ಕನ್ನಡ ಸುದ್ದಿ  /  ಕರ್ನಾಟಕ  /  ಹೈದರಾಬಾದ್ ಕರ್ನಾಟಕ ಕೋಟಾದ ಉದ್ಯೋಗಿಯ ಹೊರ ವರ್ಗಾವಣೆಗೆ ಅಡ್ಡಿ ಇಲ್ಲ; ಕರ್ನಾಟಕ ಹೈಕೋರ್ಟ್‌ ಸ್ಷಪ್ಟ ತೀರ್ಪು

ಹೈದರಾಬಾದ್ ಕರ್ನಾಟಕ ಕೋಟಾದ ಉದ್ಯೋಗಿಯ ಹೊರ ವರ್ಗಾವಣೆಗೆ ಅಡ್ಡಿ ಇಲ್ಲ; ಕರ್ನಾಟಕ ಹೈಕೋರ್ಟ್‌ ಸ್ಷಪ್ಟ ತೀರ್ಪು

ಹೈದರಾಬಾದ್ ಕರ್ನಾಟಕ ಕೋಟಾದಲ್ಲಿ ಕೆಲಸ ಗಿಟ್ಟಿಸಿಕೊಂಡ ಸರ್ಕಾರಿ ಉದ್ಯೋಗಿಯನ್ನು ಹೊರ ಜಿಲ್ಲೆಗೆ ವರ್ಗಾವಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಾರ್ವಜನಿಕ ಹಿತದೃಷ್ಟಿಯ ಕಾರಣಕ್ಕೆ ವರ್ಗಾವಣೆಗೆ ಅವಕಾಶ ಇದೆ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಹೈದರಾಬಾದ್ ಕರ್ನಾಟಕ ಕೋಟಾದ ಉದ್ಯೋಗಿಯ ಹೊರ ವರ್ಗಾವಣೆಗೆ ಅಡ್ಡಿ ಇಲ್ಲ; ಕರ್ನಾಟಕ ಹೈಕೋರ್ಟ್‌ ಸ್ಷಪ್ಟ ತೀರ್ಪು
ಹೈದರಾಬಾದ್ ಕರ್ನಾಟಕ ಕೋಟಾದ ಉದ್ಯೋಗಿಯ ಹೊರ ವರ್ಗಾವಣೆಗೆ ಅಡ್ಡಿ ಇಲ್ಲ; ಕರ್ನಾಟಕ ಹೈಕೋರ್ಟ್‌ ಸ್ಷಪ್ಟ ತೀರ್ಪು

ಬೆಂಗಳೂರು: ಹೈದರಾಬಾದ್-ಕರ್ನಾಟಕದಲ್ಲಿ ಸ್ಥಳೀಯ ಕೇಡರ್ ಅಡಿಯಲ್ಲಿ ನೇಮಕಗೊಂಡ ವ್ಯಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕಾಗಿ ನಿಯೋಜಿತ ಪ್ರದೇಶದ ಹೊರಗೆ ನಿಯೋಜಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) 2024ರ ಜೂನ್ 12 ರಂದು ನೀಡಿದ ಆದೇಶವನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ ರಾಮನಾಥ್ ಹೆಗ್ಡೆ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಏನಿದು ಪ್ರಕರಣ

ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಯಾದ ಎನ್ ಶ್ರೀಕಾಂತ್ ಅವರನ್ನು 2019 ರಲ್ಲಿ ನೇರ ನೇಮಕಾತಿ ಮೂಲಕ ಸಬ್-ರಿಜಿಸ್ಟ್ರಾರ್ ಆಗಿ ನೇಮಿಸಲಾಗಿತ್ತು. ಕಲಬುರಗಿಯಲ್ಲಿ ಆರಂಭಿಕ ತರಬೇತಿಯ ನಂತರ, 2021ರ ನವೆಂಬರ್‌ನಲ್ಲಿ ಅವರನ್ನು ಚಿಕ್ಕಮಗಳೂರಿನಲ್ಲಿ ನಿಯೋಜಿಸಲಾಯಿತು. ನಂತರ, 2022ರ ಮೇ 21 ರಂದು, ಅವರನ್ನು ಮೈಸೂರು ಪಶ್ಚಿಮ ವಿಭಾಗದ ಸಬ್-ರಿಜಿಸ್ಟ್ರಾರ್ ಆಗಿ ನೇಮಿಸಲಾಯಿತು. 2023ರ ಅಕ್ಟೋಬರ್‌ 11 ರಂದು ಎಸ್ ನಂದೀಶ ಅವರನ್ನು ಸಬ್ ರಿಜಿಸ್ಟ್ರಾರ್, ಮೈಸೂರು (ಪಶ್ಚಿಮ) ಆಗಿ ನಿಯೋಜಿಸಲಾಯಿತು. ಅದೇ ಸಂದರ್ಭದಲ್ಲಿ ಶ್ರೀಕಾಂತ್ ಅವರನ್ನು ವರ್ಗಾಯಿಸಲಾಯಿತು. ಇದನ್ನು ಪ್ರಶ್ನಿಸಿ ಶ್ರೀಕಾಂತ್ ನ್ಯಾಯಾಧಿಕರಣದ ಮೊರೆ ಹೋಗಿದ್ದರು. ಅವಧಿಗೆ ಮುಂಚಿತವಾಗಿ ವರ್ಗಾವಣೆ ಎಂಬ ಕಾರಣಕ್ಕೆ ನ್ಯಾಯಾಧಿಕರಣ ಅದನ್ನು ತಡೆಹಿಡಿಯಿತು.

ಟ್ರೆಂಡಿಂಗ್​ ಸುದ್ದಿ

ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ

ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಮೈಸೂರಿಗೆ ವರ್ಗಾವಣೆಯಾಗಿ ಬಂದಿದ್ದ ನಂದೀಶ ಹೈಕೋರ್ಟ್ ಮೆಟ್ಟಿಲೇರಿದ್ದರು. 2015 ರಲ್ಲಿ ಹೊರಡಿಸಲಾದ ತಿದ್ದುಪಡಿಯಾದ ವರ್ಗಾವಣೆ ಮಾರ್ಗಸೂಚಿಗಳ ಪ್ರಕಾರ, ಹೈದರಾಬಾದ್-ಕರ್ನಾಟಕ ಪ್ರದೇಶದ ಅಡಿಯಲ್ಲಿ ನೇಮಕಗೊಂಡ ನೌಕರರನ್ನು 10 ವರ್ಷಗಳ ಅವಧಿಗೆ ಪ್ರದೇಶದ ಹೊರಗೆ ವರ್ಗಾವಣೆ ಮಾಡಬಾರದು ಮತ್ತು ಆದ್ದರಿಂದ, ಶ್ರೀಕಾಂತ್ ಅವರನ್ನು ಪ್ರದೇಶದಿಂದ ಹೊರಗೆ ಪೋಸ್ಟ್ ಮಾಡಿರುವುದು ಅದನ್ನು ಉಲ್ಲಂಘಿಸಿದೆ ಎಂದು ಅವರು ವಾದಿಸಿದರು.

ಇದೇ ವೇಳೆ, ಶ್ರೀಕಾಂತ್ ತನ್ನ ಆರಂಭಿಕ ವರ್ಗಾವಣೆಯನ್ನು ಚಿಕ್ಕಮಗಳೂರಿಗೆ ಮತ್ತು ಮೈಸೂರಿಗೆ ಸಹ ಸಮರ್ಥಿಸಿಕೊಂಡರು, ಇದು ಅವಧಿಪೂರ್ವವಾಗಿತ್ತು ಎಂದು ವಾದಿಸಿದರು.

ವಿಭಾಗೀಯ ಪೀಠವು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಪ್ಯಾರಾಗ್ರಾಫ್ ನಂ.5 (2) (ಬಿ) ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿ ಒಂದು ಸ್ಥಳೀಯ ಕೇಡರ್‌ನಿಂದ ಇನ್ನೊಂದು ಕೇಡರ್‌ಗೆ, ನಂತರದ ಕೇಡರ್‌ನಲ್ಲಿ ಯಾವುದೇ ಅರ್ಹ ಅಥವಾ ಸೂಕ್ತ ವ್ಯಕ್ತಿ ಲಭ್ಯವಿಲ್ಲದಿದ್ದಲ್ಲಿ ಅಥವಾ ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಂತಹ ವರ್ಗಾವಣೆ ಅಗತ್ಯವೆಂದು ಪರಿಗಣಿಸಿದರೆ ರಾಜ್ಯ ಸರ್ಕಾರವು ವರ್ಗಾವಣೆಗೆ (ಅಥವಾ ನಿಯೋಜನೆಗೆ) ಅವಕಾಶ ಕಲ್ಪಿಸುವುದನ್ನು ತಡೆಯುವುದಿಲ್ಲ ಎಂದು ಸೂಚಿಸುತ್ತದೆ ಎಂದು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

“ವರ್ಗಾವಣೆ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿರುವುದು ನಿಜ ಮತ್ತು ಕಲಂ 371-ಜೆ ಮತ್ತು ವರ್ಗಾವಣೆ ಮಾರ್ಗಸೂಚಿಗಳನ್ನು ನ್ಯಾಯಮಂಡಳಿಯ ಮುಂದೆ ಮೂರನೇ ಪ್ರತಿವಾದಿ (ಶ್ರೀಕಾಂತ್) ಪ್ರಶ್ನಿಸಿಲ್ಲ. ಆದಾಗ್ಯೂ, ಸ್ಥಳೀಯ ಕೇಡರ್‌ಗೆ ಸೇರಿದ ವ್ಯಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಬೇರೆ ಯಾವುದೇ ಕೇಡರ್‌ಗೆ ನಿಯೋಜಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬುದು ಸ್ಪಷ್ಟ ಎಂಬ ಅಂಶವನ್ನು ವಿಭಾಗೀಯ ನ್ಯಾಯಪೀಠ ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)