ಕನ್ನಡ ಸುದ್ದಿ  /  ಕರ್ನಾಟಕ  /  ಮಾಜಿ ಸಿಎಂ ಜಯಲಲಿತಾಗೆ ಸೇರಿದ ಚಿನ್ನಾಭರಣ ಸಂಬಂಧಿಕರಿಗೇಕಿಲ್ಲ, ಮಾ 6, 7 ರಂದು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಇಲ್ಲಿದೆ ವಿವರ

ಮಾಜಿ ಸಿಎಂ ಜಯಲಲಿತಾಗೆ ಸೇರಿದ ಚಿನ್ನಾಭರಣ ಸಂಬಂಧಿಕರಿಗೇಕಿಲ್ಲ, ಮಾ 6, 7 ರಂದು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಇಲ್ಲಿದೆ ವಿವರ

ಮಾಜಿ ಸಿಎಂ ಜಯಲಲಿತಾಗೆ ಸೇರಿದ ಚಿನ್ನಾಭರಣ ಸಂಬಂಧಿಕರಿಗೇಕಿಲ್ಲ. ಅವರ ಮನವಿಯನ್ನು ಕೋರ್ಟ್ ಯಾಕೆ ಮಾನ್ಯ ಮಾಡಿಲ್ಲ. ಮಾ 6, 7 ರಂದು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡಲು ಕೋರ್ಟ್ ಸೂಚನೆ ನೀಡಿದೆ. ಇಲ್ಲಿದೆ ಆ ವಿದ್ಯಮಾನದ ವಿವರ.

ಮಾಜಿ ಸಿಎಂ ಜಯಲಲಿತಾಗೆ ಸೇರಿದ ಚಿನ್ನಾಭರಣ ಸಂಬಂಧಿಕರಿಗೇಕಿಲ್ಲ? ಬೆಂಗಳೂರು ಕೋರ್ಟ್‌ ಹೇಳಿದ್ದೇನು, ತಮಿಳುನಾಡು ಸರ್ಕಾರಕ್ಕೆ  ಮಾ 6, 7 ರಂದು ಹಸ್ತಾಂತರ ನಡೆಯಲಿದೆ ಈ ವಿದ್ಯಮಾನದ ವಿವರ ಇಲ್ಲಿದೆ.
ಮಾಜಿ ಸಿಎಂ ಜಯಲಲಿತಾಗೆ ಸೇರಿದ ಚಿನ್ನಾಭರಣ ಸಂಬಂಧಿಕರಿಗೇಕಿಲ್ಲ? ಬೆಂಗಳೂರು ಕೋರ್ಟ್‌ ಹೇಳಿದ್ದೇನು, ತಮಿಳುನಾಡು ಸರ್ಕಾರಕ್ಕೆ ಮಾ 6, 7 ರಂದು ಹಸ್ತಾಂತರ ನಡೆಯಲಿದೆ ಈ ವಿದ್ಯಮಾನದ ವಿವರ ಇಲ್ಲಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರಿಗೆ ವಿಧಿಸಿದ್ದ 100 ಕೋಟಿ ರೂಪಾಯಿ ದಂಡ ಮೊತ್ತವನ್ನು ಸಂಗ್ರಹಿಸುವುದಕ್ಕೆ ಬೆಂಗಳೂರು ಕೋರ್ಟ್‌ ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ನ್ಯಾಯಾಂಗ ಪ್ರಕ್ರಿಯೆ ಸೋಮವಾರ (ಫೆ.19) ಶುರುವಾಯಿತು.

ಟ್ರೆಂಡಿಂಗ್​ ಸುದ್ದಿ

ಜಯಲಲಿತಾ ಅವರ ಆದಾಯ ಮೀರಿದ ಆಸ್ತಿಯಾಗಿ ಜಪ್ತಿಯಾಗಿದ್ದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ದಿನಾಂಕವನ್ನು ನಿಗದಿಪಡಿಸಿದೆ. ಜಯಲಲಿತಾ ಶಿಕ್ಷೆಗೆ ಗುರಿಯಾಗಿ 10 ವರ್ಷದ ನಂತರ, ಅವರ ಮರಣದ ಏಳು ವರ್ಷದ ನಂತರ ಈ ಪ್ರಕ್ರಿಯೆ ಶುರುವಾಗಿದೆ.

ಮಾರ್ಚ್ 6 ಮತ್ತು 7 ರಂದು ಜಯಲಲಿತಾ ಚಿನ್ನಾಭರಣ ಹಸ್ತಾಂತರ

ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನಗರದ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, 2024ರ ಮಾ.6 ಮತ್ತು 7ರಂದು ದಿನಾಂಕವನ್ನು ಚಿನ್ನಾಭರಣ ಹಸ್ತಾಂತರಕ್ಕಾಗಿ ನಿಗದಿಪಡಿಸಿದೆ. ಆ ದಿನ ಬೇರಾವುದೇ ವಿಚಾರಣೆ ನಡೆಸುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ನೇಮಕ ಮಾಡಬೇಕು. ಅವರು ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಐಜಿಪಿ ಅವರೊಂದಿಗೆ ಬರಬೇಕು. ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಮತ್ತು 6 ಪೆಟ್ಟಿಗೆ ಜತೆಗೆ ಕೋರ್ಟ್‌ಗೆ ಬರಬೇಕು. ಅಗತ್ಯ ಭದ್ರತಾ ವ್ಯವಸ್ಥೆಯೊಂದಿಗೆ ಬಂದು ಚಿನ್ನಾಭರಣ ಪಡೆಯಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿದೆ.

ಈ ಅಂಶವನ್ನು ತಮಿಳುನಾಡು ಡಿವೈಎಸ್‌ಪಿ ಅವರು ತಮಿಳುನಾಡು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು. ಅಲ್ಲದೆ, ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಎರಡು ದಿನಗಳ ಕಾಲ ಅಗತ್ಯವಿರುವ ಭದ್ರತೆಯನ್ನು ಸ್ಥಳೀಯ ಪೊಲೀಸರಿಂದ ಕಲ್ಪಿಸಲು ನ್ಯಾಯಾಲಯದ ರಿಜಿಸ್ಟಾರ್ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ನ್ಯಾಯಾಧೀಶರು ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿದ್ದಾರೆ.

ಜಯಲಲಿತಾಗೆ ಸಂಬಂಧಿಸಿದ ವಸ್ತುಗಳು ಯಾವುವು

1) 7.40 ಕಿಲೋ ತೂಕದ 468 ಬಗೆಯ ಚಿನ್ನ ಹಾಗೂ ವಜ್ರ ಖಚಿತ ಆಭರಣ

2) 700 ಕಿಲೋ ತೂಕದ ಬೆಳ್ಳಿ ಆಭರಣಗಳು

3) 740 ಜತೆ ದುಬಾರಿ ಚಪ್ಪಲಿಗಳು

4) 11,344 ರೇಷ್ಮೆ ಸೀರೆಗಳು

5) 250 ಶಾಲು

6) 12 ರೆಫ್ರಿಜಿರೇಟರ್

7) 10 ಟಿವಿ ಸೆಟ್

8) 8 ವಿಸಿಆರ್

9) 1 ವಿಡಿಯೋ ಕ್ಯಾಮರಾ

10) 4 ಸಿಡಿ ಪ್ಲೇಯರ್

11) 2 ಆಡಿಯೋ ಡೆಕ್

12) 24 ಟೂ-ಇನ್ ಒನ್ ಟೇಪ್ ರೆಕಾರ್ಡರ್

13) 1040 ವಿಡಿಯೋ ಕ್ಯಾಸೆಟ್

14) 3 ಐರನ್ ಲಾಕರ್

15) 1.93 ಲಕ್ಷ ನಗದು ಸೇರಿ ಹಲವು ವಸ್ತುಗಳು

ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ 5 ಕೋಟಿ ರೂಪಾಯಿ ಪರಿಹಾರ ಕೊಡಬೇಕು

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಕೋಟ್ಯಂತರ ಮೌಲ್ಯದ ಬೆಲೆಬಾಳುವ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು ಕಳೆದ ತಿಂಗಳು ತೀರ್ಪು ನೀಡಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಖರ್ಚು ಮಾಡಿದ ವೆಚ್ಚಕ್ಕಾಗಿ ತಮಿಳುನಾಡು ಸರ್ಕಾರ 5 ಕೋಟಿ ರೂ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕದಲ್ಲಿ ವಿಚಾರಣೆ ನಡೆಸಲಾಗಿದ್ದು, ಪ್ರಸ್ತುತ ಎಲ್ಲಾ ಸಂಬಂಧಿತ ಪುರಾವೆಗಳನ್ನು ನ್ಯಾಯಾಲಯದ ವಶದಲ್ಲಿ ಕರ್ನಾಟಕ ಖಜಾನೆಯಲ್ಲಿ ಇರಿಸಲಾಗಿದೆ.

ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಹರಾಜು ಮಾಡುವ ಮೂಲಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಖರ್ಚು ಮಾಡಿದ ಮೊತ್ತಕ್ಕೆ ಪರಿಹಾರ ಕೋರಿ ಆರ್ ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 32ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಎ.ಮೋಹನ್ ಈ ಆದೇಶ ನೀಡಿದ್ದರು.

ಪ್ರಕರಣದ ತನಿಖೆಯ ಸಮಯದಲ್ಲಿ ಜಯಲಲಿತಾ ಅವರಿಂದ ವಶಪಡಿಸಿಕೊಂಡ ಆಭರಣಗಳನ್ನು ಹರಾಜು ಹಾಕುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಬದಲಾಗಿ, ಮುಟ್ಟುಗೋಲು ಹಾಕಿಕೊಂಡ ಈ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸಲು ನಿರ್ದೇಶಿಸಿತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಭೌತಿಕ ಪುರಾವೆಗಳೆಂದು ಪರಿಗಣಿಸಲಾದ ಚಿನ್ನ ಮತ್ತು ವಜ್ರದ ಆಭರಣಗಳ ವಿಲೇವಾರಿ ಸೇರಿದಂತೆ ಮುಂದಿನ ಕ್ರಮದ ಜವಾಬ್ದಾರಿಯನ್ನು ತಮಿಳುನಾಡು ಸರ್ಕಾರದ ಮೇಲೆ ಹಾಕಲಾಯಿತು.

ರಾಜ್ಯವು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಿಗೆ ಜಯಲಲಿತಾ ಅವರ ಕುಟುಂಬವು ಅರ್ಹರಲ್ಲ ಎಂದು ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು. ಜಯಲಲಿತಾ ಅವರ ಸೋದರ ಸೊಸೆ ಜೆ.ದೀಪಾ ಮತ್ತು ಸೋದರಳಿಯ ಜೆ.ದೀಪಕ್ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point