ಕನ್ನಡ ಸುದ್ದಿ  /  ಕರ್ನಾಟಕ  /  ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ: ತಪ್ಪು ಮಾಹಿತಿ ಹರಡುವ ಕುರಿತು ಪ್ರಕಟಣೆ ಹೊರಡಿಸಿದ ಆಡಳಿತ

ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ: ತಪ್ಪು ಮಾಹಿತಿ ಹರಡುವ ಕುರಿತು ಪ್ರಕಟಣೆ ಹೊರಡಿಸಿದ ಆಡಳಿತ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರಲ್ಲಿ ದೇವಾಲಯದ ಹುಂಡಿಗೆ ಹಣ ಹಾಕ್ಬೇಡಿ ಅದು ಸಮಾಜಕ್ಕೆ ಉಪಯೋಗವಾಗೋದಿಲ್ಲ ಅನ್ನುವವರಿಗೆ ದೇವಸ್ಥಾನದ ಆಡಳಿತ ಸ್ಪಷ್ಟನೆ ನೀಡಿದೆ.

ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ: ತಪ್ಪು ಮಾಹಿತಿ ಹರಡುವ ಕುರಿತು ಪ್ರಕಟಣೆ ಹೊರಡಿಸಿದ ಆಡಳಿತ
ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ: ತಪ್ಪು ಮಾಹಿತಿ ಹರಡುವ ಕುರಿತು ಪ್ರಕಟಣೆ ಹೊರಡಿಸಿದ ಆಡಳಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರ ಹಾಗೂ ದೂರದ ರಾಜ್ಯಗಳಿಂದಲೂ ಭಕ್ತರು ನಾನಾ ಸೇವೆಗಳಿಗಾಗಿ ಆಗಮಿಸುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಕುರಿತು ಸಾಮಾಜಿಕ ತಾಣಗಳಲ್ಲಿ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದೀಗ ಕ್ಷೇತ್ರದ ವತಿಯಿಂದಲೇ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಹುಂಡಿಗೆ ಹಾಕಬೇಡಿ ಅನ್ನೋರಿಗೆ ಈ ಪ್ರಕಟಣೆ:

ಅನೇಕ ದಿನಗಳಿಂದ ಭಕ್ತರು ಮತ್ತು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತಿದ್ದೇವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರಲ್ಲಿ ದೇವಾಲಯದ ಹುಂಡಿಗೆ ಹಣ ಹಾಕ್ಬೇಡಿ ಅದು ಸಮಾಜಕ್ಕೆ ಉಪಯೋಗವಾಗೋದಿಲ್ಲ ಅನ್ನುವವರಿಗೆ ಸ್ಪಷ್ಟನೆ. ದೇವಾಲಯಕ್ಕೆ ಸೇರಿದ ಹಣದಲ್ಲಿ (ಹುಂಡಿ, ಪೂಜೆ,ಬಾಡಿಗೆ ಅಥವಾ ಇನ್ನಿತರ ಎಲ್ಲಾ) ದೇವಾಲಯದ ಎಲ್ಲಾ ಖರ್ಚು ಕಳೆದು ಉಳಿದ ಹಣದ 10% ಮಾತ್ರ ದೇವಾಲಯ ಸರಕಾರಕ್ಕೆ (ಮುಜರಾಯಿ ಇಲಾಖೆಗೆ) ಕೊಡಬೇಕಾಗಿರುತ್ತದೆ ಮಿಕ್ಕುಳಿದ ಹಣದಲ್ಲಿ ಅನ್ನದಾನ ರೂಪದಲ್ಲಿ ಬಂದ ದೇಣಿಗೆಯನ್ನು ಅನ್ನದಾನಕ್ಕೆ ಉಪಯೋಗಿಸಿಕೊಳ್ಳತಕ್ಕದ್ದು ಅದನ್ನು ಫಿಕ್ಸೆಡ್ ಡೆಪಾಸಿಟ್ ಮಾಡ್ಬೇಕಾಗಿರ್ತದೆ ಉಳಿದದ್ದನ್ನು ಅಭಿವೃದ್ಧಿಗೆ ಉಪಯೋಗಿಸಬಹುದು. ಈ ಹಣವನ್ನು ಅಭಿವೃದ್ಧಿಗೆ ಉಪಯೋಗಿಸಲು ಸರಕಾರದ ಅನೊಮೋದನೆ ಪಡೆಯಬೇಕಾಗುತ್ತದೆ ದೇವಾಲಯದ ಆಡಳಿತ ಮಂಡಳಿಯ ನಿರ್ಣಯದ ನಂತರ 5 ಲಕ್ಷದವರೆಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ, 25 ಲಕ್ಷದವರೆಗೆ ಜಿಲ್ಲಾಧಿಕಾರಿಗಳಿಗೆ, 2 ಕೋಟಿವರೆಗೆ ಮುಜರಾಯಿ ಇಲಾಖೆ ಕಮಿಶನರ್ ಮತ್ತು 10 ಕೋಟಿವರೆಗೆ ಮುಜರಾಯಿ ಮಂತ್ರಿಗಳಿಗೆ ಅವಕಾಶವಿದ್ದು ಮತ್ತು ಅದಕ್ಕೂ ಹೆಚ್ಚಿನ ಅನುಮೋದನೆಗೆ ಸರಕಾರದ ಕ್ಯಾಬಿನೇಟ್ ಗೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ದೇವಾಲಯದ ಹಣವನ್ನು ಖರ್ಚು ಮಾಡುವಾಗ ಟೆಂಡರ್ ಮೂಲಕವೇ ಮಾಡತಕ್ಕದ್ದು ಅಥವಾ ನಿರ್ಮಿತಿ ಕೇಂದ್ರ ಅಥವಾ ಇನ್ನಿತರ ಸರಕಾರದ ಸಂಸ್ಥೆಗಳಾದ 4ಜಿ ಎಕ್ಸಾಮ್ಷನ್ ಇರುವ ಸಂಸ್ಥೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡಬೇಕಾಗುತ್ತದೆ. ಅದಲ್ಲದೆ ಹಣವನ್ನು ಏಕ ಏಕಿ ಖರ್ಚು ಮಾಡಲು ಸಾಧ್ಯವಿಲ್ಲ. ಇನ್ನು ಮುಜರಾಯಿ ಇಲಾಖೆಗೆ ಸೇರಿದ 10% ಹಣವನ್ನು ಇನ್ನಿತರ ಸಣ್ಣ ಪುಟ್ಟ ದೇವಾಲಯದ ಅಭಿವೃದ್ಧಿ, ತಸ್ತಿಕ್ ಅಥವಾ ಇನ್ನಿತರ ಕಾರ್ಯಗಳಿಗೆ ಖರ್ಚು ಮಾಡುತ್ತಾರೆ ಎಂದು ವಿವರಿಸಿದೆ.

