Special Train: ನೈರುತ್ಯ ರೈಲ್ವೆಯಿಂದ ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಆರಂಭ; ರೈಲು ಸಂಖ್ಯೆ, ಸಮಯ ತಿಳಿಯಿರಿ
Christmas Special train: ಭಾರತೀಯ ರೈಲ್ವೆಯು ಕ್ರಿಸ್‌ಮಸ್ ಹಬ್ಬದ ಬಳಿಕ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲುಗಳನ್ನು ಬಿಟ್ಟಿದೆ. ನೈರುತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಆರಂಭಿಸಿರುವುದಾಗಿ ತಿಳಿಸಿದೆ.
Christmas Special train: ಕ್ರಿಸ್‌ಮಸ್ ಹಬ್ಬದ ರಜೆಯ ಬಳಿಕ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವುದರಿಂದ ಭಾರತೀಯ ರೈಲ್ವೆಯು ವಿವಿಧೆಡೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇದೀಗ ನೈರುತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಆರಂಭಿಸಿರುವುದಾಗಿ ತಿಳಿಸಿದೆ. ಈ ಸ್ಪೆಷಲ್ ಟ್ರೇನ್‌ಗಳು ಎಸ್ಎಸ್ಎಸ್ ಹುಬ್ಬಳ್ಳಿ - ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಮೂರು ಟ್ರಿಪ್ ಓಡಲಿವೆ. ಈ ರೈಲುಗಳ ಸಂಖ್ಯೆ, ಪ್ರಯಾಣಿಸುವ ಸಮಯ ಮತ್ತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
ರೈಲಿನ ಸಂಖ್ಯೆ ಮತ್ತು ಪ್ರಯಾಣಿಸುವ ಸಮಯ
ರೈಲು ಸಂಖ್ಯೆ 07367: ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ವಿಶೇಷ ರೈಲು ಡಿಸೆಂಬರ್ 30, ಜನವರಿ 06 ಮತ್ತು 13, 2025 ರಂದು ಸಂಜೆ 04:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 3:20ಕ್ಕೆ ಕನ್ಯಾಕುಮಾರಿಯನ್ನು ತಲುಪಲಿದೆ.
ರೈಲು ಸಂಖ್ಯೆ 07368: ಕನ್ಯಾಕುಮಾರಿ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು ಡಿಸೆಂಬರ್ 31, 2024 ಮತ್ತು ಜನವರಿ 07 ಮತ್ತು 14, 2025 ರಂದು ಸಂಜೆ 07:10 ಕ್ಕೆ ಕನ್ಯಾಕುಮಾರಿಯಿಂದ ಹೊರಟು ಮರುದಿನ ಸಂಜೆ 07:35ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯನ್ನು ತಲುಪಲಿದೆ.
ಈ ಎರಡೂ ಮಾರ್ಗಗಳಲ್ಲಿ ಈ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತುಮಕೂರು, ಯಶವಂತಪುರ ಜಂಕ್ಷನ್, ಕೃಷ್ಣರಾಜಪುರ, ಬಂಗಾರಪೇಟೆ, ಸೇಲಂ ಜಂಕ್ಷನ್, ನಾಮಕ್ಕಲ್, ಕರೂರ್, ದಿಂಡಿಗಲ್ ಜಂಕ್ಷನ್, ಮಧುರೈ ಜಂಕ್ಷನ್, ವಿರುದುನಗರ ಜಂಕ್ಷನ್, ಸತೂರ್, ಕೋವಿಲ್ಪಟ್ಟಿ, ತಿರುನೆಲ್ವೇಲಿ ಜಂಕ್ಷನ್, ವಲ್ಲಿಯೂರ್ ಮತ್ತು ನಾಗರಕೋಯಿಲ್ ಜಂಕ್ಷನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್‌ಸೈಟ್‌ಗೆ (www.enquiry.indianrail.gov.in) ಭೇಟಿ ನೀಡಬಹುದು. 139 ನಂಬರ್‌ಗೆ ಡಯಲ್ ಮಾಡಿ ಅಥವಾ ಎನ್‌ಟಿಇಎಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಬಹುದು ಎಂದು ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾಕ್ಟರ್ ಮಂಜುನಾಥ್ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ರೈಲ್ವೆಯ ಕ್ರಿಸ್‌ಮಸ್ ವಿಶೇಷ ರೈಲುಗಳ ವಿವರ
ಭಾರತೀಯ ರೈಲ್ವೆಯ ಈ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಭಾರತಾದ್ಯಂತ ಹಲವು ವಿಶೇಷ ರೈಲುಗಳನ್ನು ಬಿಟ್ಟಿದೆ. ಮಾಹಿತಿಗಾಗಿ ಆ ಸ್ಪೆಷಲ್ ರೈಲುಗಳ ವಿವರ ಮುಂದೆ ನೀಡಲಾಗಿದೆ.
