ಕನ್ನಡ ಸುದ್ದಿ  /  ಕರ್ನಾಟಕ  /  ದಾವಣಗೆರೆ ಮಹಿಳೆಯನ್ನು ಸೊಲ್ಲಾಪುರದ ವ್ಯಕ್ತಿಗೆ 1 ಲಕ್ಷ ರೂಗೆ ಮಾರಾಟ ಆರೋಪ; ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್

ದಾವಣಗೆರೆ ಮಹಿಳೆಯನ್ನು ಸೊಲ್ಲಾಪುರದ ವ್ಯಕ್ತಿಗೆ 1 ಲಕ್ಷ ರೂಗೆ ಮಾರಾಟ ಆರೋಪ; ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್

ದಾವಣಗೆರೆಯ ಮಹಿಳೆಯನ್ನ ಸೊಲ್ಲಾಪುರದ ವ್ಯಕ್ತಿಗೆ 1 ಲಕ್ಷ ರೂ.ಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಹಿಳೆಯನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ದಾವಣಗೆರೆ ಎಸ್ಪಿ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಮಹಿಳೆಯನ್ನು ಸೋಲ್ಲಾಪುರದ ವ್ಯಕ್ತಿಗೆ 1 ಲಕ್ಷ ರೂಗೆ ಮಾರಾಟ ಆರೋಪದಲ್ಲಿ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದಾವಣಗೆರೆ ಮಹಿಳೆಯನ್ನು ಸೋಲ್ಲಾಪುರದ ವ್ಯಕ್ತಿಗೆ 1 ಲಕ್ಷ ರೂಗೆ ಮಾರಾಟ ಆರೋಪದಲ್ಲಿ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಳಗಾವಿ: ದಾವಣಗೆರೆ (Davanagere Crime News) ಜಿಲ್ಲೆಯ ಹೊನ್ನಾಳ್ಳಿಯ (Honnali) 30 ವರ್ಷದ ಮಹಿಳೆಯನ್ನು ಮನೆ ಕೆಲಸದ ಹೆಸರಿನಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ವ್ಯಕ್ತಿಯೊಬ್ಬನಿಗೆ 1 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಸಂಬಂಧ ಮೂವರು ಆರೋಪಿಗಳ ವಿರುದ್ಧ ಹೊನ್ನಾಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಿಳೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಮೇ 12 ರಂದು ಶಿವಮೊಗ್ಗದ ಬದಲು ಸೊಲ್ಲಾಪುರಕ್ಕೆ ಮಹಿಳೆಯನ್ನು ಕೆಲಸಕ್ಕೆ ಕರೆದೊಯ್ದ ಆರೋಪದಲ್ಲಿ ದಾವಣಗೆರೆ ಜಿಲ್ಲೆಯ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಂಗಳವಾರ (ಮೇ 21) ತಿಳಿಸಿದ್ದಾರೆ. ದಾವಣಗೆರೆ ಪೊಲೀಸರು (Davanagere Police) ಸೊಲ್ಲಾಪುರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹಿಳೆಯನ್ನು ಮರಳಿ ಕರೆತರಲು ನಮ್ಮ ತಂಡವನ್ನು ಸೊಲ್ಲಾಪುರಕ್ಕೆ ಕಳುಹಿಸಿದ್ದೇವೆ ಎಂದು ಎಸ್ಪಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಾಲಕನ ತಾಯಿ ಕೆಲವು ತಿಂಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದಳು. ತನ್ನ ಕುಟುಂಬವನ್ನು ಪೋಷಿಸಲು, ಕಲ್ಯಾಣ ಮಂಟಪಗಳಲ್ಲಿ ಆಯೋಜಿಸುವ ಸ್ವಾಗತ ಕೇಂದ್ರಗಳ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇತರ ಜಿಲ್ಲೆಗಳ ಮಹಿಳೆಯರ ತಂಡದೊಂದಿಗೆ ಕೆಲಸ ಮಾಡಲು ಹೋಗುತ್ತಿದ್ದರು.