ಇಡೀ ಗ್ರಾಮಕ್ಕೆ ಉಚಿತ ನೀರು, ಗ್ರಾಮಾಭಿವೃದ್ಧಿಗೆ ನೆರವು

ಪ್ರಸ್ತುತ ಸುಬ್ರಹ್ಮಣ್ಯದಲ್ಲಿ ದೇವಾಲಯದ ವತಿಯಿಂದ ಇಡೀ ಸುಬ್ರಹ್ಮಣ್ಯ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಉಚಿತವಾಗಿ ನೀಡುತ್ತದೆ, ಯುಜಿಡಿ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ನಡೆಸಲಾಗಿದೆ, ಮುಖ್ಯ ರಸ್ತೆ ಹಾಗು ಅನೇಕ ಒಳ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲಾಗಿದೆ, ಬೀದಿ ದೀಪಗಳನ್ನು ಅಳವಡಿಸಲಾಗಿದೆ ಮತ್ತು ಇದರ ತಿಂಗಳ ವೆಚ್ಚವನ್ನು ಬರಿಸಲಾಗುತ್ತಿದೆ, ಸ್ಥಳೀಯ ಕಡಬ ಮತ್ತು ಸುಳ್ಯದಂತಹ ಸರಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್, ಡಯಾಲಿಸಿಸ್ ಹಾಗು ಇನ್ನಿತರ ಉಪಕರಣಗಳನ್ನು ನೀಡಲಾಗಿದೆ. ಸ್ಥಳೀಯ ದೇವಾಲಯಗಳಿಗೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಪ್ರತಿ ವರ್ಷ ಮಾಡಿಕೊಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇವಾಲಯಕ್ಕೆ ಸಂಬಂಧಿಸಿದ ಯಾವುದೇ ಮಠ ಮಾನ್ಯತೆ ಇರುವುದಿಲ್ಲ

ಕಳೆದ ಅನೇಕ ದಿನಗಳಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಸೇವೆಯ ವಿಚಾರವಾಗಿ ಜಾಲತಾಣ,ವೆಬ್ ನ್ಯೂಸ್ ನಲ್ಲಿ ಸುದ್ದಿಗಳು ಬರುತ್ತಿದ್ದು,ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರ ಶ್ರದ್ಧೆ,ಭಾವನೆ ದೃಷ್ಟಿಯಿಂದ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.

ದೇವಾಲಯಕ್ಕೆ ಸಂಭಂದಪಟ್ಟ ಯಾವುದೇ ಮಠ ಮಾನ್ಯತೆಗಳಿರುವುದಿಲ್ಲ ಇದು ಸಂಪೂರ್ಣವಾಗಿ ಮುಜರಾಯಿ ಆಡಳಿತಕೊಳಪಟ್ಟ ದೇವಾಲಯ. ದೇವಾಲಯಕ್ಕೆ ಸಂಭಂದಪಟ್ಟ ಹಿಂದಿನಿಂದಲೂ ಪರಂಪರಾಗತವಾಗಿ ನಡೆಸುವ ಪೂಜೆಗಳು ಕೆಲವು ಸಮಯದಿಂದ ಖಾಸಗಿ ಸ್ಥಳಗಳಲ್ಲಿ ನಡೆಯುತ್ತಿದ್ದು ಇದರ ಬಗ್ಗೆ ಯಾರು ಮೋಸಹೋಗಬಾರದೆಂದು ದೇವಾಲಯದ ಅಂಗಣದಲ್ಲಿ ಮತ್ತು ಅಲ್ಲಲ್ಲಿ ಬರುವ ಭಕ್ತಾದಿಗಳಿಗೆ ಕಾಣುವಂತೆ ಬೋರ್ಡ್ಗಳನ್ನು ಅಳವಡಿಸಲಾಗಿದೆ ಮತ್ತು ದೇವಾಲಯದ ಪೂಜೆಗಳನ್ನು ಯಾವುದೇ ಖಾಸಗಿ ವೆಬ್ಸೈಟ್ಗಳ್ಲಲಿ ಅವಕಾಶಗಳಿಲ್ಲ ಸರಕಾರದ http://temples.karnataka.gov.in ನಲ್ಲಿ ಮಾತ್ರ ಸಾಧ್ಯವಿರುತ್ತದೆ ಇದಲ್ಲದೆ ದೇವಾಲಯಕ್ಕೆ ಬೇರೆ ಯಾವುದೇ ವೆಬ್ಸೈಟ್ಗಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

(ವರದಿ: ಹರೀಶ್ ಮಾಂಬಾಡಿ)

IPL_Entry_Point