ಕನ್ನಡ ಸುದ್ದಿ  /  Karnataka  /  Corona Dose Fertility Problem Siddaramaiah Nalin Kumar Kateel

Siddaramaiah: ಕೊರೊನಾ ಲಸಿಕೆ ಪಡಿಬೇಡಿ, ಪಡೆದ್ರೆ ಮಕ್ಕಳಾಗೋಲ್ಲ ಅಂದಿದ್ರಂತೆ ಸಿದ್ದರಾಮಯ್ಯ: ನಳೀನ್‌ ಕುಮಾರ್‌ ಟೀಕೆ

ಕೊರೊನಾ ಲಸಿಕೆ ಪಡೆದರೆ ಮಕ್ಕಳಾಗೊಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡದ ಕೆಂಪವಾಡದಲ್ಲಿ ಇಂದು ನಳಿನ್‌ ಕುಮಾರ್‌ ಕಟೀಲ್‌ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

Siddaramaiah: ಕೊರೊನಾ ಲಸಿಕೆ ಪಡಿಬೇಡಿ, ಪಡೆದ್ರೆ ಮಕ್ಕಳಾಗೋಲ್ಲ ಅಂದ್ರಂತೆ ಸಿದ್ದರಾಮಯ್ಯ
Siddaramaiah: ಕೊರೊನಾ ಲಸಿಕೆ ಪಡಿಬೇಡಿ, ಪಡೆದ್ರೆ ಮಕ್ಕಳಾಗೋಲ್ಲ ಅಂದ್ರಂತೆ ಸಿದ್ದರಾಮಯ್ಯ

ಬೆಳಗಾವಿ: ಕೊರೊನಾ ಲಸಿಕೆ ಪಡೆದರೆ ಮಕ್ಕಳಾಗೊಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡದ ಕೆಂಪವಾಡದಲ್ಲಿ ಇಂದು ನಳಿನ್‌ ಕುಮಾರ್‌ ಕಟೀಲ್‌ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ದೇಶವು ಕೊರೊನಾ ಲಸಿಕೆ ವಿಷಯದಲ್ಲಿ ಕ್ರಾಂತಿ ಮಾಡಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಲಸಿಕಾ ರಾಜಕಾರಣ ಮಾಡುತ್ತಿದೆ. ಇದೇ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾದ ಸಿದ್ರಾಮಣ್ಣ ಮಾತ್ರ ಲಸಿಕೆ ಕುರಿತು ಬೇರೆಯೇ ಹೇಳಿದ್ರು. ಲಸಿಕೆ ಪಡೆಯಬೇಡಿ, ಲಸಿಕೆ ಪಡೆದರೆ ಮಕ್ಕಳಾಗೊಲ್ಲ ಅಂತಿದ್ರು. ಹೀಗೆ ಹೇಳಿದ ಅವರೇ ಲಸಿಕೆ ಪಡೆದ್ರು.

ರಾಹುಲ್‌ ಗಾಂಧಿ ಕೂಡ ಮೋದಿಯನ್ನು ಟೀಕಿಸುವ ಭರದಲ್ಲಿ ಲಸಿಕೆಯ ಕುರಿತು ಏನೇನೋ ಹೇಳಿದ್ರು. ಆದ್ರೆ ಅವರೇ ರಾತ್ರಿ ವೇಳೆ ಲಸಿಕೆ ಪಡೆದಿದ್ದಾರೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಟೀಕಿಸಿದ್ದಾರೆ.

ಇನ್ನು ಸಿದ್ದರಾಮಯ್ಯಾವರ ಹುಟ್ಟುಹಬ್ಬಕ್ಕೆ 75 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ಬಂತು, ಭ್ರಷ್ಟಾಚಾರ ಮಾಡದೆ ಇಷ್ಟೊಂದು ಹಣ ತಂದಿದ್ದಾರ? ಪರ್ಸೆಂಟೇಜ್‌ ಹಣದಲ್ಲಿ ಬದುಕೋದು ಕಾಂಗ್ರೆಸ್‌, ನಾವಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಶ್ರೀಮಂತ ಮನೆತನದಿಂದ ಬಂದವರಲ್ಲ. ಆದರೂ ಅಷ್ಟೊಂದು ಕೋಟಿ ಎಲ್ಲಿಂದ ಖರ್ಚು ಮಾಡಿದ್ದಾರೆ. ದಾಖಲೆ ಇಲ್ಲದೆ ಮಾತನೋಡೋದೇ ಇವರ ಕೆಲಸ ಎಂದು ಅವರು ಟೀಕಿಸಿದ್ದಾರೆ.

ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ನ ಎರಡನೇ ಡೋಸ್ ಲಸಿಕೆ ಪಡೆದುಕೊಂಡೆ. ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೊನಾವನ್ನು ಹಿಮ್ಮೆಟ್ಟಿಸುವತ್ತ ಒಂದಾಗಿ ಶ್ರಮಿಸಬೇಕಿದೆ ಎಂದು ಸಿದ್ದರಾಮಯ್ಯ ಈ ಹಿಂದೆ ಟ್ವಿಟ್‌ ಮಾಡಿದ್ದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು.

ಲಸಿಕೆ ಹಾಕಿಸಿಕೊಳ್ಳುವ ವೇಳೆ ಮಾಜಿ ಸಚಿವ ಜಮೀರ್ ಅಹಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರಿಗೆ ಸಾಥ್ ನೀಡಿದ್ದರು. ಇತ್ತ ಸಿದ್ದರಾಮಯ್ಯನವರೊಂದಿಗೆ ಲಸಿಕೆಗಾಗಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿದ್ದರಾಮಯ್ಯನವರಿಗೆ ಹಲವು ರೀತಿಯಲ್ಲಿ ವ್ಯಂಗ್ಯವಾಡಿದ್ದರು.

IPL_Entry_Point