌ಆರ್‌ಬಿಸಿ-5ಎ ಕಾಲುವೆ ನಿರ್ಮಾಣ ಸಾಧ್ಯ ಇಲ್ಲ!; ಸರ್ಕಾರ ಕಡ್ಡಿಮುರಿದಂತೆ ಹೀಗೇಕೆ ಹೇಳಿತು? ವಿವರ ಇಲ್ಲಿದೆ

Karnataka Assembly Session 2022: ವಿಧಾನ ಸಭೆ ಕಲಾಪದಲ್ಲಿ ಇಂದು ದಾಸರಹಳ್ಳಿ ಪೀಣ್ಯ ಟ್ರಾಫಿಕ್‌ ಜಾಮ್‌ (Peenya Flyover Traffic Jam) ವಿಚಾರ ಪ್ರಸ್ತಾಪವಾಗಿದೆ. ಹೆದ್ದಾರಿಯಲ್ಲಿ ಟೋಲ್‌ ಶುಲ್ಕ ಸಂಗ್ರಹ ಮಾಡಿಕೊಂಡು ಸಂಚಾರ ದಟ್ಟಣೆ ನಿರ್ವಹಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕ ಮಂಜುನಾಥ್‌. ಸರ್ಕಾರದ ಉತ್ತರ ಏನಿತ್ತು ಗಮನಿಸಿ… Peenya Flyover Traffic Jam: ಟ್ರಾಫಿಕ್‌ ಜಾಮ್‌ ಆದ್ರೂ ಟೋಲ್‌ ವಸೂಲಿ ಸರಿಯಾ? ಶಾಸಕರ ಪ್ರಶ್ನೆ; ಸರ್ಕಾರದ ಉತ್ತರ ಏನಿತ್ತು ಗಮನಿಸಿ..

Karnataka Assembly Session 2022: ವಿಧಾನಸಭೆಯ ಇಂದಿನ ಕಲಾಪದ ನಡುವೆ, ಜಿಮ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರೊಟೀನ್‌ ಪೌಡರ್‌ (Protein Powder) ವಿಚಾರ ಗಮನಸೆಳೆದಿದೆ. ಶಾಸಕ ಸತೀಶ್‌ ರೆಡ್ಡಿ ಈ ವಿಷಯ ಪ್ರಸ್ತಾಪಿಸಿದ್ದು, ಆರು ನಿಮಿಷ ಚರ್ಚೆಗೆ ಕಾರಣವಾಯಿತು. ಅದರ ವಿವರ ಇಲ್ಲಿದೆ. Protein Powder: ದಪ್ಪ ಇರೋರು ಪ್ರೊಟೀನ್‌ ಪೌಡರ್‌ನಿಂದ 30 ದಿನದಲ್ಲಿ ಸಣ್ಣ ಆಗೋದು ಸಾಧ್ಯವಾ?

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಮೀಸಲಾತಿಗೆ ಸಂಬಂಧಿಸಿದಂಯತೆ ತಾವು ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತರಾಗದ ಯತ್ನಾಳ್‌, ಪ್ರತಿಭಟನೆಗೆ ಮುಂದಾದರು. Panchamasali Reservation: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಸದನದ ಬಾವಿಗಿಳಿದ ಯತ್ನಾಳ್‌, ಹೆಬ್ಬಾಳ್ಕರ್!‌

IPL_Entry_Point