ಕನ್ನಡ ಸುದ್ದಿ  /  Karnataka  /  Congress Leader Rahul Gandhi Rides Pillion On Delivery Boy Scooter In Bengaluru Karnataka Election News In Kannada Rst

Karnataka Assembly polls: ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ ಜೊತೆ ಸ್ಕೂಟರ್‌ನಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡಿದ ರಾಹುಲ್‌ಗಾಂಧಿ

Rahul Gandhi Scooter Ride: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೆಗಾ ರೋಡ್‌ ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ, ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ (Rahul Gandhi) ಡೆಲಿವರಿ ಬಾಯ್‌ ಜೊತೆಗೆ ಸ್ಕೂಟರ್‌ನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡಿದ ಘಟನೆ ನಡೆದಿದೆ. ರಾಹುಲ್‌ ಪಿಲಿಯನ್‌ ರೈಡರ್‌ ಆಗಿದ್ದ ವಿಡಿಯೊ ಈಗ ವೈರಲ್‌ ಆಗುತ್ತಿದೆ.

ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ ಜೊತೆ ಹಿಂದೆ ಕುಳಿತು ಪ್ರಯಾಣ ಮಾಡುತ್ತಿರುವ ರಾಹುಲ್‌ ಗಾಂಧಿ (ಎಡಚಿತ್ರ)
ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ ಜೊತೆ ಹಿಂದೆ ಕುಳಿತು ಪ್ರಯಾಣ ಮಾಡುತ್ತಿರುವ ರಾಹುಲ್‌ ಗಾಂಧಿ (ಎಡಚಿತ್ರ)

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಹಾಗೂ ಇಂದು ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ್ದರು. ಪ್ರಧಾನಿ ಮೋದಿಯವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ತುಂಬಿತ್ತು. ಹೂದಳಗಳನ್ನು ಚೆಲ್ಲುವ ಮೂಲಕ ಪ್ರಧಾನಿ ಅವರನ್ನು ಕಣ್ತುಂಬಿಕೊಂಡಿತ್ತು ಬೆಂಗಳೂರು ನಗರ.

ಮೋದಿ ಬೆಂಗಳೂರು ರೋಡ್‌ ಶೋ ಮುಗಿದ ಸ್ವಲ್ಪ ಹೊತ್ತಿನಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಡೆಲಿವರಿ ಬಾಯ್‌ ಜೊತೆ ಸ್ಕೂಟರ್‌ನಲ್ಲಿ ಹಿಂದೆ ಕುಳಿತು ಪಯಣಿಸಿದ್ದಾರೆ. ಡೆಲಿವರಿ ಬಾಯ್‌ಗೆ ಪೆವಿಲಿಯನ್‌ ರೈಡರ್‌ ಆಗಿದ್ದ ರಾಹುಲ್‌ಗಾಂಧಿ ಹೋಟೆಲ್‌ ಶಾಂಗ್ರಿಲಾವರೆಗೆ ಪ್ರಯಾಣಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಿ ಬೆಂಗಳೂರಿಗೆ ಬಂದಿದ್ದ ರಾಗಾ ಸುಮಾರು 2 ಕಿಲೋಮೀಟರ್‌ ಸ್ಕೂಟರ್‌ನಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಕೊನೆಯ ಹಂತದ ಪ್ರಚಾರ ಕಾರ್ಯಗಳು ಜೋರಾಗಿಯೇ ಸಾಗುತ್ತಿವೆ. ಅಲ್ಲದೆ ಮತದಾರರನ್ನು ಓಲೈಸಲು ಹಲವು ರೀತಿಯ ಕಸರತ್ತುಗಳನ್ನು ಮಾಡುತ್ತಿವೆ.

ಏತನ್ಮಧ್ಯೆ, ಪ್ರಧಾನಿ ಮೋದಿ ಭಾನುವಾರ ನಗರದಲ್ಲಿ ಮೆಗಾ ರೋಡ್‌ ಶೋ ನಡೆಸಿದರು. ರಸ್ತೆಯಲ್ಲಿ ಮಾರ್ಗದ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನಸಮೂಹವನ್ನು ನೋಡಿ ಕೈ ಬೀಸಿದ ಮೋದಿ, ಹೂವುಗಳನ್ನು ಚೆಲ್ಲಿದರು.

ಹೊಸ ತಿಪ್ಪಸಂದ್ರ ರಸ್ತೆಯಲ್ಲಿರುವ ಕೆಂಪೇಗೌಡ ಪ್ರತಿಮೆಯಿಂದ ಆರಂಭವಾದ ಪ್ರಧಾನಿ ಮೋದಿ ರೋಡ್‌ ಶೋ ಟ್ರಿನಿಟಿ ವೃತ್ತದಲ್ಲಿ ಅಂತ್ಯಗೊಂಡಿತು. ಸುಮಾರು 10 ಕಿಲೋಮೀಟರ್‌ ಉದದ್ದ ಈ ರೋಡ್‌ ಶೋನಲ್ಲಿ ಮೋದಿ ಗಮನ ಸೆಳೆದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಕೊನೆಯ ಹಂತದ ಚುನಾವಣಾ ಪ್ರಚಾರವನ್ನು ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಇದಕ್ಕೂ ಮುನ್ನ, ಶನಿವಾರ (ಮೇ 6) ಪ್ರಧಾನಿ ಮೋದಿ ನಗರದಲ್ಲಿ ಸುಮಾರು 26 ಕಿಮೀ ರೋಡ್ ಶೋ ನಡೆಸಿದ್ದು, 13 ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಭಾನುವಾರ (ಏಪ್ರಿಲ್7) ಬೃಹತ್ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯ ಬಿಜೆಪಿ ಬೆಂಬಲಿಗರು ಅಮಿತ್ ಶಾ ಅವರ ವಾಹನವನ್ನು ಸುತ್ತುವರಿದು ಮೆರವಣಿಗೆಗೆ ತೆರಳಿದರು. ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರನ್ನು ಷಾ ಕೈ ಬೀಸಿ ಸ್ವಾಗತಿಸಿದರು.

ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ

Karnataka Election 2023: ಬಜರಂಗ ದಳವನ್ನು ಬಜರಂಗ ಬಲಿ ಜೊತೆ ಸಮೀಕರಣ ಮಾಡಿದ್ದು ಹೇಗೆ? ಬಿಜೆಪಿಯನ್ನು ಪ್ರಶ್ನಿಸಿದ ಪಿ ಚಿದಂಬರಂ

ಬಜರಂಗ ದಳವನ್ನು ಬಜರಂಗ ಬಲಿ ಜೊತೆ ಸಮೀಕರಣ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ʼನಮ್ಮ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿಲ್ಲ. ದ್ವೇಷ ಪ್ರಚೋದನೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ಕಾನೂನಿನ ಅಡಿಯಲ್ಲಿ ನಿರ್ಣಾಯಕ ಕ್ರಮ' ಕೈಗೊಳ್ಳಲಾಗುವುದು ಎಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಕಾವು ಜೋರಾಗಿಯೇ ಇದೆ. ಅಬ್ಬರದ ಪ್ರಚಾರ ಕಾರ್ಯದ ನಡುವೆ ಪ್ರತಿಪಕ್ಷಗಳ ವಾಗ್ದಾಳಿ ಭರವು ಹೆಚ್ಚಿದೆ.