ಕನ್ನಡ ಸುದ್ದಿ  /  ಕರ್ನಾಟಕ  /  Chitradurga Result: ಚಿತ್ರದುರ್ಗ ಕೋಟೆಯಲ್ಲಿ ಬಿಜೆಪಿ ಬಲ, ಗೆದ್ದ ಕಾರಜೋಳ , ಸೋತ ಚಂದ್ರಪ್ಪ

Chitradurga Result: ಚಿತ್ರದುರ್ಗ ಕೋಟೆಯಲ್ಲಿ ಬಿಜೆಪಿ ಬಲ, ಗೆದ್ದ ಕಾರಜೋಳ , ಸೋತ ಚಂದ್ರಪ್ಪ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಚಿತ್ರದುರ್ಗ ಕ್ಷೇತ್ರದಲ್ಲಿ ಹೊರಗಿನ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟು ಬಾಗಲಕೋಟೆಯವರಾದ ಬಿಜೆಪಿ ಅಭ್ಯರ್ಥಿ ಗೋವಿಂದಕಾರಜೋಳ ವಿರುದ್ದ ಕ್ಕಮಗಳೂರು ಮೂಲದ ಬಿ.ಎನ್‌.ಚಂದ್ರಪ್ಪ 48,121 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. Chitradurga Lok Sabha Elections Result.

ಚಿತ್ರದುರ್ಗದಲ್ಲಿ ಸೋಲುಂಡ ಗೋವಿಂದ ಕಾರಜೋಳ
ಚಿತ್ರದುರ್ಗದಲ್ಲಿ ಸೋಲುಂಡ ಗೋವಿಂದ ಕಾರಜೋಳ

ಚಿತ್ರದುರ್ಗ: ದೂರದ ಬಾಗಲಕೋಟೆಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಂದ ಮಾಜಿ ಡಿಸಿಎಂ ಹಾಗೂ ಹಿರಿಯ ನಾಯಕ ಗೋವಿಂದ ಕಾರಜೋಳ ಅವರು ಗೆಲುವು ಕಂಡಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಸೋತಿದ್ದ ಹಿರಿಯ ನಾಯಕ ಕಾರಜೋಳ ಕೋಟೆಯುರಿನಲ್ಲಿ ಜಯದ ನಗೆ ಬೀರಿದ್ದಾರೆ. ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ತುರುಸಿನ ಸ್ಪರ್ಧೆ ಎದುರಿಸಿ ಕಾಂಗ್ರೆಸ್‌ನಿಂದಲೇ ಅವಕಾಶ ಪಡೆದಿದ್ದ ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಇಲ್ಲಿ ಸೋತಿದ್ದಾರೆ. ಚಿತ್ರದುರ್ಗ ಕ್ಷೇತ್ರ ಒಮ್ಮೆ ಗೆಲ್ಲಿಸಿದವರನ್ನು ಮತ್ತೆ ಗೆಲ್ಲಿಸಿದ ಉದಾಹರಣೆ ಇತ್ತೀಚಿನ ವರ್ಷಗಳಲ್ಲಿ ಇಲ್ಲ. ಅದೂ ಒಂದೇ ಪಕ್ಷದವರಿಗೆ ಸತತ ಅವಕಾಶವೂ ಸಿಕ್ಕಿಲ್ಲ. ಅಲ್ಲದೇ ಪ್ರತಿ ಚುನಾವಣೆಯಿಂದ ಹೊಸಬರೇ ಇಲ್ಲಿ ಗೆಲ್ಲುತ್ತಿದ್ದಾರೆ, ಅದೂ ಹೊರಗಿನವರಿಗೆ ಹೆಚ್ಚಿನ ಮಣೆಯನ್ನೂ ಕೂಡ ಹಾಕಿದೆ. ಕೇಂದ್ರದಲ್ಲಿ ಸಚಿವರಾಗಿರುವ ಎ.ನಾರಾಯಣಸ್ವಾಮಿ ಅವರು ರಾಜ್ಯ ರಾಜಕೀಯದ ಕಡೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರಿಂದ ಅವರ ಬದಲು ಮಾದಿಗ ಸಮಾಜದ ಹಿರಿಯ ನಾಯಕ ಎಂ.ಗೋವಿಂದ ಕಾರಜೋಳ ಇಲ್ಲಿ ಕೊನೆ ಕ್ಷಣದವರೆಗೂ ಕಸರತ್ತು ನಡೆಸಿ ಯಡಿಯೂರಪ್ಪ ಅವರ ಬೆಂಬಲದಿಂದ ಅವಕಾಶ ಪಡೆದಿದ್ದರು. ಕೊನೆಗೆ ಗೆದ್ದಿದ್ದಾರೆ. ಹೊಸ ಅಭ್ಯರ್ಥಿಗೆ ಮಣೆ ಹಾಕುವ ಪರಂಪರೆ ಮುಂದುವರೆದಿದೆ.

