ಕನ್ನಡ ಸುದ್ದಿ  /  Karnataka  /  Coffee Board Of India: Does The State Need A Coffee Board? What Is The Benefit To The Growers?; Mla M P Kumaraswamy S Question In The House

Coffee Board of India: ಕಾಫಿ ಮಂಡಳಿ ರಾಜ್ಯಕ್ಕೆ ಬೇಕಾ? ಅದರಿಂದ ಬೆಳೆಗಾರರಿಗೇನು ಪ್ರಯೋಜನ?; ಸದನದಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಶ್ನೆ

Karnataka Assembly Session 2022: ಕಾಫಿ ಮಂಡಳಿ ರದ್ದುಪಡಿಸುವಂತೆ ಮಲೆನಾಡು ಶಾಸಕ ಎಂ.ಪಿ.ಕುಮಾರ ಸ್ವಾಮಿ ವಿಧಾನ ಸಭೆಯಲ್ಲಿ ಆಗ್ರಹಿಸಿದ್ದಾರೆ. ಅಲ್ಲದೆ, ಕಾಫಿ ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ವ್ಯಾಪ್ತಿಗೆ ತರಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು: ಕಾಫಿನಾಡಿನ ರೈತರಿಗೆ ಉಪಯೋಗವಿಲ್ಲದ ಈಗಾಗಲೇ ಅಸ್ತಿತ್ವದಲ್ಲಿರುವ ಕಾಫಿ ಅಭಿವೃದ್ಧಿ ಮಂಡಳಿಯನ್ನು ರದ್ದುಗೊಳಿಸಬೇಕು. ಕಾಫಿ ಬೆಳೆಯನ್ನು ಫಸಲ್‌ ಬಿಮಾ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹಿಸಿದರು.

ಅವರು ವಿಧಾನ ಸಭೆ (Karnataka Assembly Session 2022) ಯಲ್ಲಿಂದು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿ, ಕಾಫಿ ಅಭಿವೃದ್ಧಿ ಮಂಡಳಿಯು ಕಾಫಿ ಬೆಳೆ ರೈತರಿಗೆ 2018ರಿಂದ ಇದುವರೆಗೂ ಯಾವುದೇ ಅತಿವೃಷ್ಟಿ ಪರಿಹಾರ ನೀಡಿಲ್ಲ. ಈ ಭಾರಿ ಮಲೆನಾಡು ಭಾಗದಲ್ಲಿ ಶೇ 33 ಮಳೆಯಾಗಿದೆ ಎಂದು ಕೃಷಿ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ವರದಿ ನೀಡಿದೆ. ಆದರೆ ಕಾಫಿ ಅಭಿವೃದ್ಧಿ ಮಂಡಳಿ ಶೇ 22ರಷ್ಟು ಮಳೆಯಾಗಿದೆ ಎಂದು ವರದಿ ನೀಡಿದೆ. ಆದರೆ ಈ ಬಾರಿ ಮಲೆನಾಡು ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ. ಈ ರೀತಿ ಸುಳ್ಳು ವರದಿ ನೀಡಿ ಜನರ ಹಾದಿ ತಪ್ಪಿಸುವುದು ಸರಿಯಲ್ಲ ಎಂದು ತಿಳಿಸಿದರು.

ಕಾಫಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಉಪಯೋಗವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮನ್ನು ನಿರ್ಲಕ್ಷಿಸಿವೆ ಎಂಬ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಕಾಫಿಯಿಂದ ಈ ಹಿಂದೆ ವಾರ್ಷಿಕವಾಗಿ ವಿದೇಶಿ ವಿನಿಮಯದಿಂದ ಐದು ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತಿತು. ಪ್ರಸ್ತುತ 9 ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತದೆ ಎಂದು ಹೇಳಿದರು.

ಕಾಫಿಯನ್ನು ದೊಡ್ಡ ಉದ್ಯಮ, ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸಿರುವುದು ಸರಿಯಲ್ಲ. ಇದನ್ನು ಕೃಷಿ ಬೆಳೆಯನ್ನಾಗಿ ಪರಿಗಣಿಸಿದರೆ ರೈತರಿಗೆ ಸರ್ಕಾರದ ಸವಲತ್ತುಗಳು ದೊರೆಯಲಿದೆ. ಕೇಂದ್ರ ಫಸಲ್ ಬೀಮಾ ಯೋಜನೆಯ ವ್ಯಾಪ್ತಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.

ಮಲೆನಾಡು ಭಾಗದಲ್ಲಿ ಪ್ರತಿವರ್ಷ ಹೆಚ್ಚು ಪ್ರಮಾಣದ ಮಳೆಯಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲೆಯನ್ನು ಅತಿವೃಷ್ಢಿ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಪ್ರಸ್ತಾಪವಾದ ಇತರೆ ವಿಚಾರಗಳು

Karnataka Assembly Session 2022: ರಾಯಚೂರು ಭಾಗದ ಕೃಷಿಕರ ಬಹುಕಾಲದ ಬೇಡಿಕೆಯ ಎನ್‌ಆರ್‌ಬಿಸಿ -5ಎ ಕಾಲುವೆ ಯೋಜನೆ (NRBC 5-A canal project) ಅನುಷ್ಠಾನ ಸಾಧ್ಯ ಇಲ್ಲ ಎಂದು ಸರ್ಕಾರ ಇಂದು ವಿಧಾನಸಭೆಗೆ ತಿಳಿಸಿದೆ. ಯಾಕೆ ಏನು ಎಂಬ ವಿವರ ಇಲ್ಲಿದೆ ಗಮನಿಸಿ. NRBC 5-A canal project: ಎನ್‌ಆರ್‌ಬಿಸಿ-5ಎ ಕಾಲುವೆ ನಿರ್ಮಾಣ ಸಾಧ್ಯ ಇಲ್ಲ!; ಸರ್ಕಾರ ಕಡ್ಡಿಮುರಿದಂತೆ ಹೀಗೇಕೆ ಹೇಳಿತು? ವಿವರ ಇಲ್ಲಿದೆ

Karnataka Assembly Session 2022: ವಿಧಾನ ಸಭೆ ಕಲಾಪದಲ್ಲಿ ಇಂದು ದಾಸರಹಳ್ಳಿ ಪೀಣ್ಯ ಟ್ರಾಫಿಕ್‌ ಜಾಮ್‌ (Peenya Flyover Traffic Jam) ವಿಚಾರ ಪ್ರಸ್ತಾಪವಾಗಿದೆ. ಹೆದ್ದಾರಿಯಲ್ಲಿ ಟೋಲ್‌ ಶುಲ್ಕ ಸಂಗ್ರಹ ಮಾಡಿಕೊಂಡು ಸಂಚಾರ ದಟ್ಟಣೆ ನಿರ್ವಹಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕ ಮಂಜುನಾಥ್‌. ಸರ್ಕಾರದ ಉತ್ತರ ಏನಿತ್ತು ಗಮನಿಸಿ… Peenya Flyover Traffic Jam: ಟ್ರಾಫಿಕ್‌ ಜಾಮ್‌ ಆದ್ರೂ ಟೋಲ್‌ ವಸೂಲಿ ಸರಿಯಾ? ಶಾಸಕರ ಪ್ರಶ್ನೆ; ಸರ್ಕಾರದ ಉತ್ತರ ಏನಿತ್ತು ಗಮನಿಸಿ..

Karnataka Assembly Session 2022: ವಿಧಾನಸಭೆಯ ಇಂದಿನ ಕಲಾಪದ ನಡುವೆ, ಜಿಮ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರೊಟೀನ್‌ ಪೌಡರ್‌ (Protein Powder) ವಿಚಾರ ಗಮನಸೆಳೆದಿದೆ. ಶಾಸಕ ಸತೀಶ್‌ ರೆಡ್ಡಿ ಈ ವಿಷಯ ಪ್ರಸ್ತಾಪಿಸಿದ್ದು, ಆರು ನಿಮಿಷ ಚರ್ಚೆಗೆ ಕಾರಣವಾಯಿತು. ಅದರ ವಿವರ ಇಲ್ಲಿದೆ. Protein Powder: ದಪ್ಪ ಇರೋರು ಪ್ರೊಟೀನ್‌ ಪೌಡರ್‌ನಿಂದ 30 ದಿನದಲ್ಲಿ ಸಣ್ಣ ಆಗೋದು ಸಾಧ್ಯವಾ?

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಮೀಸಲಾತಿಗೆ ಸಂಬಂಧಿಸಿದಂಯತೆ ತಾವು ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತರಾಗದ ಯತ್ನಾಳ್‌, ಪ್ರತಿಭಟನೆಗೆ ಮುಂದಾದರು. Panchamasali Reservation: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಸದನದ ಬಾವಿಗಿಳಿದ ಯತ್ನಾಳ್‌, ಹೆಬ್ಬಾಳ್ಕರ್!‌

IPL_Entry_Point