ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ; ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂ
Cyber Crime Helpline: ಸೈಬರ್ ವಂಚನೆ, ಸೈಬರ್ ಕ್ರೈಂ ಹೆಚ್ಚುತ್ತಿರುವ ಹೊತ್ತಲ್ಲಿ ಬೆಂಗಳೂರಲ್ಲಿ 9 ಹೆಲ್ಪ್‌ಲೈನ್ ಇದ್ರೂ ಕೆಲಸ ಮಾಡ್ತಾ ಇರೋದು ಎರಡು ಮಾತ್ರ. ಅದೂ ಜನರಿಗೆ ಸಮಾಧಾನ ನೀಡುವಂತಿಲ್ಲ. ಪೊಲೀಸರ ಬಳಿ ಸ್ಪಷ್ಟೀಕರಣ ಇದ್ರೂ, 2024ರಲ್ಲಿ ಕನ್ನಡಿಗರು ಕಳೆದುಕೊಂಡದ್ದು 109 ಕೋಟಿ ರೂಪಾಯಿ!
![ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ, ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂಪಾಯಿ ಎಂಬುದು ವಾಸ್ತವ ಸತ್ಯ. (ಸಾಂಕೇತಿಕ ಚಿತ್ರ) ಬೆಂಗಳೂರು ಸೈಬರ್ ವಂಚನೆ ಸಹಾಯವಾಣಿ ಕೆಲಸ ಮಾಡ್ತಾ ಇಲ್ಲ, ಪೊಲೀಸರು ಸ್ಪಷ್ಟೀಕರಣ ಕೊಟ್ರೂ 2024ರಲ್ಲಿ ಕನ್ನಡಿಗರು ಕಳಕೊಂಡದ್ದು 109 ಕೋಟಿ ರೂಪಾಯಿ ಎಂಬುದು ವಾಸ್ತವ ಸತ್ಯ. (ಸಾಂಕೇತಿಕ ಚಿತ್ರ)](https://images.hindustantimes.com/kannada/img/2024/12/29/550x309/Cyber_Crime_Helpline_1735488539612_1735488546991.png)
Cyber Crime Helpline: ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಭಾರತದ ಐಟಿ ರಾಜಧಾನಿ ಬೆಂಗಳೂರು ಒಂದು ವಿಚಿತ್ರವಾದ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಂತೂ ಸೈಬರ್ ಕ್ರೈಮ್ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ಪ್ರತಿ ಫೋನ್ ಕರೆಯೊಂದಿಗೂ ಕನೆಕ್ಟ್ ಆಗಿದೆ. ಆದರೆ, ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಬಗ್ಗೆ ದೂರು ನೀಡುವುದಕ್ಕೆ ಮೀಸಲಾದ ಹಾಟ್‌ಲೈನ್‌ಗಳು ಕೆಲಸ ಮಾಡ್ತಾ ಇಲ್ಲ. ಸ್ವಿಚ್ ಆಫ್ ಅಥವಾ ಬಹಳ ಹೊತ್ತು ರಿಂಗ್ ಆಗಿ ಸುಮ್ಮನಾಗುತ್ತವೆ. ಇದು ಬಹಳ ವಿಚಿತ್ರ ಸಮಸ್ಯೆಯೇ ಅಲ್ವ ಮತ್ತೆ. ಬೆಂಗಳೂರು ನಗರದ ಒಂಬತ್ತು ಸಿಇಎನ್ ಹಾಟ್‌ಲೈನ್‌ಗಳ ಪೈಕಿ, ಬನಶಂಕರಿಯಲ್ಲಿರುವ ದಕ್ಷಿಣ ಸಿಇಎನ್ ಠಾಣೆ ಮತ್ತು ವೈಟ್‌ಫೀಲ್ಡ್ ಸಿಇಎನ್ ಠಾಣೆಗಳ ಸಹಾಯವಾಣಿಗಳಷ್ಟೆ ಕೆಲಸ ಮಾಡಿವೆ. ಉಳಿದ ಠಾಣೆಗಳ ಸಹಾಯವಾಣಿಯಿಂದ ಸ್ಪಂದನೆಯೇ ಇಲ್ಲ. ಇದು ಬೆಂಗಳೂರು ನಗರದ ಸೈಬರ್ ಕ್ರೈಮ್ ಪರಿಹಾರ ಕಾರ್ಯವಿಧಾನದ ಲೋಪವನ್ನು ಬಹಿರಂಗಪಡಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಸೈಬರ್ ಕ್ರೈಮ್ ಸಹಾಯವಾಣಿ ಸ್ಪಂದನೆ ಕುರಿತ ರಿಯಾಲಿಟಿ ಚೆಕ್
ಸಾಮಾಜಿಕ ಕಾರ್ಯಕರ್ತ ಮತ್ತು ಎನ್‌ಜಿಒ ಸೇಂಟ್ ಬ್ರೋಫಸ್ ಆರ್ಮಿ ಸಂಸ್ಥಾಪಕ ದುಶ್ಯಂತ್ ದುಬೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸೈಬರ್ ಕ್ರೈಮ್ ಸಹಾಯವಾಣಿ ಸ್ಪಂದಿಸುತ್ತಿಲ್ಲ ಎಂಬುದರ ಕಡೆಗೆ ಗಮನಸೆಳೆದರು. ಅವರು ಪ್ರತಿಯೊಂದು ಸಂಖ್ಯೆಗೂ ಕರೆ ಮಾಡಿ ಸ್ಪಂದಿಸದೇ ಇರುವುದನ್ನು ದಾಖಲಿಸಿಕೊಂಡು ಆ ವಿಡಯೋವನ್ನು ಶೇರ್ ಮಾಡಿದ್ದರು. ಹಾಗೆ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಯಿತು.
“ಸೈಬರ್ ಕ್ರೈಮ್ ಸಂತ್ರಸ್ತರೊಬ್ಬರು ಈಸ್ಟ್ ಡಿವಿಷನ್ ಸಿಇಎನ್ ಸ್ಟೇಷನ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಈ ಸಮಸ್ಯೆ ಬಹಿರಂಗವಾಯಿತು. ಕೂಡಲೇ ನಾವು ಎಲ್ಲ ಸಹಾಯವಾಣಿ ಸಂಖ್ಯೆಗಳಿಗೂ ಕರೆ ಮಾಡಿ ಪರಿಶೀಲಿಸಿದೆವು ಎಂದು ದುಬೇ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಆರ್‌ಟಿಐ ಮೂಲಕ ಪಡೆದ ಸಹಾಯವಾಣಿ ಸಂಖ್ಯೆಗಳಿಂದ ಸ್ಪಂದನೆ ಇಲ್ಲ
ಅಕ್ಟೋಬರ್ 18 ರಂದು ಆರ್‌ಟಿಐ ಪ್ರಶ್ನೆಯ (HMBUH/R/2024/60754) ಮೂಲಕ ಪಡೆದ ಸಾರ್ವಜನಿಕ ಹಾಟ್‌ಲೈನ್ ಸಂಖ್ಯೆಗಳ ಪಟ್ಟಿಯನ್ನು ಬಳಸಿಕೊಂಡು, ದುಬೆ ಮತ್ತು ಅವರ ತಂಡವು ಯಾದೃಚ್ಛಿಕವಾಗಿ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿದೆ. ಫಲಿತಾಂಶ ಮಾತ್ರ ಅನಿರೀಕ್ಷಿತವಾಗಿತ್ತು. ಯಾವುದರಿಂದಲೂ ಸ್ಪಂದನೆ ಇಲ್ಲ. ಹಾಗಾಗಿ, "ಈ ಸಂಖ್ಯೆಗಳು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿವೆ. ನಾಗರಿಕರಿಗೆ ಹೆಚ್ಚು ಅಗತ್ಯವಿರುವಾಗ ಕೆಲಸದ ದಿನದಂದು ಅಪರಾಹ್ನ 3.51 ಕ್ಕೆ ಹಾಟ್‌ಲೈನ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಕೂರುವುದು ಎಂದರೇನು?" ಎಂದು ದುಬೆ ಟೀಕಿಸಿದ್ದಾಗಿ ವರದಿ ಹೇಳಿದೆ.
