10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ?: ಬೆಂಗಳೂರು ಯುವತಿ ಕಣ್ಣೀರು- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ಕರ್ನಾಟಕ  /  10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ?: ಬೆಂಗಳೂರು ಯುವತಿ ಕಣ್ಣೀರು- ವೈರಲ್ ವಿಡಿಯೋ

10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ?: ಬೆಂಗಳೂರು ಯುವತಿ ಕಣ್ಣೀರು- ವೈರಲ್ ವಿಡಿಯೋ

Crime Against Women: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ನಡೆದ ಕೆಟ್ಟ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. 10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ? ಎಂದು ಬೆಂಗಳೂರು ಯುವತಿ ಕಣ್ಣೀರು ಸುರಿಸಿ ಕೇಳಿದ್ದಾರೆ. ವೈರಲ್ ವಿಡಿಯೋ ಮತ್ತು ವಿವರ ವರದಿ ಇಲ್ಲಿದೆ.

10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತ ಬೆಂಗಳೂರು ಯುವತಿ ಕಣ್ಣೀರು ಸುರಿಸಿದ್ದಾರೆ. ವೈರಲ್ ವಿಡಿಯೋದಿಂದ ತೆಗೆದ ಚಿತ್ರ.
10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ, ಆತನನ್ನು ಮಗು ಎಂದು ಹೇಳುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತ ಬೆಂಗಳೂರು ಯುವತಿ ಕಣ್ಣೀರು ಸುರಿಸಿದ್ದಾರೆ. ವೈರಲ್ ವಿಡಿಯೋದಿಂದ ತೆಗೆದ ಚಿತ್ರ. (nehabiswal_120/)

ಬೆಂಗಳೂರು: ಸಾಮಾಜಿಕ ತಾಣದ ಪ್ರಭಾವಿ ಯುವತಿಯೊಬ್ಬರು ಎಂದಿನಂತೆ ವಿಡಿಯೋ ಮಾಡುತ್ತ ಬೆಂಗಳೂರಿನ ಬಿಟಿಎಂ ಲೇಔಟ್‌ನ ಬೀದಿಯಲ್ಲಿ ನಡೆಯುತ್ತಿದ್ದಾಗ ಕೆಟ್ಟ ಅನುಭವವಾಗಿದೆ. 10 ವರ್ಷದ ಆಸುಪಾಸಿನ ಹುಡುಗನೊಬ್ಬನ ಆ ವರ್ತನೆ ಯುವತಿಯನ್ನು ಕಂಗೆಡುವಂತೆ ಮಾಡಿದೆ. ಸರಣಿ ವಿಡಿಯೋವನ್ನು ಇನ್‌ಸ್ಟಾಗ್ರಂನಲ್ಲಿ ಶೇರ್ ಮಾಡಿದ ಆ ಯುವತಿ, ತನಗಾದ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಜನ ಅದನ್ನು ನಂಬಲಿಲ್ಲ. ವಿಡಿಯೋ ತೋರಿಸಿದ ಬಳಿಕ ಮಗು ಅಲ್ವ, ಏನೋ ಗೊತ್ತಿಲ್ಲದೇ ಮಾಡಿರಬಹುದು ಎಂದೆಲ್ಲ ಮಾತನಾಡಿದ್ದಾರೆ. 10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ. ನಾನು ಸುರಕ್ಷಿತವಾಗಿಲ್ಲ ಎಂಬ ಭಾವನೆ ಆವರಿಸಿತು ಎಂದು ಆ ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

10 ವರ್ಷದ ಬಾಲಕನಿಂದ ಆ ವರ್ತನೆ ನಿರೀಕ್ಷಿಸಿರಲಿಲ್ಲ; ಕೆಟ್ಟ ಅನುಭವ ವಿವರಿಸಿ ಕಣ್ಣೀರಿಟ್ಟ ನೇಹಾ

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಕೆಟ್ಟ ಅನುಭವಕ್ಕೆ ಒಳಗಾದ ಯುವತಿ ಹೆಸರು ನೇಹಾ ಬಿಸ್ವಾಲ್‌. ಬಿಟಿಎಂ ಲೇಔಟ್‌ನಲ್ಲಿ ವಿಡಿಯೋ ಮಾಡುತ್ತ ನಡೆಯುತ್ತಿರುವಾಗ ಸೈಕಲ್‌ನಲ್ಲಿ ಬಂದ ಬಾಲಕನೊಬ್ಬ ಟೀಸ್ ಮಾಡಿದ್ದಲ್ಲದೆ, ಎದೆ ಮೇಲೆ ಕೈ ಹಾಕಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಹಾಯ್ ಎಂದು ಹೇಳುತ್ತ ಹತ್ತಿರ ಬಂದ ಬಾಲಕ ಅಸಭ್ಯವಾಗಿ ವರ್ತಿಸಿದ್ದು, ಈ ಘಟನೆಯಿಂದ ಗಲಿಬಿಲಿಯಾದ ಯುವತಿ, ಬಳಿಕ ಅಳುತ್ತ ನಡೆದುದು ಏನು ಎಂಬುದನ್ನು ಕಣ್ಣೀರಿಡುತ್ತ ವಿವರಿಸಿದ್ದಾರೆ. ಯಾವುದು ಕೆಟ್ಟ ಸ್ಪರ್ಶ, ಯಾವುದು ಉತ್ತಮ ಸ್ಪರ್ಶ ಎಂಬುದನ್ನು ಅರಿಯದವಳಲ್ಲ. ಅನುಭವ ನನ್ನದು. ಇದನ್ನು ಉಳಿದವರು ಅರ್ಥಮಾಡಿಕೊಳ್ಳಬೇಕಷ್ಟೆ. 100-200 ಜನರಿಗೆ ಆ ಕೆಟ್ಟ ವಿಡಿಯೋ ತೋರಿಸಬೇಕಾಗಿ ಬಂತು. ಈ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ನೇಹಾ ವಿವರಿಸಿದ್ದಾರೆ. ಡಾ. ಅಭಿನಬಾ ಪಾಲ್ ಎಂಬುವವರು ಈ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

ಬಹುಬೇಗ ಸ್ಪಂದಿಸಿದ ಬೆಂಗಳೂರು ಪೊಲೀಸರು; ಮೆಚ್ಚುಗೆ ಸೂಚಿಸಿದ ಯುವತಿ

ನಾನು ಬೆಂಗಳೂರಿನವಳಲ್ಲ. ಆದರೆ ಈ ಘಟನೆ ಕುರಿತು ವಿಡಿಯೋ ಮಾಡಿ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಸ್ಪಂದಿಸಿದ್ದಾರೆ. ನನಗೆ ಹೊರಗಿನವಳು ಎಂಬ ಭಾವನೆ ಬಾರದ ರೀತಿಯಲ್ಲಿ ಪೊಲೀಸರು ಸ್ಪಂದಿಸಿದ್ದಾರೆ. ಸದ್ಯ ಅವರು ಕೇಸ್ ದಾಖಲಿಸಿಲ್ಲ. ಆದರೆ ಬಾಲಕನನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನನಗೂ ಮಗುವಿನ ಭವಿಷ್ಯ ಹಾಳುಮಾಡುವ ಉದ್ದೇಶ ಇಲ್ಲ. ಆದರೆ ಸರಿಯಾಗಿ ಎಚ್ಚರಿಕೆ ನೀಡಿ ಬಿಸಿಮುಟ್ಟಿಸಬೇಕಾದ ಅಗತ್ಯ ಇದೆ. ಈಗ ಎಲ್ಲವೂ ನನ್ನ ಕೈಯಲ್ಲಿದೆ ಎಂದು ನೇಹಾ ಹೇಳಿಕೊಂಡ ವಿಡಿಯೋವನ್ನೂ ಶೇರ್ ಮಾಡಿದ್ದಾರೆ.

ಸೋ‍ಷಿಯಲ್ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಉತ್ತರ ಭಾರತ, ದಕ್ಷಿಣ ಭಾರತದ ರಂಗು ಹಚ್ಚಿದರೆ, ಇನ್ನು ಕೆಲವರು ತೀರಾ ವೈಯಕ್ತಿಕ ಟೀಕೆ ಮಾಡಿದ್ದಾರೆ. ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಸಾರ್ವಜನಿಕರೂ ಹೊಣೆಗಾರಿಕೆಯಿಂದ ವರ್ತಿಸಬೇಕು ಎಂಬ ಮಾತುಗಳೂ ಅಲ್ಲಿ ದಾಖಲಾಗಿವೆ.

ಪೊಲೀಸರು ಹೇಳಿದ್ದೇನು?: ಬೆಂಗಳೂರು ದಕ್ಷಿಣದ ಡಿಸಿಪಿ ಸಾರಾ ಫಾತಿಮಾ ಅವರು, "ಬಾಲಕನಿಗೆ 10 ವರ್ಷ ವಯಸ್ಸು. ಸಂತ್ರಸ್ತೆಯ ಹಿಂದೆ ಕೆಲವು ಸೈಕಲ್ ಸಾಹಸ ಮಾಡುತ್ತಿದ್ದ. ಆಗ ಸಮತೋಲನ ತಪ್ಪಿ ಆಕೆಯ ಮೇಲೆ ಬಿದ್ದುದಾಗಿ ಆತ ಹೇಳಿದ್ದಾನೆ. ಸಂತ್ರಸ್ತೆ ಕೂಡ ಹುಡುಗನ ಭವಿಷ್ಯ ಹಾಳಾಗಬಹುದು ಎಂಬ ಕಾರಣಕ್ಕೆ ದೂರು ದಾಖಲಿಸಲು ಬಯಸಿಲ್ಲ. ಮುಂದೇನು ಮಾಡಬೇಕು ಎಂಬುದನ್ನು ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿರುವುದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.

Whats_app_banner