ಟ್ರೆಂಡಿಂಗ್​ ಸುದ್ದಿ

ಟಿಕೆಟ್‌ಗಾಗಿ ಸ್ಥಳೀಯವಾಗಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಇಲ್ಲಿ ಲಾಬಿ ನಡೆಸಿ ಗದ್ದಲ ಕೂಡ ಮಾಡಿದ್ದರು. ಮಾತುಕತೆ ಬಳಿಕ ಕಾರಜೋಳ ಕಣಕ್ಕೆ ಇಳಿದರೂ ಗೆದ್ದಿದ್ದಾರೆ.

ಅದೇ ರೀತಿ ಕಾಂಗ್ರೆಸ್‌ನಲ್ಲೂ ಸ್ಥಳೀಯ ತಿಪ್ಪೇಸ್ವಾಮಿ ಅವರಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇತ್ತಾದರೂ ಹತ್ತು ವರ್ಷದ ಹಿಂದೆ ಗೆದ್ದಿದ್ದ ಚಂದ್ರಪ್ಪ ಟಿಕೆಟ್‌ ಪಡೆದುಕೊಂಡು ಬಂದರೂ ಸೋಲು ಕಂಡಿದ್ದಾರೆ.

ಏಳು ಕ್ಷೇತ್ರಗಳಲ್ಲಿನ ಶಾಸಕರು ಕಾಂಗ್ರೆಸ್‌ನವರೇ ಆಗಿದ್ದು, ಸಂಘಟಿತವಾಗಿ ಕೆಲಸ ಮಾಡಿದ್ದರೂ ಅಭ್ಯರ್ಥಿ ದಡ ಮುಟ್ಟಿಸಲು ಆಗಿಲ್ಲ. ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಗೆ ಈ ಚುನಾವಣೆ ಫಲಿತಾಂಶ ಉಮೇದು ತಂದಿದೆ.

ಇತರರು ಪಡೆದ ಮತ

ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ 7705, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು 4950, ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ 2206, ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ 720, ಕರುನಾಡ ಸೇವಕರ ಪಾರ್ಟಿಯ ಶಬರೀಶ್ 1018, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ 1014, ಪಕ್ಷೇತರ ಅಭ್ಯರ್ಥಿಗಳಾದ ಅಮೃತ್ ರಾಜ 834, ಗಣೇಶ 1093, ತುಳಸಿ ಹೆಚ್ 1082, ಡಾ.ಎಂ.ಪಿ.ದಾರಕೇಶ್ವರಯ್ಯ 1397, ನಾಗರಾಜಪ್ಪ 1679, ಭೂತರಾಜ್ ವಿ.ಎಸ್ 2397, ಮಂಜುನಾಥ ಸ್ವಾಮಿ ಟಿ 2676, ರಘುಕುಮಾರ್ ಎಸ್ 2337, ಬಿ.ವೆಂಕಟೇಶ ಶಿಲ್ಪಿ 4201, ಶ್ರೀನಿವಾಸಪುರದ ಶ್ರೀನಿವಾಸಬಾಬು ಪಾವಗಡ 4548, ಸುಧಾಕರ್ ಆರ್ 1211 ಮತ ಗಳಿಸಿದ್ದಾರೆ. ನೋಟಾಗೆ 3190 ಮತಗಳು ದಾಖಲಾಗಿವೆ. ಅಂಚೆ ಮತಗಳ ಪೈಕಿ 132 ತಿರಸ್ಕೃತಗೊಂಡಿದ್ದು, 204 ಮತಗಳು ಅಮಾನ್ಯಗೊಂಡಿವೆ.

ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು

ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಫಲವಾಗಿ ದೇಶದಲ್ಲಿಯೇ ಪ್ರಥಮವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿಯನ್ನು ಎನ್‌ಕೋರ್‌( ENCORE) ತಂತ್ರಾಂಶ ಬಳಕೆ ಮಾಡಿ ಅಧೀಕೃತವಾಗಿ ಘೋಷಣೆ ಮಾಡಲಾಗಿದೆ.

ಮತ ಎಣಿಕೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‍ಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ರದುರ್ಗ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಚಿತ್ರದುರ್ಗ ದಕ್ಷಿಣ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಬಿ.ಎನ್‌.ಚಂದ್ರಪ್ಪ (ಕಾಂಗ್ರೆಸ್‌): 6,36,769 ಮತಗಳು

ಗೋವಿಂದ ಕಾರಜೋಳ (ಬಿಜೆಪಿ): 6,84,890 ಮತಗಳು

ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿಗೋವಿಂದ ಕಾರಜೋಳ ಪರಿಚಯ

ವಿಜಯಪುರ ಜಿಲ್ಲೆಯವರಾದ ಗೋವಿಂದಕಾರಜೋಳ ಅವರು. 1951ರ ಜನವರಿ 25 ರಂದು ಜನಿಸಿದ ಕಾರಜೋಳರು ಲೋಕೋಪಯೋಗಿ ಇಲಾಖೆಯಲ್ಲಿ ಸ್ಟೋರ್‌ ಕೀಪರ್‌ ಆಗಿದ್ದವರು. ಹೆಗಡೆ ಅವರ ಗರಡಿಯಲ್ಲಿ ರಾಜಕೀಯಕ್ಕೆ ಬಂದು ಮುಧೋಳದಿಂದ ಐದು ಬಾರಿ ಶಾಸಕರಾಗಿದ್ದರು. ಆರಕ್ಕೂ ಹೆಚ್ಚು ಖಾತೆ ಸಚಿವರಾಗಿದ್ದವರು. ಈ ಬಾರಿ ಸೋತು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದಾರೆ.

ಚುನಾವಣಾ ಕಣ: ಚಿತ್ರದುರ್ಗ ಲೋಕಸಭಾ ಕ್ಷೇತ್ರ

ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಜಿಲ್ಲೆಯ ಆರು ಕ್ಷೇತ್ರಗಳ ಜತೆಗೆ ಪಕ್ಕದ ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡ ಕ್ಷೇತ್ರ ಒಳಗೊಂಡಿದೆ. ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರು ಪ್ರತಿನಿಧಿಸಿದ್ದ ಕ್ಷೇತ್ರವಿದು. ಆನಂತರ ಕೆ. ಮಲ್ಲಣ್ಣ, ಸಿ.ಪಿ. ಮೂಡಲಗಿರಿಯಪ್ಪ ಸಂಸದರಾಗಿದ್ದವರು. ಹೆಚ್ಚು ಬಾರಿ ಕಾಂಗ್ರೆಸ್‌ ಇಲ್ಲಿ ಗೆದ್ದಿದೆ. ನಿವೃತ್ತ ಡಿಜಿಪಿ ಕೋದಂಡರಾಮಯ್ಯ, ನಟ ಶಶಿಕುಮಾರ್‌, ಎಂಜಿನಿಯರ್‌ ಜನಾರ್ದನಸ್ವಾಮಿ ಅವರಿಗೂ ಇಲ್ಲಿನ ಮತದಾರರ ಮಣೆ ಹಾಕಿದ್ದಾರೆ.

(Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.)

ಟಿ20 ವರ್ಲ್ಡ್‌ಕಪ್ 2024