Kannada News  /  Karnataka  /  Cm Basavaraj Bommai On Na Nayaki Campaign
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

Basavaraj Bommai: ನಾಯಕಿ ಎಂದು ಸ್ವಯಂ ಘೋಷಿಸಿಕೊಳ್ಳುವ ಸ್ಥಿತಿ ಪ್ರಿಯಾಂಕಾ ಗಾಂಧಿಗೆ ಬಂದಿದೆ -ಸಿಎಂ ಬೊಮ್ಮಾಯಿ ವ್ಯಂಗ್ಯ

16 January 2023, 13:56 ISTHT Kannada Desk
16 January 2023, 13:56 IST

ಪ್ರಿಯಾಂಕಾ ಗಾಂಧಿ ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಅವರೇ ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಟೀಕಿಸಿದರು.

ಹುಬ್ಬಳ್ಳಿ: ಪ್ರಿಯಾಂಕಾ ಗಾಂಧಿಗೆ ನಾನು ನಾಯಕಿ ಎಂದು ಸ್ವಯಂ ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಯೋಜಿಸಿರುವ ನಾ ನಾಯಕಿ ಸಮಾವೇಶದ ಕುರಿತು ವ್ಯಂಗ್ಯವಾಡಿದ್ದಾರೆ. ರಾಜ್ಯಕ್ಕೆ ಅವರು ಬರುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅವರ ಜಾಹೀರಾತಿನಲ್ಲಿ ನಾ ನಾಯಕಿ ಎಂದು ಹೇಳಿಕೊಂಡಿದ್ದಾರೆ. ಅವರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಅವರೇ ನಾ ನಾಯಕಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಮಹಿಳೆಯರಿಗಾಗಿ ಕಾಂಗ್ರೆಸ್ ಪ್ರತ್ಯೇಕ ಬಜೆಟ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಏನು ಬೇಕಾದರೂ ಆಶ್ವಾಸನೆ ನೀಡುತ್ತಾರೆ ಎಂದು ಕೈ ನಾಯಕರ ಕಾಲೆಳೆದರು.

ಕಾಂಗ್ರೆಸ್ ಯುವಜನೋತ್ಸವವನ್ನು ವಿನಾಶೋತ್ಸವ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಯಥಾ ಬುದ್ದಿ ತಥಾ ಮಾತುಗಳು. ಕಾಂಗ್ರೆಸ್ ವಿನಾಶದ ಕನಸು ಕಾಣುತ್ತಿದೆ. ಎಲ್ಲದರಲ್ಲಿಯೂ ವಿನಾಶವನ್ನೇ ಕಾಣುತ್ತಿದೆ. ಒಳ್ಳೆಯ ಕೆಲಸಗಳನ್ನು ಮೆಚ್ಚುವುದು ಅವರಿಗೆ ತಿಳಿದಿಲ್ಲ. ಇತ್ತೀಚೆಗೆ ಅವರ ಭಾಷೆ, ಚಿಂತನೆ, ನಡವಳಿಕೆ ದೇಶದ ವಿಚಾರ, ರಾಜ್ಯದ ಪ್ರಗತಿ ಬಗ್ಗೆ ಕೀಳು ಮಟ್ಟದ ಮಾತುಗಳು ಹತಾಶ ಪರಿಸ್ಥಿತಿಯನ್ನು ವ್ಯಕ್ತಪಡಿಸುತ್ತದೆ. ಇದಕ್ಕೆ ಹೆಚ್ಚು ಮಹತ್ವಕೊಡುವ ಅಗತ್ಯವಿಲ್ಲ ಎಂದರು.

ಇಂದು ಕಾಂಗ್ರೆಸ್‌ ಪಕ್ಷವು ಬೆಂಗಳೂರಿನ ಅರಮನೆ ಮೈದಾನದಲ್ಲಿ 'ನಾ ನಾಯಕಿ' ಹೆಸರಿನಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದೆ. ಬೃಹತ್‌ ಸಮೇವೇಶವನ್ನು ಇಂದು ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉದ್ಘಾಟಿಸುತ್ತಿದ್ದಾರೆ. ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾಂಗ್ರೆಸ್‌ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಪ್ರಿಯಾಂಕಾ ಗಾಂಧಿಯವರು ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನೀಡುವ ಭರವಸೆಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಿಳಿಸಿದ್ದಾರೆ. ರಾಜ್ಯ ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, “ರಾಜ್ಯದ ಎಲ್ಲಾ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರೂಪುಗೊಂಡ ವಿನೂತನ ಕಾರ್ಯಕ್ರಮವೇ 'ನಾ ನಾಯಕಿ'. ಇಂದು 'ನಾ ನಾಯಕಿ' ಕಾರ್ಯಕ್ರಮ ಬೆಂಗಳೂರಲ್ಲಿ ಹಮ್ಮಿಕೊಂಡಿದ್ದು, ಪ್ರಿಯಾಂಕಾ ಗಾಂಧಿಯವರು ಪಾಲ್ಗೊಳ್ಳಲಿದ್ದಾರೆ.‌ ನೀವೂ ಬನ್ನಿ, ಭಾಗವಹಿಸಿ” ಎಂದು ಪಕ್ಷ ಕರೆ ನೀಡಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

ಗಂಗಾಮತಸ್ತ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಶೀಘ್ರ, ಸಿಎಂ ಬೊಮ್ಮಾಯಿ ಮಾಹಿತಿ

ಶೀಘ್ರದಲ್ಲಿಯೇ ಗಂಗಾಮತಸ್ತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕುರಿ ಕಾಯುವ ವೃತ್ತಿಯಲ್ಲಿರುವ ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡದ ಜಾತಿಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸರಕಾರ ಈ ಹಿಂದೆ ತಿಳಿಸಿತ್ತು. ಈಗಾಗಲೇ ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಪರಿವಾರ, ತಳವಾರ, ಸಿದ್ದಿ ಸಮುದಾಯದವರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