ಪ್ರತಿದಿನ ಸರಾಸರಿ ಐದು ದೂರುಗಳನ್ನು ಸ್ವೀಕರಿಸಲಾಗುತ್ತಿದೆ. ಆದಾಗ್ಯೂ, 2 ಲಕ್ಷ ರೂ.ಗಿಂತ ಹೆಚ್ಚಿನ ಆರ್ಥಿಕ ನಷ್ಟವನ್ನು ಒಳಗೊಂಡ ಪ್ರಕರಣಗಳಿಗೆ ಠಾಣೆಯು ಆದ್ಯತೆ ನೀಡುತ್ತದೆ. ಸಣ್ಣ ಅಪರಾಧಗಳಿಗೆ ಬಲಿಯಾದವರು ತಮ್ಮ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ನೀಡುವಂತೆ ಸಲಹೆ ನೀಡಲಾಗುತ್ತದೆ ಎಂದು ದಕ್ಷಿಣ ಸಿಇಎನ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರು ಎಂದು ಒಪ್ಪಿಕೊಂಡರು.
ವೈಟ್‌ಫೀಲ್ಡ್ ಸೆನ್ ಸ್ಟೇಷನ್‌ನಲ್ಲಿರುವ ಹಾಟ್‌ಲೈನ್ ಸಂಖ್ಯೆಯಲ್ಲಿ ಕರೆ ಸ್ವೀಕರಿಸಿದರು. ಆದರೆ ಕರ್ತವ್ಯದಲ್ಲಿದ್ದ ಅಧಿಕಾರಿ ಹೆಚ್ಚಿನ ಸಹಾಯಕ್ಕಾಗಿ ಠಾಣೆಗೆ ವೈಯಕ್ತಿಕವಾಗಿ ಭೇಟಿ ನೀಡುವಂತೆ ಸಲಹೆ ನೀಡಿದರು. ಪೊಲೀಸ್, ಸೈಬರ್ ಕ್ರೈಮ್ ಮತ್ತು ನಾರ್ಕೋಟಿಕ್ಸ್ ಉಪ ಇನ್ಸ್‌ಪೆಕ್ಟರ್ ಜನರಲ್ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಸಂಪರ್ಕಿಸಲು ಹಲವು ಸಲ ಪ್ರಯತ್ನಿಸಿದರೂ ಫಲಕೊಡಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ವಿಶೇಷವಾಗಿ ಗಮನಿಸಿ ಹೇಳುವುದಾದರೆ, ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. 2024 ರಲ್ಲಿ, ಕರ್ನಾಟಕದ ನಿವಾಸಿಗಳು ಡಿಜಿಟಲ್ ಅರೆಸ್ಟ್ ವಂಚನೆ ಮೂಲಕ 109.01 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳೂ ಈ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಗೃಹ ಸಚಿವ ಜಿ ಪರಮೇಶ್ವರ ಅವರು ಡಿಸೆಂಬರ್ 12 ರಂದು ವಿಧಾನ ಮಂಡಲ ಅಧಿವೇಶನದಲ್ಲಿ ಬಹಿರಂಗಪಡಿಸಿದ್ದರು. ಸೈಬರ್ ವಂಚನೆ ಸಹಾಯವಾಣಿ ಸಂಖ್ಯೆ 1930.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
![Whats_app_banner Whats_app_banner](https://kannada.hindustantimes.com/static-content/1y/wBanner.png)