ಹೆಚ್‌ಎಸ್‌ಆರ್‌ಪಿಯನ್ನೇ ಹೋಲುವ ನಕಲಿ ವೆಬ್‌ಸೈಟ್ ಸೃಷ್ಟಿ; ನಂಬರ್ ಪ್ಲೇಟ್ ನೋಂದಣಿ ಮಾಡುವ ಗ್ರಾಹಕರಿಗೆ ವಂಚನೆ
Crime News: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ವಿಚಾರದಲ್ಲಿ ಸಾಕಷ್ಟು ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ.
ಬೆಂಗಳೂರು: ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-ಹೆಚ್‌ಎಸ್‌ಆರ್‌ಪಿ ನೋಂದಣಿಗೆ ಇನ್ನ ಮೂರು ದಿನಗಳು ಮಾತ್ರ ಬಾಕಿರುವ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರು ನೋಂದಣಿಗೆ ಮುಗಿಬೀಳುತ್ತಿದ್ದಾರೆ. ಕೆಲವರು ಗಡಿಬಿಡಿಯಲ್ಲಿ ನಕಲಿ ವೆಬ್‌ಸೈಟ್‌ಗಳಲ್ಲಿ ನೋಂದಣಿಗೆ ಮುಂದಾಗಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಳಡಿಸಿಕೊಳ್ಳಲು ಫೆಬ್ರವರಿ 17ರ ಶನಿವಾರ ಕೊನೆಯ ದಿನವಾಗಿದೆ. ಆ ಬಳಿಕ ಈ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಮೊದಲ ಬಾರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಡೆಡ್‌ಲೈನ್ ಸಮೀಪಿಸುತ್ತಿರುವುದರಿಂದ ವಾಹನ ಸವಾರರು ನಾ ಮುಂದು ತಾ ಮುಂದು ಎಂದು ನೋಂದಣಿ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸೈಬರ್ ಕಿಡಿಗೇಡಿಗಳು ಅಧಿಕೃತ ವೆಬ್‌ಸೈಟ್ ಮಾದರಿಯಲ್ಲೇ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿಕೊಂಡು ಗ್ರಾಹಕರಿಂದ ಹಣ ವಸೂಲಿಗೆ ಇಳಿದ್ದಾರೆ.
hsrpplate.live ಎಂಬ ನಕಲಿ ಖಾತೆಯಲ್ಲಿ ನೋಂದಣಿಗೆ ಹೋಗಿ ಕೆಲವರು ಹಣ ಕಳೆದುಕೊಂಡಿರುವ ವರದಿಯಾಗಿದೆ. ಅಧಿಕಾರಗಳ ಗಮನಕ್ಕೆ ಬಂದ ಕೂಡಲೇ ಈ ಸೈಟ್‌ಅನ್ನು ನಿಷ್ಕ್ರಿಯಗೊಳಿಸಿಲಾಗಿದೆ. ಹೆಚ್‌ಎಸ್‌ಆರ್‌ಬಿ ನಂಬರ್ ಪ್ಲೇಟ್ ಅವಳಡಿಸಿಕೊಳ್ಳು ನೋಂದಣಿ ಮಾಡಿಕೊಳ್ಳುವ ಗ್ರಾಹಕರು ಎಚ್ಚರಿಕೆಯಿಂದರಬೇಕು. ಜೊತೆಗೆ ಅಧಿಕೃತ ವೆಬ್‌ಸೈಟ್‌ಗಳಾದ bookmyhsrp.com ಮತ್ತು siam.in ಮೂಲಕ ಮಾತ್ರ ನೋಂದಣಿ ಮಾಡಿಕೊಳ್ಳುವ ಮೂಲಕ ಮುಂದಾಗುವ ಅನಾಹುಗಳನ್ನು ತಪ್ಪಿಸಿಕೊಳ್ಳಬೇಕಿದೆ.
bookmyhsrp.com ವೆಬ್‌ಸೈಟ್‌ಗೆ ಹೋದರೆ ಅಲ್ಲಿ ರಿಪ್ಲೇಸ್‌ಮೆಂಟ್ ಬುಕಿಂಗ್, ಒನ್ಸಿ ಕಲವರ್ ಸ್ಟಿಕ್ಕರ್ ಹಾಗೂ ಟ್ರ್ಯಾಕ್ ಯುವರ್ ಆರ್ಡರ್ ಎಂಬ ಮೂರು ಆಯ್ಕೆಯಾಗು ಕಾಣಿಸುತ್ತವೆ. ಅಲ್ಲಿ ರಿಪ್ಲೇಸ್‌ಮೆಂಟ್ ಬುಕಿಂಗ್ ಮೇಲೆ ಕ್ಲಿಕ್ ಮಾಡಿ.
ಹಂತ 1 ರಲ್ಲಿ ಬುಕಿಂಗ್ ಮಾಹಿತಿಯನ್ನು ಕೇಳುತ್ತದೆ.ಈ ಪುಟದಲ್ಲಿ ನೀವು ವಾಹನದ ಮಾಹಿತಿಯನ್ನು ನಮೂಡಿಸಬೇಕಾಗುತ್ತದೆ. ರಾಜ್ಯ, ವಾಹನದ ನೋಂದಣಿ ಸಂಖ್ಯೆ, ಚಾಸಿಸ್ ನಂಬರ್, ಇಂಜಿನ್ ನಂಬರ್ ಹಾಗೂ ಕಾಪ್ಚಾವನ್ನು ನಮೂದಿಸಬೇಕು. ಇದಾದ ಬಳಿಕ ನಿಮಗೆ ಅನುಕೂಲಕರವಾದ ಡೀಲರ್ ಸ್ಥಳವನ್ನು ಆಯ್ಕೆ ಮಾಡಬೇಕು. ದಿನಾಂಕ, ಸಮಯ ಸ್ಲಾಟ್ ನಂಬರ ಮಾಹಿತಿಯನ್ನು ಒದಗಿಸಬೇಕು.
ಹೈಸೆಕ್ಯುರಿಟಿ ರಜಿಸ್ಟ್ರೇಷನ್ ಪ್ಲೇಟ್ ಸಿದ್ದಗೊಂಡ ನಂತರ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಕೆಲ ವಿತರಕರು ನಿಮ್ಮ ಮನೆ ಬಾಗಿಲಿಗೆ ಪ್ಲೇಟ್ ತಲುಪಿಸುತ್ತಾರೆ. ಕೆಲವರು ಡೀಲರ್‌ಗಳ ಕಚೇರಿಗಳಿಗೆ ಭೇಟಿ ನೀಡಿ ಪಡೆಯಬಹುದು. ಇದೆಲ್ಲಾ ಪ್ರಕ್ರಿಯೆಗೂ ಮುನ್ನ ನಕಲಿ ಸೈಟ್‌ಬಗಳ ಬಗ್ಗೆ ಎಚ್ಚರಿಕೆ ವಹಿಸಿ ಹಣವನ್ನು ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಬೇಡಿ. (This copy first appeared in Hindustan Times Kannada website. To read more like this please logon to kannada.hindustantime.com).