ಕನ್ನಡ ಸುದ್ದಿ  /  Karnataka  /  Congress Can Not Shake The Strong Roots Of Bjp Says Cm Basavaraj Bommai

CM Bommai on Congress: ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಬಿಜೆಪಿ ಗಟ್ಟಿ ಬೇರುಗಳನ್ನ ಅಲುಗಾಡಿಸಲು ಆಗಲ್ಲ: ಸಿಎಂ ಬೊಮ್ಮಾಯಿ

ನಾವು ಪುನಃ ಲೋಕಾಯುಕ್ತವನ್ನು ಪ್ರಾರಂಭ ಮಾಡಿದ್ದು, 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡುತ್ತಿದ್ದೇವೆ. ಕಾಂಗ್ರೆಸ್ ಬಣ್ಣ ಬಯಲಾಗಲಿದೆ. ಇವರ ಭ್ರಷಾಚಾರ ಜನರಿಗೆ ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯ ಹಿರೇಕೆರೂರಿನಲ್ಲಿ ನಡೆದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದರು.
ಹಾವೇರಿಯ ಹಿರೇಕೆರೂರಿನಲ್ಲಿ ನಡೆದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದರು.

ಹಾವೇರಿ(ಹಿರೇಕೆರೂರು): ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಚಾರಕ್ಕೆ ಪೈಪೋಟಿ ನೀಡುತ್ತಿರುವ ಬಿಜೆಪಿ ಕೂಡ ಜನಸಂಕಲ್ಪ ಕಾರ್ಯಕ್ರಮಗಳ ಮೂಲಕ ಮತದಾರರ ಮನಗೆಲ್ಲುವ ಕೆಲಸ ಮಾಡುತ್ತಿದೆ. ಇದೇ ವೇಳೆ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಸಿಎಂ ಬೊಮ್ಮಾಯಿ ಟಕ್ಕರ್ ನೀಡುತ್ತಿದ್ದಾರೆ.

ಬಿಜೆಪಿ ಇಡೀ ಕರ್ನಾಟಕದಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ಪಕ್ಷ. ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಭಾರತೀಯ ಜನತಾ ಪಾರ್ಟಿಯ ಸಣ್ಣ ಎಲೆಯನ್ನೂ, ನಮ್ಮ ಗಟ್ಟಿ ಬೇರುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಹಿರೇಕೆರೂರು ತಾಲ್ಲೂಕಿನಲ್ಲಿ ಏರ್ಪಡಿಸಿದ್ದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ, ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೂ ಸಂಘಟಿತವಾಗಿರುವ ಪಕ್ಷ. ಬಿಜೆಪಿಗೆ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರ ನಾಯಕತ್ವವಿದೆ. ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದಿದು ಹೇಳಿದ್ದಾರೆ.

ಯು.ಬಿ.ಬಣಕಾರ್ ಕಾಂಗ್ರೆಸ್ ಸೇರಿದ್ದಾರೆ. ಅವರ ಸಮಯ ಸರಿಯಿಲ್ಲ. ಯಡಿಯೂರಪ್ಪ ನವರು ರಾಜಕೀಯ ಬೆಂಬಲ ನೀಡಿದವರು. ಅಧಿಕಾರವಿಲ್ಲದಾಗಲೂ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಚಿವ ಸಂಪುಟದ ಸ್ಥಾನ ನೀಡಿ ಗೌರವ ನೀಡಿದ್ದರು. ಬಿಜೆಪಿಯಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಗಿದೆ. ಆದರೆ ಯಾವ ಪಕ್ಷ ಅವರಿಗೆ ಸ್ಥಾನಮಾನ ಕೊಟ್ಟಿತ್ತೋ, ಆ ಪಕ್ಷವನ್ನು ಬಿಟ್ಟು, ಯಾವ ಪಕ್ಷವನ್ನು ನಿರಂತರವಾಗಿ ವಿರೋಧ ಮಾಡಿಕೊಂಡು ಬಂದಿದ್ದರೋ ಅದೇ ಪಕ್ಷವನ್ನು ಸೇರಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

ಅಭಿವೃದ್ಧಿ ಪರ ಮತ್ತು ವಿರೋಧ ಶಕ್ತಿಗಳ ನಡವೆ ಸಂಘರ್ಷ

ಈ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿಗೆ ಕಲ್ಲುಹಾಕುವ ಕೆಲಸ ಮಾಡುವ ಇನ್ನೊಂದು ವರ್ಗವಿದೆ. ಸಕ್ಕರೆ ಕಾರ್ಖಾನೆ ಮಾಡಲು, ರಸ್ತೆಗಳ ಅಭಿವೃದ್ದಿಗೆ ಕ್ಯಾತೆ, ರೈತರಿಗೆ ನ್ಯಾಯ ಕೊಡಿಸಬೇಕೆಂದರೆ ಕ್ಯಾತೆ ತೆಗೆದು. ಅಭಿವೃದ್ಧಿಗೆ ವಿರೋಧವಾದ ಶಕ್ತಿ. ಅಭಿವೃದ್ಧಿಯ ಪರ ಮತ್ತು ವಿರೋಧ ಶಕ್ತಿಗಳ ನಡವೆ ಸಂಘರ್ಷ ಆಗುತ್ತದೆ. ತಾವೆಲ್ಲರೂ ನಿಮ್ಮ ಮಕ್ಕಳು ಹಾಗೂ ತಾಲ್ಲೂಕಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಪರವಾಗಿ ಅಂದರೆ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು. .

ಕಾಂಗ್ರೆಸ್ ತನ್ನ 10 ವರ್ಷಗಳ ಆಡಳಿತದಲ್ಲಿ ನೀರು ಕೊಡಲಿಲ್ಲ

ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಭಾಗಕ್ಕೆ ನೀರು ಕೊಡಲು ಕಾಂಗ್ರೆಸ್ಸಿಗೆ 10 ವರ್ಷಗಳ ಆಡಳಿತದಲ್ಲಿ ಸಾಧ್ಯವಾಗಿರಲಿಲ್ಲ. ತುಂಗಾ ಮೇಲ್ದಂಡೆ ಯೋಜನಯೆಯಡಿ 1 ಲಕ್ಷ ಎಕರೆ ಪ್ರದೇಶಕ್ಕೆ ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು, ಹಾವೇರಿ, ಹಾನಗಲ್ ತಾಲ್ಲೂಕುಗಳಿಗೆ ನೀರಾವರಿ ಯೋಜನೆ ನೀಡಲಾಗಿದೆ. ಸಿದ್ಧರಾಮಯ್ಯ ಅವರು ಇಲ್ಲಿಗೆ ಬಂದು ನೋಡಬೇಕು. ನಮ್ಮದೇ ಆದ ಡೈರಿ ಇರಬೇಕು ಎಂದು ಬಹಳ ದಿನಗಳ ಬೇಡಿಕೆಯಾಗಿತ್ತು. ಕಾಂಗ್ರೆಸ್ ಸರ್ಕಾರವಿದ್ದಾಗ ನಮ್ಮ ಹಾಲು ಉತ್ಪಾದಕರಿಗೆ ಸರಿಯಾದ ಬೆಲೆ ಸಿಗಬೇಕು ಎಂದು ಹೋರಾಟ ಮಾಡಿದ್ದೆವು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಡೈರಿಗೆ ಅನುಮೋದನೆ ದೊರೆತು. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 100 ಕೋಟಿ ರೂ.ಗಳನ್ನು ಒದಗಿಸಿ, ಹಾವೇರಿ ಮೆಗಾ ಡೈರಿಯನ್ನು ಉದ್ಘಾಟಿಸುತ್ತಿದ್ದೇವೆ. ಸಿದ್ಧರಾಮಯ್ಯ ಅವರು ಕೂಡ ಬರಬಹುದು ಎಂದು ವ್ಯಂಗವಾಡಿದರು.

ಭ್ರಷ್ಟಾಚಾರದ ಹಗರಣಗಳು

ದೀನದಲಿತರ ಹಾಸಿಗೆ ದಿಂಬಿನಲ್ಲಿ ಭ್ರಷ್ಟಾಚಾರ ಮಾಡಿದರು. ಸಣ್ಣ ನೀರಾವರಿಯಲ್ಲಿ 40 ಕೋಟಿ ಗಿಂತ ಹೆಚ್ಚು ಹಣವನ್ನು ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡದೇ ಬಿಲ್ಲು ತೆಗದರು. ಅಧಿಕಾರಿಗಳು ಇದಕ್ಕಾಗಿ ಅಮಾನತುಗೊಂಡರು. ಎಲ್ಲಿ ಕೈಹಾಕಿದರಲ್ಲಿ ಭ್ರಷ್ಟಾಚಾರದ ಹಗರಣಗಳು. ಸುಮಾರು 59 ಪ್ರಕರಣಗಳನ್ನು ಮುಚಗ್ಚಿಹಾಕಲು ಲೋಕಾಯುಕ್ತವನ್ನೇ ಮುಚ್ಚಿಹಾಕಿದರು. ಒಂದು ಸ್ವತಂತ್ರ ಸಂಸ್ಥೆಯನ್ನು ಮುಚ್ಚಿಹಾಕಿ ಕೈಗೊಂಬೆಯಾಗಿರುವ ಎಸಿಬಿ ಪ್ರಾರಂಭಿಸಿದರು. ನಾವು ಪುನ: ಲೋಕಾಯುಕ್ತವನ್ನು ಪ್ರಾರಂಭ ಮಾಡಿದ್ದು 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡುತ್ತಿದ್ದೇವೆ. ಕಾಂಗ್ರೆಸ್ ಬಣ್ಣ ಬಯಲಾಗಲಿದೆ. ನಿಮ್ಮ ಭ್ರಷಾಚಾರ ಜನರಿಗೆ ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

IPL_Entry_Point