ಕನ್ನಡ ಸುದ್ದಿ  /  Karnataka  /  Cmak Event: Cmak Which Provides Solutions To Urban Problems Said Minister Mtb Nagaraju

CMAK Event: ನಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜ್ಞಾನ ಭಂಡಾ ಸಿಮ್ಯಾಕ್‌; ಸಚಿವ ಎಂಟಿಬಿ ನಾಗರಾಜು ಅಭಿಮತ

CMAK Event: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಿಮ್ಯಾಕ್ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಪೌರಾಡಳಿತ ಮತ್ತು ಸಣ್ಣ, ಸಾರ್ವಜನಿಕ ವಲಯ ಕೈಗಾರಿಕಾ ಸಚಿವ ಎನ್.ನಾಗರಾಜು ಮಾತನಾಡಿದರು.

ಪೌರಾಡಳಿತ ಮತ್ತು ಸಣ್ಣ ಹಾಗೂ ಸಾರ್ವಜನಿಕ ವಲಯ ಕೈಗಾರಿಕಾ ಸಚಿವ ಎನ್.ನಾಗರಾಜು (ಎಂಟಿಬಿ ನಾಗರಾಜು)
ಪೌರಾಡಳಿತ ಮತ್ತು ಸಣ್ಣ ಹಾಗೂ ಸಾರ್ವಜನಿಕ ವಲಯ ಕೈಗಾರಿಕಾ ಸಚಿವ ಎನ್.ನಾಗರಾಜು (ಎಂಟಿಬಿ ನಾಗರಾಜು)

ಬೆಂಗಳೂರು: ನಗರ ವ್ಯವಸ್ಥಾಪಕರು ಮತ್ತು ನಗರ ವೃತ್ತಿಪರರಿಗೆ ವೇದಿಕೆಯನ್ನು ಕಲ್ಪಿಸಿ, ಮಾಹಿತಿಯನ್ನು ಪ್ರಸಾರ ಮಾಡುವುದರೊಂದಿಗೆ, ನಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜ್ಞಾನ ಭಂಡಾರವಾಗಿ ಸಿಮ್ಯಾಕ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಪೌರಾಡಳಿತ ಮತ್ತು ಸಣ್ಣ ಹಾಗೂ ಸಾರ್ವಜನಿಕ ವಲಯ ಕೈಗಾರಿಕಾ ಸಚಿವ ಎನ್.ನಾಗರಾಜು (ಎಂ.ಟಿ.ಬಿ) ತಿಳಿಸಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಿಮ್ಯಾಕ್ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಿಮ್ಯಾಕ್‌ ಸಂಸ್ಥೆಯು ಹೊಸ ಪದ್ಧತಿಗಳು, ಪ್ರವೃತ್ತಿ ಮತ್ತು ಕಲ್ಪನೆಗಳತ್ತ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ನರಾಭಿವೃದ್ಧಿಯಲ್ಲಿ ಸದ್ಯ ಇರುವ ನೈಪುಣ್ಯದ ಪರಿಣಾಮಕಾರಿ ಬಳಕೆ ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದರು.

ಉತ್ತಮ ಪದ್ಧತಿಗಳ ದಾಖಲೀಕರಣವು ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ (ಸಿಮ್ಯಾಕ್‌) ಸಂಸ್ಥೆಯ ಒಂದು ಮುಖ್ಯ ಕಾರ್ಯಚಟುವಟಿಕೆಯಾಗಿದೆ. ಸಿಮ್ಯಾಕ್ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣದ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಗರ ವಲಯದಲ್ಲಿ ಸೇವೆಗಳನ್ನು ಒದಗಿಸುವಲ್ಲಿ ಉತ್ತಮ ಉಪಕ್ರಮಗಳನ್ನು ಅನುಷ್ಟಾನಗೊಳಿಸಿದ ನಗರ ಸ್ಥಳೀಯ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಮೆಚ್ಚುಗೆ ಸೂಚಿಸುವ ಗುರಿ ಹೊಂದಿರುತ್ತದೆ ಎಂದರು.

ಈ ಸಂಸ್ಥೆಯು ನಾಗರಿಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಅಧಿಕಾರಿಗಳು ಇದೇ ರೀತಿ ಕೆಲಸದಲ್ಲಿ ದಕ್ಷತೆಯನ್ನು ಅಳವಡಿಸಿಕೊಳ್ಳಬೇಕು. ತೆರಿಗೆ ಸಂಗ್ರಹದಲ್ಲಿ ಸರ್ಕಾರಕ್ಕೆ ಆದಾಯ ಬರುವ ಕೆಲಸ ಮಾಡಿದ್ದಾರೆ. ನಗರೋತ್ಥಾನ ಯೋಜನೆಯಡಿ 3,850 ಕೋಟಿ ಹಣ ಬಿಡುಗಡೆ ಮಾಡಿದ್ದು, 319 ಸ್ಥಳೀಯ ಸಂಸ್ಥೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರವು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೊ ಅಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ವಾರ್ಷಿಕ ವರದಿ ಹಾಗೂ ವೆಬ್‍ಸೈಟ್ ಲೋಕಾರ್ಪಣೆ ಮಾಡಿ, ಪ್ರಶಸ್ತಿ ಪ್ರದಾನ ಮಾಡಿದರು. ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಿಮ್ಯಾಕ್ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಿಮ್ಯಾಕ್ ಅಧ್ಯಕ್ಷ ತುಷಾರ್ ಗಿರಿನಾಥ್, ನಗರಾಭಿವೃದ್ಧಿ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಎಂ.ಎನ್., ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗೂ ಸಿಮ್ಯಾಕ್ ಸಂಸ್ಥೆಯ ಅಧ್ಯಕ್ಷ ಎನ್.ಜಯರಾಂ ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ, ಸಿಮ್ಯಾಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕು.ಮುಂಜುಶ್ರೀ ಎನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಗಮನಿಸಬಹುದಾದ ಸುದ್ದಿ

Har Payment Digital: ಪ್ರತಿ ಪಾವತಿಯೂ ಡಿಜಿಟಲ್‌ ಆಗಲಿ; ಈ ವಾರ ಡಿಜಿಟಲ್‌ ಪಾವತಿ ಜಾಗೃತಿ ವಾರ

ಡಿಜಿಟಲ್ ಪಾವತಿಗಳ ಜಾಗೃತಿ ವಾರ (ಡಿಪಿಎಡಬ್ಲ್ಯು) 2023 ಇಂದಿನಿಂದ ಮಾರ್ಚ್‌ 12 ರ ತನಕ ನಡೆಯಲಿದೆ. ತನ್ನಿಮಿತ್ತವಾಗಿ ಪ್ರತಿಯೊಬ್ಬ ನಾಗರಿಕರನ್ನು ಡಿಜಿಟಲ್ ಪಾವತಿಯ ಬಳಕೆದಾರರನ್ನಾಗಿ ಮಾಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ “ಮಿಷನ್ ಹರ್ ಪೇಮೆಂಟ್ ಡಿಜಿಟಲ್ (Har Payment Digital)” ಅನ್ನು ಪ್ರಾರಂಭಿಸಿದರು. ಡಿಜಿಟಲ್ ಪೇಮೆಂಟ್‌ ಅಪ್ನಾವೋ, ಔರಾನ್ ಕೊ ಭಿ ಸಿಖಾವೋ (ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಿ ಮತ್ತು ಇತರರಿಗೂ ಕಲಿಸಿ) ಎಂಬುದು ಈ ಜಾಗೃತಿ ಸಪ್ತಾಹದ ಥೀಮ್ ಎಂದು ಆರ್‌ಬಿಐ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point