CM Siddaramaiah: ಬಿಜೆಪಿ ಪ್ರಣಾಳಿಕೆ ಈಡೇರಿಸದವರು, ಅನ್ನಭಾಗ್ಯಕ್ಕೆ ಅಕ್ಕಿ ಕೊಡದಂತೆ ತಡೆದವರು ಈಗ ಧರಣಿ ಮಾಡ್ತಾರಂತೆ; ಸಿಎಂ ಸಿದ್ದರಾಮಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Cm Siddaramaiah: ಬಿಜೆಪಿ ಪ್ರಣಾಳಿಕೆ ಈಡೇರಿಸದವರು, ಅನ್ನಭಾಗ್ಯಕ್ಕೆ ಅಕ್ಕಿ ಕೊಡದಂತೆ ತಡೆದವರು ಈಗ ಧರಣಿ ಮಾಡ್ತಾರಂತೆ; ಸಿಎಂ ಸಿದ್ದರಾಮಯ್ಯ

CM Siddaramaiah: ಬಿಜೆಪಿ ಪ್ರಣಾಳಿಕೆ ಈಡೇರಿಸದವರು, ಅನ್ನಭಾಗ್ಯಕ್ಕೆ ಅಕ್ಕಿ ಕೊಡದಂತೆ ತಡೆದವರು ಈಗ ಧರಣಿ ಮಾಡ್ತಾರಂತೆ; ಸಿಎಂ ಸಿದ್ದರಾಮಯ್ಯ

15 ಲಕ್ಷ ರೂ.ಗಳನ್ನು ಪ್ರತಿ ಮನೆಗೆ ಕೊಡುತ್ತೇನೆ ಎಂದವರು 9 ವರ್ಷಗಳಾದರೂ ಈಡೇರಿಸಿಲ್ಲ. ಆದಾಯ ದುಪ್ಪಟ್ಟು ಮಾಡುತ್ತೇವೆ, ನಾ ಖಾವೂಂಗಾ, ನಾ ಖಾನೇದೂಂಗ ಎಂದವರು ಯಾರು? ಅಚ್ಛೇ ದಿನ್ ತಂದುಕೊಟ್ಟಿದ್ದಾರೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಪ್ರಕಾಶಕರ ಸಂಘದ 20 ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಪ್ರಕಾಶಕರ ಸಂಘದ 20 ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.

ಬೆಂಗಳೂರು: ಐದು ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಅಧಿವೇಶನದಲ್ಲಿ ಧರಣಿ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಹೇಳಿದ್ದು, ಅವರು ನೀಡಿದ್ದ ಪ್ರಣಾಳಿಕೆಯಲ್ಲಿ ಒಂದು ಲಕ್ಷ ದವರಿಗಿನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಹತ್ತು ಗಂಟೆ ವಿದ್ಯುತ್ ನೀಡುತ್ತೇವೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದೆಲ್ಲಾ ಹೇಳಿದ್ದರು. ಆದರೆ ಅವುಗಳನ್ನು ಜಾರಿ ಮಾಡದವರು ಈಗ ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವ್ಯಂಗವಾಡಿದ್ದಾರೆ.

ನಗರದಲ್ಲಿಂದು (ಜೂನ್ 24, ಶನಿವಾರ) ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಪ್ರಕಾಶಕರ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದವರು ಈಗ ಟೀಕೆ ಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದಿದ್ದಾರೆ.

