Crime News: 4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಹೊರಟ ಸ್ಟಾರ್ಟಪ್ ಸಿಇಒ ಚಿತ್ರದುರ್ಗದಲ್ಲಿ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  Crime News: 4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಹೊರಟ ಸ್ಟಾರ್ಟಪ್ ಸಿಇಒ ಚಿತ್ರದುರ್ಗದಲ್ಲಿ ಸೆರೆ

Crime News: 4 ವರ್ಷದ ಮಗನನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಹೊರಟ ಸ್ಟಾರ್ಟಪ್ ಸಿಇಒ ಚಿತ್ರದುರ್ಗದಲ್ಲಿ ಸೆರೆ

ಗೋವಾದಲ್ಲಿ ತನ್ನ 4 ವರ್ಷದ ಮಗುವನ್ನು ಕೊಂದು ಬ್ಯಾಗ್‌ನಲ್ಲಿಟ್ಟು ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದ ಬೆಂಗಳೂರಿನ ನವೋದ್ಯಮದ ಸಿಇಒ ಸುಚನಾ ಸೇಠ್‌ ಚಿತ್ರದುರ್ಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಹತ್ಯೆ ಮಾಡಿ ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಟ್ಯಾಕ್ಸಿ ಮೂಲಕ ಕೊಂಡೊಯ್ಯುತ್ತಿದ್ದ ನವೋದ್ಯಮದ ಸಿಇಒ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಹತ್ಯೆ ಮಾಡಿ ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಟ್ಯಾಕ್ಸಿ ಮೂಲಕ ಕೊಂಡೊಯ್ಯುತ್ತಿದ್ದ ನವೋದ್ಯಮದ ಸಿಇಒ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ತನ್ನ 4 ವರ್ಷದ ಮಗನನ್ನು ಗೋವಾದಲ್ಲಿ ಹತ್ಯೆ ಮಾಡಿ ಸದ್ದಿಲ್ಲದೇ ಕರ್ನಾಟಕಕ್ಕೆ ವಾಪಸ್ ಬಂದ ಬೆಂಗಳೂರು ನವೋದ್ಯಮದ ಸಂಸ್ಥಾಪಕಿ 39 ವರ್ಷದ ಮಹಿಳೆಯನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಸುಚನಾ ಸೇಠ್ ಎಂದು ಗುರುತಿಸಲಾಗಿದೆ. ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಸಹ ಸಂಸ್ಥಾಪಕಿ. ಉತ್ತರ ಗೋವಾದ ಕಾಂಡೋಲಿಮ್‌ನ ರೆಸ್ಟೋರೆಂಟ್‌ನಲ್ಲಿ ಮಗನನ್ನು ಹತ್ಯೆ ಮಾಡಿದ್ದಳು ಎನ್ನಲಾಗಿದೆ. ಮಗನ ಮೃತದೇಹ ಬ್ಯಾಗ್ ಒಂದರಲ್ಲಿ ಪತ್ತೆಯಾಗಿತ್ತು. ಕೊಲೆ ಮಾಡಿದ್ದರ ಉದ್ದೇಶವೇನು ಎಂಬುದು ಬಹಿರಂಗವಾಗಿಲ್ಲ.

ಉತ್ತರ ಗೋವಾದ ಕಾಂಡೋಲಿಮ್‌ನ ಸೋಲ್ ಬನ್ಯಾನ್‌ಗೆ ಶನಿವಾರ ಮಗನೊಂದಿಗೆ ಸುಚನಾ ಸೇಠ್‌ ಹೋಗಿದ್ದರು. ಸೋಮವಾರ ರೂಮ್‌ನಿಂದ ಒಬ್ಬರೇ ಹೊರಗೆ ಬಂದು ಚೆಕ್‌ಔಟ್ ಮಾಡಿದ್ದರು. ಹೋಟೆಲ್ ಸಿಬ್ಬಂದಿ ಬಳಿ ಬೆಂಗಳೂರಿಗೆ ಟ್ಯಾಕ್ಸಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ವಿಮಾನದಲ್ಲಿ ತೆರಳುವಂತೆ ಸಿಬ್ಬಂದಿ ಹೇಳಿದರೂ, ಟ್ಯಾಕ್ಸಿಯೇ ಬೇಕು ಎಂದು ಕೇಳಿಕೊಂಡಿದ್ದರು.

