Health News: ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ವಿರುದ್ಧ ಸಮರ: ಸೊಳ್ಳೆ ಉತ್ಪತ್ತಿ ಸ್ಥಳಗಳ ಫೋಟೋ ಕಳುಹಿಸಲು ಜಿಲ್ಲಾಡಳಿತ ಸೂಚನೆ, ನಂಬರ್ ಇಲ್ಲಿವೆ
ಕನ್ನಡ ಸುದ್ದಿ  /  ಕರ್ನಾಟಕ  /  Health News: ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ವಿರುದ್ಧ ಸಮರ: ಸೊಳ್ಳೆ ಉತ್ಪತ್ತಿ ಸ್ಥಳಗಳ ಫೋಟೋ ಕಳುಹಿಸಲು ಜಿಲ್ಲಾಡಳಿತ ಸೂಚನೆ, ನಂಬರ್ ಇಲ್ಲಿವೆ

Health News: ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ವಿರುದ್ಧ ಸಮರ: ಸೊಳ್ಳೆ ಉತ್ಪತ್ತಿ ಸ್ಥಳಗಳ ಫೋಟೋ ಕಳುಹಿಸಲು ಜಿಲ್ಲಾಡಳಿತ ಸೂಚನೆ, ನಂಬರ್ ಇಲ್ಲಿವೆ

Dakshin Kannada News ಡೆಂಗ್ಯೂ ಪ್ರಕರಣ ಏರಿಕೆ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಅಧಿಕಾರಿಗಳನ್ನು ಅಲರ್ಟ್‌ ಆಗಿಡುವ ಜತೆಗೆ ಜನತೆಯೂ ಎಚ್ಚರಿಕೆಯಿಂದ ಇರಲು ಫೋಟೋ ಕಳುಹಿಸುವ ಸೂಚನೆ ನೀಡಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ನಿಧಾನವಾಗಿ ಏರುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ನಿಧಾನವಾಗಿ ಏರುತ್ತಿವೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ಡೆಂಗ್ಯೂನಿಂದ ಬಾಧಿತ ಮೆದುಳು ಜ್ವರದಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಡೆಂಗ್ಯೂಗಾಗಿ ಟೆಸ್ಟ್ ಮಾಡಿಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ. ಆದಾಗ್ಯೂ ಡೆಂಗ್ಯೂ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಹೇಳಿಕೊಳ್ಳುತ್ತಿದೆ.

ಡೆಂಗ್ಯೂ ರೋಗಕ್ಕೆ ಕಾರಣವಾದ ಅಂಶಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ತೀವ್ರ ಪ್ರಯತ್ನಪಡುತ್ತಿದೆ. ಮನೆಯ ಸುತ್ತಮುತ್ತ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿರುವ ನೀರಿನ ತೊಟ್ಟಿಗಳು, ಡ್ರಮ್‍ಗಳು, ಬ್ಯಾರಲ್‍ಗಳು, ಹೂವಿನಕುಂಡ, ಹಳೆ ಟಯರ್‍ಗಳು, ಎಳೆನೀರು ಚಿಪ್ಪು ಮತ್ತಿತರ ವಸ್ತುಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ನೀರು ನಿಂತು ಸಂಗ್ರಹವಾದರೆ ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಲಾರ್ವಾ ನಾಶದಿಂದಷ್ಟೇ ಡೆಂಗ್ಯೂ ನಿಯಂತ್ರಣ ಸಾಧ್ಯ. ಡೆಂಗ್ಯೂ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೊಳ್ಳೆ ಉತ್ಪತ್ತಿಯಾಗುವ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯಾದರೂ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯ ಲಾರ್ವಾ ಕಂಡುಬಂದಲ್ಲಿ ಅದರ ಫೋಟೋ ತೆಗೆದು ಈ ಕೆಳಗಿನ ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಬೇಕು. ಫೋಟೋದೊಂದಿಗೆ ಸ್ಥಳದ ಸರಿಯಾದ ವಿಳಾಸವನ್ನು ನಮೂದಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಲು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಸೊಳ್ಳೆಗಳ ನಿರ್ಮೂಲನೆಯೊಂದೇ ಸರಿಯಾದ ಮದ್ದು ಎಂದು ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಹೇಳಿದ್ದಾರೆ. ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಅತೀ ಅಗತ್ಯ ಎಂದ ಅವರು, ರೋಗಗಳ ನಿಯಂತ್ರಣ, ಜನಸಂಖ್ಯಾ ನಿಯಂತ್ರಣದಂತಾ ಕಾರ್ಯಗಳು ಯಶಸ್ವಿಯಾಗಬೇಕಿದೆ ಎಂದವರು ಹೇಳಿದ್ದಾರೆ.

ನಗರ ಪ್ರದೇಶಗಳು:

ಮಂಗಳೂರು ಮಹಾನಗರಪಾಲಿಕೆ ಕಂಟ್ರೋಲ್ ರೂಂ: 9449007722,

ಮೇಲ್ವಿಚಾರಕರು: ನಿತಿನ್ – 9743219627, ಚಂದ್ರಹಾಸ- 9482250909, ಚೇತನ್- 9742567033, ಪ್ರವೀಣ್- 8618794892

ಉಳ್ಳಾಲ ನಗರಸಭೆ : ಪೌರಾಯುಕ್ತರು – 9449073871

ಸೋಮೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು- 9449452255

ಕೋಟೆಕಾರ್ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9902209485

ಮೂಡಬಿದ್ರೆ ಪುರಸಭೆ: ಮುಖ್ಯಾಧಿಕಾರಿಗಳು- 8105926291

ಮೂಲ್ಕಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 8105926291

ಕಿನ್ನಿಗೋಳಿ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9886080940

ಬಜಪೆ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9902774917

ಬಂಟ್ವಾಳ ಪುರಸಭೆ :ಮುಖ್ಯಾಧಿಕಾರಿಗಳು- 9972989637

ವಿಟ್ಲ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ -9606321133

ಪುತ್ತೂರು ನಗರಸಭೆ : ಪೌರಾಯುಕ್ತರು - 9886403029

ಬೆಳ್ತಂಗಡಿ ಪಟ್ಟಣ ಪಂಚಾಯತ್ : ಮುಖ್ಯಾಧಿಕಾರಿ – 9845518266

ಸುಳ್ಯ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9448253341

ಕಡಬ ಪಟ್ಟಣ ಪಂಚಾಯತ್: ಮುಖ್ಯಾಧಿಕಾರಿ – 9980882189

ಗ್ರಾಮಾಂತರ ಪ್ರದೇಶಗಳು:

ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9480862110/9483912230

ಉಳ್ಳಾಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ: 9620636400

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862110/9483912230

ಮೂಡಬಿದ್ರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9448795901

ಮೂಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9901114650

ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9480862115

ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353

ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 8217830169

ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ : 9902579353

(ವರದಿ: ಹರೀಶ ಮಾಂಬಾಡಿ.ಮಂಗಳೂರು)