Viral Video: ಓವರ್ ಟೇಕ್ ವಿಚಾರದಲ್ಲಿ ಬೈಕ್ ಸವಾರ ಕಾರು ಚಾಲಕನ ನಡುವೆ ಫುಲ್ ಫೈಟ್; ವಿಡಿಯೊ ವೈರಲ್
ಕನ್ನಡ ಸುದ್ದಿ  /  ಕರ್ನಾಟಕ  /  Viral Video: ಓವರ್ ಟೇಕ್ ವಿಚಾರದಲ್ಲಿ ಬೈಕ್ ಸವಾರ ಕಾರು ಚಾಲಕನ ನಡುವೆ ಫುಲ್ ಫೈಟ್; ವಿಡಿಯೊ ವೈರಲ್

Viral Video: ಓವರ್ ಟೇಕ್ ವಿಚಾರದಲ್ಲಿ ಬೈಕ್ ಸವಾರ ಕಾರು ಚಾಲಕನ ನಡುವೆ ಫುಲ್ ಫೈಟ್; ವಿಡಿಯೊ ವೈರಲ್

ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರ ನಡುವಿನ ವಾಗ್ವಾದ, ಗದ್ದಲ, ಗಲಾಟೆಯಂತಹ ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡಿ ಎಂದು ಪೊಲೀಸರು ಸವಾರರಲ್ಲಿ ಮನವಿ ಮಾಡಿದ್ದಾರೆ.

ಓವರ್ ಟೇಕ್ ವಿಚಾರದಲ್ಲಿ ಬೈಕ್ ಸವಾರ ಕಾರು ಚಾಲಕನ ನಡುವೆ ನಡು ರಸ್ತೆಯಲ್ಲೇ ಫುಲ್ ಫೈಟ್ ನಡೆದಿದ್ದು, ವಿಡಿಯೊ ವೈರಲ್ ಆಗಿದೆ.
ಓವರ್ ಟೇಕ್ ವಿಚಾರದಲ್ಲಿ ಬೈಕ್ ಸವಾರ ಕಾರು ಚಾಲಕನ ನಡುವೆ ನಡು ರಸ್ತೆಯಲ್ಲೇ ಫುಲ್ ಫೈಟ್ ನಡೆದಿದ್ದು, ವಿಡಿಯೊ ವೈರಲ್ ಆಗಿದೆ.