ಆದರೆ, ಜತೆಗೆ ಇದ್ದ ಮಗು ಕಾಣದೇ ಇರುವಾಗ ಅನುಮಾನಗೊಂಡ ಸಿಬ್ಬಂದಿ ಇದನ್ನು ಮ್ಯಾನೇಜ್‌ಮೆಂಟ್ ಗಮನಕ್ಕೆ ತಂದಿದ್ದರು. ಆಕೆ ಹೊರಟು ಹೋದ ಬಳಿಕ ಅವರಿದ್ದ ಕೊಠಡಿ ಸಮೀಪ ಹೋದಾಗ ಅಲ್ಲಿ ರಕ್ತದ ಕಲೆಗಳು ಕಂಡಿದ್ದವು. ಪೊಲೀಸರಿಗೂ ಮಾಹಿತಿ ನೀಡಿದರು.

ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ, ಮಗುವಿನ ಬಗ್ಗೆ ವಿಚಾರಿಸುವಂತೆ ಹೇಳಿದ್ದರು. ಆಗ ಸುಚನಾ ಅವರು ಮಗ ಸ್ನೇಹಿತೆಯ ಮನೆಯಲ್ಲಿರುವುದಾಗಿ ಒಂದು ವಿಳಾಸ ನೀಡಿದ್ದರು. ಆ ವಿಳಾಸದಲ್ಲಿ ವಿಚಾರಿಸಿದಾಗ ಅದು ಫೇಕ್ ಎಂಬುದು ಬಹಿರಂಗವಾಗಿದೆ. ಪೊಲೀಸರು ಪುನಃ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಕೊಂಕಣಿ ಭಾಷೆಯಲ್ಲಿ ಮಾತನಾಡಿ, ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೊಂಕಣಿ ಭಾಷೆ ಸುಚನಾಗೆ ಅರ್ಥವಾಗದೇ ಇರುವ ಕಾರಣ ಏನಾಗಿದೆ ಎಂದು ಗೊತ್ತಾಗುವಷ್ಟರಲ್ಲಿ ಚಿತ್ರದುರ್ಗ ಪೊಲೀಸ್ ವಶದಲ್ಲಿದ್ದರು.

ಸುಚನಾ ಪ್ರಯಾಣಿಸಿದ್ದ ಕಾರನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಒಂದು ಬ್ಯಾಗ್‌ನಲ್ಲಿ ಮಗನ ಶವ ಪತ್ತೆಯಾಗಿತ್ತು. ಪೊಲೀಸರು ಕೂಡಲೇ ಸುಚನಾ ಸೇಠ್‌ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಯಾರು ಈ ಸುಚನಾ ಸೇಠ್‌? : ಲಿಂಕ್ಡ್‌ಇನ್‌ನಲ್ಲಿರುವ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಪುಟದಲ್ಲಿರುವ ಪ್ರಕಾರ, ಸುಚನಾ ಸೇಠ್ 2021ರ 100 ಬ್ರಿಲಿಯಂಟ್‌ ವುಮೆನ್ ಇನ್‌ ಎಐ ಎಥಿಕ್ಸ್‌ ಪಟ್ಟಿಯಲ್ಲಿದ್ದರು ಎಂಬ ಅಂಶ ಗಮನಸೆಳೆದಿದೆ. ಸುಚನಾ ಸೇಠ್ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಬರ್ಕ್‌ಮನ್ ಕ್ಲೈನ್ ​​ಸೆಂಟರ್‌ನಲ್ಲಿ ಸಹವರ್ತಿ ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷಗಳ ಅನುಭವ ಹೊಂದಿರುವ ಡೇಟಾ ವಿಜ್ಞಾನಿ. ಅಲ್ಲದೇ, ಸ್ಟಾರ್ಟ್-ಅಪ್‌ಗಳು ಮತ್ತು ಉದ್ಯಮ ಸಂಶೋಧನಾ ಪ್ರಯೋಗಾಲಯಗಳಲ್ಲಿ ಯಂತ್ರ ಕಲಿಕೆಯ ಪರಿಹಾರಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ.

Whats_app_banner