15 ಲಕ್ಷ ರೂ.ಗಳನ್ನು ಪ್ರತಿ ಮನೆಗೆ ಕೊಡುತ್ತೇನೆ ಎಂದವರು 9 ವರ್ಷಗಳಾದರೂ ಈಡೇರಿಸಿಲ್ಲ. ಆದಾಯ ದುಪ್ಪಟ್ಟು ಮಾಡುತ್ತೇವೆ, ನಾ ಖಾವೂಂಗಾ, ನಾ ಖಾನೇದೂಂಗ ಎಂದವರು ಯಾರು? ಅಚ್ಛೇ ದಿನ್ ತಂದುಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಜನರ ಹಣ ವನ್ನು ಖರ್ಚು ಮಾಡುವಾಗ ಎಚ್ಚರಿಕೆ ಅಗತ್ಯ: ಕೇಂದ್ರ ಸರ್ಕಾರ ಲಕ್ಷಾಂತರ ಟನ್ ಅಕ್ಕಿ ಇಟ್ಟುಕೊಂಡು ಕುಳಿತಿದೆ. ಆದರೆ ಅನ್ನಭಾಗ್ಯಕ್ಕೆ ಮಾತ್ರ ಕೊಡುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಈಗ ಧರಣಿ ಮಾಡುತ್ತೇವೆ ಎಂದು ಅರ್ಥವಿಲ್ಲದ ಮಾತಾಡುತ್ತಿದ್ದಾರೆ. ಒಂದು ತಿಂಗಳಿಗೆ 840 ಕೋಟಿ ರೂ. ಅಕ್ಕಿ ಅಗತ್ಯವಿದೆ. ಅಷ್ಟು ಮೊತ್ತ ನೀಡಲು ನಾವು ಸಿದ್ದವಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯಡಿ ಅರ್ಜಿ ಕರೆಯಲಾಗಿದೆ. ತೆರಿಗೆ ಹಣ ಒಬ್ಬರ ಖಾಸಗಿ ಸ್ವತ್ತಲ್ಲ. ಜನರ ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ ಅಗತ್ಯ. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ 200 ಯೂನಿಟ್‌ ಕೊಡಬೇಕು ಎನ್ನುತ್ತಾರೆ. ವರ್ಷಕ್ಕೆ ಸಾರಾಸರಿ 70 ಯೂನಿಟ್ ಖರ್ಚು ಮಾಡುವವರಿಗೆ 200 ಯೂನಿಟ್ ಉಚಿತ ಕೊಟ್ಟರೆ ಅದು ದುರುಪಯೋಗ ಮತ್ತು ದುರ್ಬಳಕೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ: ನಮ್ಮ ಸರ್ಕಾರದಲ್ಲಿ ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕ ಪಡಬೇಕಾಗಿಲ್ಲ . ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ರಕ್ಷಣೆ ಮಾಡುತ್ತೇವೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇವರು ಇದೇ ವೇಳೆ ಸಾಹಿತಿಗಳಿಗೆ ಅಭಯ ನೀಡಿದ್ದಾರೆ.

ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಲೇಬೇಕು: ಭಾರತದಲ್ಲಿ ಒಂದು ವ್ಯಕ್ತಿ, ಒಂದು ಮತ, ಒಂದು ಮೌಲ್ಯವೆಂದು ಗುರುತಿಸುವಂತೆ ನಮ್ಮ ಸಂವಿಧಾನ ತಿಳಿಸಿದ್ದರೂ, ಸಾಮಾಜಿಕವಾಗಿ ಆರ್ಥಿಕವಾಗಿ ವೈರುಧ್ಯಗಳು ನಮ್ಮ ಸಮಾಜದಲ್ಲಿದೆ. ಅಸಮಾನತೆಗೆ ಒಳಗಾಗುವ ಜನರೇ ಭಾರತದ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆಯಿದೆ ಎಂದು ಡಾ. ಅಂಬೇಡ್ಕರ್ ಅವರು ಸಂವಿಧಾನ ಅಂಗೀಕೃತವಾದ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ತಿಳಿಸಿದ್ದರು. ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಲೇಬೇಕು. ಕಲಿತಷ್ಟು ಜ್ಞಾನ ವಿಕಾಸಗೊಳ್ಳುತ್ತದೆ. ಲೇಖಕರ ಬರಣವಣಿಗೆಗಳು ಸಮಾಜಮುಖಿಯಾಗಿರಬೇಕು ಎಂದು ತಿಳಿಸಿದ್ದಾರೆ.

ತಾನು ಸಾಹಿತಿಯಲ್ಲದಿದ್ದರೂ, ಸಾಹಿತಿಗಳ ಒಡನಾಟವಿರುವುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಸಾಹಿತ್ಯವನ್ನು ಬಹಳಷ್ಟು ಓದಿರುವುದಾಗಿ ತಿಳಿಸಿದರು. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಮಹಾದೇವ ಇಂತಹ ಪ್ರಮುಖ ಸಾಹಿತಿಗಳೊಂದಿಗಿನ ತಮ್ಮ ಸ್ನೇಹವನ್ನು ನೆನೆದರು. ರಾಮದಾಸ ಎಂಬ ಕನ್ನಡ ಗುರುಗಳೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿದರು. ಪಾಟೀಲ್ ಪುಟ್ಟಪ್ಪ, ಹಂಪಾ ನಾಗರಾಜ್, ಮಲ್ಲಿಕಾ ಗಂಟಿ ಯಂತಹ ಲೇಖಕರ ಒಡನಾಟದ ಬಗ್ಗೆ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

Whats_app_banner