ಮೇ 12 ರಂದು ಶಿವಮೊಗ್ಗದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಇತರ ಮಹಿಳೆಯರು ಮತ್ತು ಮೂವರು ಪುರುಷರೊಂದಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಸಹೋದರಿ ಮನೆಯಿಂದ ಹೋಗಿದ್ದಳು ಎಂದು ಆಕೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾನೆ. ಮನೆಯಿಂದ ಹೊರಟ ನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. "ಮೇ 20ರ ಸೋಮವಾರ ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ನನ್ನ ಸಹೋದರಿಯೇ ಆಕೆಯನ್ನು ಶಿವಮೊಗ್ಗದ ಬದಲು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಕರೆದೊಯ್ಯಲಾಗಿದೆ ಎಂದು ನನಗೆ ಮಾಹಿತಿ ನೀಡಿದ್ದಳು. ಅಲ್ಲಿ ಮೂವರು ವ್ಯಕ್ತಿಗಳು ಅವಳನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ" ಎಂದು ಸಂತ್ರಸ್ತ ಮಹಿಳೆಯ ಸಹೋದರ ಮಾಹಿತಿ ನೀಡಿದ್ದಾನೆ.

ದಾವಣಗೆರೆ ಜಿಲ್ಲೆಯ ಭದ್ರಾವತಿಯ ರೋಜಿ ಲೀನಾ (43), ಮಲ್ಲಿಕಾರ್ಜುನ್ (47) ಹಾಗೂ ಲೋಕೇಶ್ (35) ವಿರುದ್ಧ ಹೊನ್ನಾಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗುಂಪಿನ ಇತರ ಸದಸ್ಯರು ಮಾರ್ಗ ಮಧ್ಯೆ ನಿನ್ನೊಂದು ಸೇರಿಕೊಳ್ಳುತ್ತಾರೆ ಎಂದು ಹೇಳಿದ ನಂತರ ತನ್ನ ಸಹೋದರಿ ಅವರೊಂದಿಗೆ ಹೊರಟು ಹೋಗಿದ್ದಾಳೆ ಎಂದು ಅವರು ಹೇಳಿದ್ದಾರೆ. ಸೋಲಾಪುರಕ್ಕೆ ಕರೆದೊಯ್ದ ವ್ಯಕ್ತಿಗಳ ಹೆಸರುಗಳನ್ನು ಮಹಿಳೆಯ ಸಹೋದರ ಬಹಿರಂಗಪಡಿಸಿದ್ದು, ಮೂವರು ಭದ್ರಾವತಿಯವರು ಎಂದು ಹೇಳಿದ್ದಾರೆ.

ಹೊನ್ನಾಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಮುತ್ತುರಾಜ್ ಮಾತನಾಡಿ, ಮಹಿಳೆಯನ್ನು ಕರೆದೊಯ್ದು ಮಾರಾಟ ಮಾಡಿದ ಮೂವರನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಸ್ಪಿ ಉಮಾ ಅವರು ಸೋಲಾಪುರ ಪೊಲೀಸ್ ಅಧಿಕಾರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ, ಅವರು ಮಹಿಳೆಯನ್ನು ಸುರಕ್ಷಿತವಾಗಿ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದರು. ಸೋಲಾಪುರ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚಿಸಿದ ನಂತರ, ದಾವಣಗೆರೆ ಎಸ್ಪಿ ಉಮಾ ಅವರು ಮಹಿಳೆಯನ್ನು ಮಾರಾಟ ಮಾಡಿದವರ ವಿರುದ್ಧ ಮಾತ್ರವಲ್ಲ, ಅವಳನ್ನು ಖರೀದಿಸಿದ ವ್ಯಕ್ತಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

"ಮನುಷ್ಯನನ್ನು, ವಿಶೇಷವಾಗಿ ಮಹಿಳೆಯನ್ನು ಮಾರಾಟ ಮಾಡುವುದು ನಾಗರಿಕ ಸಮಾಜಕ್ಕೆ ಅವಮಾನ. ದೇಶದ ಯಾವುದೇ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಉಮಾ ಹೇಳಿದ್ದಾರೆ. "ಮಹಿಳೆಯನ್ನು ಸುರಕ್ಷಿತವಾಗಿ ಮರಳಿ ಕರೆತರುವುದು ಮತ್ತು ದುಷ್ಕರ್ಮಿಗಳಿಗೆ ಶಿಕ್ಷೆ ಆಗಬೇಕಿರುವುದು ನಮ್ಮ ಮುಖ್ಯ ಉದ್ದೇಶ" ಎಂದು ಎಸ್ಪಿ ಉಮಾ ಹೇಳಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024