ಬೆಂಗಳೂರು: ಚಲಿಸುತ್ತಿದ್ದ ಕಾರನ್ನು ತನ್ನ ದ್ವಿಚಕ್ರ ವಾಹನದ ಮೂಲಕ ಅಡ್ಡಗಟ್ಟಿದ ವ್ಯಕ್ತಿಯೊರ್ವ ಹೆಲ್ಮೆಟ್‌ನಿಂದ ಕಾರಿನ ಗಾಜನ್ನು ಹೊಡೆದಿರುವ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದೆ. ಕಾರಿನಲ್ಲಿದ್ದ ಅಖಿಲ್ ಸಾಬು ಎಂಬುವವರೇ ಘಟನೆಯ ವಿಡಿಯೊವನ್ನು ಹಂಚಿಕೊಂಡು ಬೈಕ್ ಸವಾರನ ಪುಂಡಾಟದ ಈ ಅಪರಾಧದ ಕೃತ್ಯಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸಾಕಲ್ಲವೇ. ಈಗಾಗಲೇ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ವಿಡಿಯೊವನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಅಖಿಲ್ ಸಾಬು ಎಂಬುವವರು ತಮ್ಮ ಪತ್ನಿ ಮತ್ತು ಪುತ್ರಿಯ ಜೊತೆ ಪ್ರಯಾಣಿಸುತ್ತಿದ್ದಾಗ ತಮ್ಮ ಕಾರಿಗೆ ಹಾನಿಯಾಗಿದೆ ಎಂದು ದೂರು ನೀಡಿದ್ದಾರೆ. ಮೇ 17ರ ಶುಕ್ರವಾರ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಕಾರು ಮುಂದೆ ಚಲಿಸುತ್ತಿರಬೇಕಾದರೆ ಹಿಂದಿನಿಂದ ಬಂದ ಸಾವರನೊಬ್ಬ ಕಾರಿನ ಮುಂದೆ ಹೋಗಿ ತನ್ನ ದ್ವಿಚಕ್ರವನ್ನು ನಿಲ್ಲಿಸುತ್ತಾನೆ. ಕಾರು ಮುಂದೆ ಹೋಗಲು ಯತ್ನಿಸಿದಾಗ ಹೆಲ್ಮೆಟ್‌ನಿಂದ ಕಾರಿನ ಗಾಜನ್ನು ಹೊಡೆಯುವುದನ್ನು ಕಾಣಬಹದು. ಬಳಿಕ ಸಲ್ಪ ಮುಂದೆ ಹೋಗಿ ಸೈಡ್‌ಗೆ ಪಾರ್ಕ್ ಮಾಡಿ ಕಾರಿನಿಂದ ಇಳಿದು ಬಂದ ವ್ಯಕ್ತಿ ದ್ವಿಚಕ್ರ ವಾಹನ ಸವಾರನಿಗೆ ಥಳಿಸಲು ಮುಂದಾಗುತ್ತಾನೆ. ಆಗ ಇಬ್ಬರ ನಡುವೆ ಬಡಿದಾಟ ಶುರುವಾಗುವುದನ್ನು ವಿಡಿಯೊದಲ್ಲಿ ಕಾರಣಬಹುದು. ಇಬ್ಬರ ನಡುವಿನ ಫೈಟಿಂಗ್ ವೇಳೆ ಇತರೆ ವಾಹನಗಳ ಸಂಚಾರಕ್ಕೆ ಕೆಲ ನಿಮಿಷಗಳ ಕಾಲ ಅಡ್ಡಿಯಾಗಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೊ ಬಗ್ಗೆ ಬೆಂಗಳೂರು ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ. "ಮತ್ತೊಂದು ಪುರಾವೆ ಇಲ್ಲಿದೆ, ಅದರಲ್ಲಿ ಅವರು ನಮ್ಮನ್ನು ನಿಂದಿಸುತ್ತಿದ್ದಾರೆ, ನನ್ನ ಹೆಂಡತಿ ಮತ್ತು ಮಗಳನ್ನು ಪ್ರಯಾಣಿಕರ ಸೀಟಿನಲ್ಲಿ ನೋಡಿ, ಅವರು ಆ ಕಿಟಕಿಯನ್ನು ಒಡೆದರು, ಒಂದು ಸೆಕೆಂಡಿನಲ್ಲಿ ನನ್ನ ಮಗಳು ಯಾವುದೇ ಗಾಯಗಳಿಲ್ಲದೆ ಪಾರಾದರು. ತುಂಬಾ ಬೇಜವಾಬ್ದಾರಿಯುತ ಕೃತ್ಯ ಎಂದು ಕಾರಿನಲ್ಲಿದ್ದ ಅಖಿಲ್ ಸಾಬು ಹೇಳಿದ್ದಾರೆ.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಇತ್ತೀಚೆಗೆ ಇಂತಹದ್ದೇ ಘಟನೆ ನಡೆದಿತ್ತು. ಪದೇ ಪೇದೆ ಈ ರೀತಿಯ ಕೃತ್ಯಗಳಿಗೆ ಪೊಲೀಸರು ಬ್ರೇಕ್ ಹಾಕಬೇಕಿದೆ. ರಸ್ತೆ ಅಪಘಾತದಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ. ವಾಹನ ಸಂಚಾರದ ವೇಳೆ ಇಂತಹ ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡುವಂತೆ ಜನರನ್ನು ಕೋರಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner