Court News: ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ; ಆರೋಪಿಗಳಿಗೆ ದಂಡ ವಿಧಿಸಿದ ಕೋರ್ಟ್
Court News: ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಇಬ್ಬರ ಕೃತ್ಯ ಅಪರಾಧವೆಂದು ಸ್ಥಳೀಯ ನ್ಯಾಯಾಲಯ ಘೋಷಿಸಿದೆ. ಅಪರಾಧಿಗಳು ಕ್ಷಮೆಯಾಚಿಸಬೇಕು ಮತ್ತು ತಲಾ 25 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಸೂಚಿಸಿದೆ.
ಬೆಂಗಳೂರು: ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಇಬ್ಬರ ಕೃತ್ಯ ಅಪರಾಧವೆಂದು ಸ್ಥಳೀಯ ನ್ಯಾಯಾಲಯ ಘೋಷಿಸಿದೆ. ದೋಷಿಗಳು ಕ್ಷಮೆಯಾಚಿಸಬೇಕು ಮತ್ತು ತಲಾ 25 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಸೂಚಿಸಿದೆ.
ಕಾರ್ಕಳದ ಯೋಗೇಶ್ ನಯನಾ ಇನ್ನಾ ಮತ್ತು ರಾಧಾಕೃಷ್ಣ ನಾಯಕ್ ಈ ಕೃತ್ಯವೆಸಗಿದವರು. ಅವರು ಫೇಸ್‌ಬುಕ್ ಮತ್ತು ಇತರೆ ಸಾಮಾಜಿಕ ತಾಣಗಳಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಸಂದೇಶಗಳನ್ನು ಪ್ರಕಟಿಸಿದ್ದರು. ಇದರ ವಿರುದ್ಧ ಸಚಿವರು ಬೆಂಗಳೂರಿನ 12ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 12ನೇ ಸಿಟಿ ಸಿವಿಲ್ ನ್ಯಾಯಾಲಯ ದಂಡ ವಿಧಿಸುವ ಜತೆಗೆ ಕ್ಷಮೆಯಾಚಿಸುವಂತೆ ಸೂಚಿಸಿದೆ.
ಕೋವಿಡ್ ಸಂಕಷ್ಟದ ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಕಳದ ಯೋಗೇಶ್ ನಯನಾ ಇನ್ನಾ ಹಾಗೂ ರಾಧಾಕೃಷ್ಣ ನಾಯಕ್ ಎಂಬುವವರು ಸಚಿವ ಸುನಿಲ್ ಕುಮಾರ್ ವಿರುದ್ಧ ಫೇಸಬುಕ್ ಮತ್ತು ಜಾಲತಾಣದಲ್ಲಿ ಅವಹೇಳನಕಾರಿ, ಸುಳ್ಳು ಹಾಗೂ ದುರುದ್ದೇಶಪೂರಿತ ಬರಹವನ್ನು ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸುನಿಲ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ಕೋರ್ಟ್, ದೋಷಿಗಳಿಗೆ ಕ್ಷಮೆ ಯಾಚಿಸುವುದರ ಜತೆಗೆ ತಲಾ 25 ಸಾವಿರ ರೂಪಾಯಿ ದಂಡ ಪಾವತಿಸಬೇಕು. ಆಧಾರ ರಹಿತ, ಅಪ್ರಮಾಣಿತ, ದುರುದ್ದೇಶಪೂರಿತ ಬರಹಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸದಂತೆ ದೋಷಿಗಳಿಗೆ ಪ್ರತಿಬಂಧವನ್ನೂ ಕೋರ್ಟ್ ವಿಧಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್, ನನ್ನ ವಿರುದ್ಧ ಜಾಲತಾಣದಲ್ಲಿ ಕೆಲವರು ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದೆ. ಈಗ ನನ್ನ ಪರ ತೀರ್ಪು ಬಂದಿದೆ. ಮಾನಹಾನಿಕಾರಿ ಬರಹಗಳನ್ನು ಜಾಲತಾಣದಲ್ಲಿ ಪ್ರಕಟಿಸುವವರಿಗೆ ಇದೊಂದು ಪಾಠವಾಗಿದೆ ಎಂದು ಹೇಳಿದರು.
ಗಮನಿಸಬಹುದಾದ ಸುದ್ದಿಗಳು
Bank locker new rule: ಬ್ಯಾಂಕ್ ಲಾಕರ್ ನವೀಕರಣ ಗೊಂದಲ; ಕಂಗಾಲಾಗಿರುವ ಗ್ರಾಹಕರು
Bank locker new rule:ಬ್ಯಾಂಕ್ ಲಾಕರ್‌ಗಳ ನಿರ್ವಹಣೆಗೆ ಸಂಬಂಧಿಸಿ ಜಾರಿಗೆ ಬಂದಿರುವ ಹೊಸ ನಿಯಮಗಳು ಬಳಕೆದಾರರನ್ನು ಗೊಂದಲಕ್ಕೆ ಸಿಲುಕಿಸಿ ಅವರನ್ನು ಕಂಗಾಲಾಗುವಂತೆ ಮಾಡಿದೆ. ಹೀಗಾಗಿ ಮುಂಬಯಿ ಸೇರಿ ದೇಶದ ಹಲವೆಡೆ ಸ್ಟಾಂಪ್ ಪೇಪರ್ ಖರೀದಿಗೆ ಜನ ಸರದಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
Siddu Nijakanasugalu: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ; ಮಧ್ಯಂತರ ತಡೆ ನೀಡಿದ ಕೋರ್ಟ್
ವಿವಾದಾತ್ಮಕ ʻಸಿದ್ದು ನಿಜಕನಸುಗಳುʼ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿನ 60ನೇ ಸಿಸಿಹೆಚ್ ನ್ಯಾಯಾಲಯ ಸೋಮವಾರ ಮಧ್ಯಂತರವಾಗಿ ತಡೆ ನೀಡಿದೆ. ಕೆಪಿಸಿಸಿ ಮತ್ತು ಸಿದ್ದರಾಮಯ್ಯ ಈ ಪುಸ್ತಕ ಪ್ರಕಟಣೆ ವಿರುದ್ಧ ಅಸಮಾಧಾನ ಹೊಂದಿದ್ದರು. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಈ ಪುಸ್ತಕ ಇಂದು ಅಪರಾಹ್ನ 3 ಗಂಟೆಗೆ ಲೋಕಾರ್ಪಣೆ ಆಗಬೇಕಾಗಿತ್ತು. ಕೋರ್ಟ್ ತೀರ್ಪಿನ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.
Mahindra Thar 4X2: ಭಾರತದಲ್ಲಿ ಮಹಿಂದ್ರಾ ಥಾರ್ 4X2; ದರ ಎಷ್ಟು? ಫೀಚರ್ಸ್ ಏನಿವೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮಹಿಂದ್ರಾ ಆಂಡ್ ಮಹಿಂದ್ರಾ ತನ್ನ ಮಹಿಂದ್ರಾ ಥಾರ್ 4X2 (Mahindra Thar 4X2) ಅನ್ನು ಸೋಮವಾರ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಮಹಿಂದ್ರಾ ಥಾರ್ 2WD (Mahindra Thar 2WD) ವಾಹನದ 1.5 ಲೀಟರ್ ಡೀಸೆಲ್ ಮಾಡೆಲ್‌ನ ಆರಂಭಿಕ ಬೆಲೆ (ಎಕ್ಸ್ ಷೋರೂಂ ದರ) 9.99 ಲಕ್ಷ ರೂಪಾಯಿ. ಅದುವೇ 2.0 ಲೀಟರ್ ಟರ್ಬೊ ಪೆಟ್ರೋಲ್ ಎಟಿ ಮಾಡೆಲ್‌ನ ದರ (ಎಕ್ಸ್ ಷೋರೂಂ ದರ) 13.49 ಲಕ್ಷ ರೂಪಾಯಿ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.