ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ; ಹೀಗಾಗಿ ರಾಮನಗರದ ಹೆಸರು ಬದಲಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ‌
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ; ಹೀಗಾಗಿ ರಾಮನಗರದ ಹೆಸರು ಬದಲಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ‌

ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ; ಹೀಗಾಗಿ ರಾಮನಗರದ ಹೆಸರು ಬದಲಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ‌

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ‌ ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ‌
ಸಿಎಂ ಸಿದ್ದರಾಮಯ್ಯ‌ (HT_PRINT)

ಮೈಸೂರು : ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ‌ ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ, ಆ ಕಾರಣಕ್ಕೆ ನಾವು ಬದಲಾಯಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಳೆಯ ನಡುವೆಯೂ ಕೆ ಆರ್ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ರಾಮನಗರ‌ ಜಿಲ್ಲೆ ಮಾಡಿದಾಗ ಯಾವ ಇತಿಹಾಸ ಇತ್ತು..? ಎಲ್ಲವನ್ನೂ ಜನಾಭಿಪ್ರಾಯದ‌ ಮೇಲೆ‌ ಮಾಡಲಾಗಿದೆ. ಜನರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿ ಅಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟಿದ್ದಾರೆ.

ಕಪ್ಪು ಹಣ ಇದ್ದರೆ ತನಿಖೆ ಮಾಡಲಿ

ಗೃಹ ಸಚಿವ ಪರಮೇಶ್ವರ್ ಅವರ ಪ್ರಕರಣದಲ್ಲಿ ಇಡಿ ಅವರು ತನಿಖೆ ಮಾಡಲಿ, ಕಪ್ಪು ಹಣ ಇದ್ದರೆ ಪತ್ತೆ ಹಚ್ಚಿ. ಆದರೆ ನೀವು ರಾಜಕೀಯ ದುರುದ್ದೇಶದಿಂದ ಮಾಡಬಾರದು. ಸಂಸ್ಥೆಗಳು ಇರುವುದು ಕಪ್ಪುಹಣ ತಡೆಗಟ್ಟಲು ಇವೆ. ಪರಮೇಶ್ವರ್ ಕೇಸ್‌ನಲ್ಲಿ‌ ರಾಜಕೀಯ ಪ್ರೇರಿತ ದಾಳಿ ಅನಿಸಿದೆ. ಸುಪ್ರೀಂಕೋರ್ಟ್ ಕೂಡ ಗಮನ ಹರಿಸಿ‌ ಮಿತಿ ಮೀರುತ್ತಿದ್ದೀರಿ ಎಂದಿದೆ. ಅವರ ಅಬ್ಸರ್ವೇಷನ್ ಯಾವ ಕಾರಣಕ್ಕೆ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೋವಿಡ್ ಹೆಚ್ಚಳಕ್ಕೆ ಕಡಿವಾಣ

ಕೋವಿಡ್ ಕೇಸ್‌ಗಳ‌ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು. ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಟೆಸ್ಟಿಂಗ್ ಸೇರಿ ಎಲ್ಲಾ‌ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ತಿಳಿಸಿದ್ದಾರೆ.

ರಾಜ್ಯದಲ್ಲಿ ರೇಪ್ ಅಂಡ್ ಮರ್ಡರ್ ಪ್ರಕರಣ ಹೆಚ್ಚಾಗುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹಲವಾರು ರೇಪ್ ಅಂಡ್ ಮರ್ಡರ್ ಪ್ರಕರಣ ರಾಜ್ಯದಲ್ಲಿ ಎಲ್ಲಿ ಆಗ್ತಿವೆ?. ಬಿಜೆಪಿ ಕಾಲದಲ್ಲಿ ನಡೀತಿದ್ದ ಹತ್ಯೆ ಪ್ರಕರಣಗಳಿಗಿಂತ ನಮ್ಮ ಸರ್ಕಾರ ಬಂದ ಮೇಲೆ ಕಡಿಮೆ ಆಗಿದೆ. ರೇಪ್ ಅಂಡ್ ಮರ್ಡರ್ ಪ್ರಕರಣಕ್ಕೆ ಸರ್ಕಾರ ಸೂಕ್ತ ಕ್ರಮ ಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in