Karnataka Rains: ಸುಳ್ಯದಲ್ಲಿ ಅತಿ ಹೆಚ್ಚು ಮಳೆ; ಕರಾವಳಿಯಲ್ಲಿ ಮಳೆ ಪ್ರಮಾಣ ಇಳಿಮುಖ, ತಾಪಮಾನ ಹೆಚ್ಚಳ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಸುಳ್ಯದಲ್ಲಿ ಅತಿ ಹೆಚ್ಚು ಮಳೆ; ಕರಾವಳಿಯಲ್ಲಿ ಮಳೆ ಪ್ರಮಾಣ ಇಳಿಮುಖ, ತಾಪಮಾನ ಹೆಚ್ಚಳ

Karnataka Rains: ಸುಳ್ಯದಲ್ಲಿ ಅತಿ ಹೆಚ್ಚು ಮಳೆ; ಕರಾವಳಿಯಲ್ಲಿ ಮಳೆ ಪ್ರಮಾಣ ಇಳಿಮುಖ, ತಾಪಮಾನ ಹೆಚ್ಚಳ

Dakshina Kannada Rain: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸೋಮವಾರ ಗರಿಷ್ಠ ಮಳೆಯಾಗಿದೆ. ಇದನ್ನು ಹೊರತುಪಡಿಸಿದರೆ, ದಕ್ಷಿಣೋತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇತ್ತು.

ಸುಳ್ಯದಲ್ಲಿ ಅತಿ ಹೆಚ್ಚು ಮಳೆ (ಪ್ರಾತಿನಿಧಿಕ ಚಿತ್ರ)
ಸುಳ್ಯದಲ್ಲಿ ಅತಿ ಹೆಚ್ಚು ಮಳೆ (ಪ್ರಾತಿನಿಧಿಕ ಚಿತ್ರ)

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕರ್ನಾಟಕ ಕರಾವಳಿ ಹಾಗೆಯೇ ಕೇರಳದ ಕನ್ನಡ ಕರಾವಳಿಯಾದ ಕಾಸರಗೋಡು ಜಿಲ್ಲೆ ಸೇರಿದಂತೆ ಕಡಲತೀರದಲ್ಲಿ ಬಿಸಿಲ ಝಳ ಸೋಮವಾರ ಜಾಸ್ತಿ ಕಂಡುಬಂದಿದ್ದು, ಮಳೆ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.

ಆದಾಗ್ಯೂ ರಾಜ್ಯದಲ್ಲಿ ಕಂಡುಬಂದ ಮಳೆಯನ್ನು ಲಕ್ಷಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಗರಿಷ್ಠ ಮಳೆಯಾಗಿದೆ. ಇದನ್ನು ಹೊರತುಪಡಿಸಿದರೆ, ದಕ್ಷಿಣೋತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇತ್ತು.

ರಾಜ್ಯದ ಕರಾವಳಿ ಹಾಗೂ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ಹಾಗೂ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಂಗಳವಾರದ ಮುನ್ಸೂಚನೆಯನ್ನು ನೀಡಿದೆ.

ಮಳೆ ವಿವರ ಹೀಗಿದೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಲ್ಲೂರು ಕೆಮ್ರಾಜೆಯಲ್ಲಿ 41 ಮಿ.ಮೀ. ಮಳೆಯಾಗಿದೆ. ಪುತ್ತೂರು ಕೊಂಬಾರುವಿನಲ್ಲಿ 39, ಮಡಪ್ಪಾಡಿಯಲ್ಲಿ 37, ಕೇಪುವಿನಲ್ಲಿ 33.5, ಸಂಪಾಜೆಯಲ್ಲಿ 32, ಅರಂತೋಡುವಿನಲ್ಲಿ 30.5, ಕನಕಮಜಲುವಿನಲ್ಲಿ 27.5 ಮಿ.ಮೀ, ಉಬರಡ್ಕ ಮಿತ್ತೂರಿನಲ್ಲಿ 26, ಪುತ್ತೂರಿನ ಕೊಳ್ತಿಗೆಯಲ್ಲಿ 23.5, ಬೆಳ್ತಂಗಡಿ ಮರೋಡಿಯಲ್ಲಿ 23, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ನಿಲ್ಕುಂದದಲ್ಲಿ 38, ಕಾರವಾರದ ಕದ್ರಾದಲ್ಲಿ 23.5, ಭಟ್ಕಳದ ಬೆಂಗ್ರೆಯಲ್ಲಿ 20, ಕಾರವಾರದ ದೇವಳಮಕ್ಕಿಯಲ್ಲಿ 20, ಕೋಡ್ಕಣಿಯಲ್ಲಿ 19.5, ಕೆರವಾಡಿಯಲ್ಲಿ 18.5, ಸಿದ್ದಾಪುರ ಕೊರ್ಲಕೈನಲ್ಲಿ 18, ಮರುಕೇರಿಯಲ್ಲಿ 18, ವೈಲವಾಡದಲ್ಲಿ 17 ಮಿ.ಮೀ. ಮಳೆಯಾಗಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner