Hiriyur News: ಹಿರಿಯೂರಿನಲ್ಲಿ ರಾತ್ರೋರಾತ್ರಿ ಕುವೆಂಪು ಪುತ್ಥಳಿ, ಪುನೀತ್‌ ರಾಜ್‌ಕುಮಾರ್‌ ಪ್ರತಿಮೆ ತೆರವು
ಕನ್ನಡ ಸುದ್ದಿ  /  ಕರ್ನಾಟಕ  /  Hiriyur News: ಹಿರಿಯೂರಿನಲ್ಲಿ ರಾತ್ರೋರಾತ್ರಿ ಕುವೆಂಪು ಪುತ್ಥಳಿ, ಪುನೀತ್‌ ರಾಜ್‌ಕುಮಾರ್‌ ಪ್ರತಿಮೆ ತೆರವು

Hiriyur News: ಹಿರಿಯೂರಿನಲ್ಲಿ ರಾತ್ರೋರಾತ್ರಿ ಕುವೆಂಪು ಪುತ್ಥಳಿ, ಪುನೀತ್‌ ರಾಜ್‌ಕುಮಾರ್‌ ಪ್ರತಿಮೆ ತೆರವು

Chitradurga News ಚಿತ್ರದುರ್ಗ ಜಿಲ್ಲೆ ಹಿರಿಯೂರು( Hiriyur) ನಗರದಲ್ಲಿ ಅಳವಡಿಸಲಾಗಿದ್ದ ಕುವೆಂಪು( Kuvempu) ಅವರ ಪುತ್ಥಳಿ ಹಾಗೂ ಪುನೀತ್‌ ರಾಜ್‌ಕುಮಾರ್‌( Puneet Rajkumar) ಅವರ ಪ್ರತಿಮೆಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ಧಾರೆ.

ಹಿರಿಯೂರಲ್ಲಿ ಅನುಮತಿ ಇಲ್ಲದೇ ಅಳವಡಿಸಲಾಗಿದ್ದ ಕುವೆಂಪು ಪುತ್ಥಳಿ, ಪುನೀತ್‌ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ.
ಹಿರಿಯೂರಲ್ಲಿ ಅನುಮತಿ ಇಲ್ಲದೇ ಅಳವಡಿಸಲಾಗಿದ್ದ ಕುವೆಂಪು ಪುತ್ಥಳಿ, ಪುನೀತ್‌ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹಾಕಲಾಗಿದ್ದ ಹಿರಿಯ ಸಾಹಿತಿ ಕುವೆಂಪು ಅವರ ಪುತ್ಥಳಿ ಹಾಗೂ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಪ್ರತಿಮೆಯನ್ನು ತೆರವುಗೊಳಿಲಾಗಿದೆ.

ಹಿರಿಯೂರು ನಗರದ ಮುಖ್ಯರಸ್ತೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಹಾಕಲಾಗಿದ್ದ ಕುವೆಂಪು ಅವರ ಪುತ್ಥಳಿ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಪ್ರತಿಮೆಯನ್ನು ಪೊಲೀಸರ ಸಹಕಾರದಿಂದ ತೆರವುಗೊಳಿಸಲಾಯಿತು.

ನಗರದಲ್ಲಿ ಅಳವಡಿಸಿದ್ದ ರಂಜಿತಾ ಹೊಟೇಲ್‌ ಬಳಿ ಹಾಕಿದ್ದ ಕುವೆಂಪು ಪುತ್ಥಳಿ ಹಾಗೂ ಇಂದಿರಾ ಕ್ಯಾಂಟಿನ್‌ ಬಳಿ ನಿರ್ಮಿಸಿದ್ದ ಪುನೀತ್‌ ಅವರ ಪ್ರತಿಮೆಯನ್ನು ನಗರಸಭೆ ಅಧಿಕಾರಿಗಳ ತಂಡ ತಡರಾತ್ರಿ ತೆಗೆದುಕೊಂಡು ಹೋಗಿದ್ದು, ನಗರಸಭೆ ಆವರಣದಲ್ಲಿ ಇರಿಸಿದ್ದಾರೆ.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸದಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿಯೂ ನಡೆಯಿತು.

ಸೂಕ್ತ ಮಾಹಿತಿಯನ್ನೇ ನೀಡದೇ ಗಣ್ಯರ ಪ್ರತಿಮೆಗಳನ್ನು ತೆಗೆದು ಹಾಕಬೇಡಿ. ಇದು ಸಾಂಸ್ಕೃತಿಕ ವಲಯಕ್ಕೆ ಹಿರಿಯೂರು ನಗರಸಭೆ ಮಾಡುತ್ತಿರುವುದು ಅವಮಾನ. ತೆರವಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಆದರೆ ಇದಕ್ಕೆ ಅವಕಾಶ ನೀಡದೇ ನಗರಸಭೆ ಅಧಿಕಾರಿಗಳು ಎರಡನ್ನೂ ತೆರವುಗೊಳಿಸಿದರು.

ಕುವೆಂಪು ಪುತ್ಥಳಿ ಹಾಗೂ ಪುನೀತ್‌ ಪ್ರತಿಮೆಯನ್ನು ತಿಂಗಳ ಹಿಂದೆಯೇ ಪ್ರತಿಷ್ಠಾಪಿಸಲಾಗಿತ್ತು. ಇದಾದ ಕೆಲ ದಿನಗಳ ನಂತರ ಉದ್ಘಾಟನೆ ಸಹ ಮಾಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಅನುಮತಿಯನ್ನು ಪಡೆದಿಲ್ಲ ಎನ್ನುವ ದೂರನ್ನು ನಗರಸಭೆಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ನೊಟೀಸ್‌ ನೀಡಿತ್ತು. ಆ ಬಳಿಕ ಎರಡನ್ನೂ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Whats_app_banner