- ರೈಲು ಸಂಖ್ಯೆ 07319: ಕೆಎಸ್ಆರ್ ಬೆಂಗಳೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಪೆಷಲ್
- ರೈಲು ಸಂಖ್ಯೆ 07320: ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್ಆರ್ ಬೆಂಗಳೂರು ಸ್ಪೆಷಲ್
- ರೈಲು ಸಂಖ್ಯೆ 07367: ಹುಬ್ಬಳ್ಳಿ-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಸ್ಪೆಷಲ್
- ರೈಲು ಸಂಖ್ಯೆ 07368: ಕನ್ಯಾಕುಮಾರಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸ್ಪೆಷಲ್
- ರೈಲು ಸಂಖ್ಯೆ 06557: ಎಸ್‌ಎಂವಿಟಿ ಬೆಂಗಳೂರು - ಕೊಚುವೇಲಿ ಎಕ್ಸ್‌ಪ್ರೆಸ್ ಸ್ಪೆಷಲ್
- ರೈಲು ಸಂಖ್ಯೆ 06558: ಕೊಚುವೇಲಿ - SMVT ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್
- ರೈಲು ಸಂಖ್ಯೆ 06505: ಯಶವಂತಪುರ-ಮಂಗಳೂರು ಜೆಎನ್ ಸ್ಪೆಷಲ್
- ರೈಲು ಸಂಖ್ಯೆ 06506: ಮಂಗಳೂರು ಜಂಕ್ಷನ್ - ಯಶವಂತಪುರ ಸ್ಪೆಷಲ್
- ರೈಲು ಸಂಖ್ಯೆ 06039: ತಾಂಬರಂ - ಕನ್ಯಾಕುಮಾರಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಸ್ಪೆಷಲ್
- ರೈಲು ಸಂಖ್ಯೆ 06040: ಕನ್ಯಾಕುಮಾರಿ - ತಾಂಬರಂ ವೀಕ್ಲಿ ಸೂಪರ್‌ಫಾಸ್ಟ್ ಸ್ಪೆಷಲ್
- ರೈಲು ಸಂಖ್ಯೆ 06043: ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೊಚುವೇಲಿ ವೀಕ್ಲಿ ಸ್ಪೆಷಲ್
- ರೈಲು ಸಂಖ್ಯೆ 06044: ಕೊಚುವೇಲಿ - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೀಕ್ಲಿ ಸ್ಪೆಷಲ್
- ರೈಲು ಸಂಖ್ಯೆ 06037: ಕೊಚುವೇಲಿ-ಮಂಗಳೂರು ಜೆಎನ್ ವೀಕ್ಲಿಅನ್‌ರಿಸರ್ವ್ಡ್ ಅಂತ್ಯೋದಯ ಸ್ಪೆಷಲ್
- ರೈಲು ಸಂಖ್ಯೆ 06038: ಮಂಗಳೂರು ಜಕ್ಷನ್ - ಕೊಚುವೇಲಿ ವೀಕ್ಲಿಅನ್‌ರಿಸರ್ವ್ಡ್ ಅಂತ್ಯೋದಯ ಸ್ಪೆಷಲ್
- ರೈಲು ಸಂಖ್ಯೆ 06507: ಎಸ್‌ಎಂವಿಟಿ ಬೆಂಗಳೂರು - ಕೊಚುವೇಲಿ ಎಕ್ಸ್‌ಪ್ರೆಸ್ ವಿಶೇಷ
- ರೈಲು ಸಂಖ್ಯೆ 06508: ಕೊಚುವೇಲಿ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