ಸಿಗಡಿ ಮೀನು ಅಗ್ಗ, ಬ್ರಾಯ್ಲರ್ ಕೋಳಿಯ ದರವೂ ಇಳಿಕೆ: ಕರಾವಳಿಯಲ್ಲೀಗ ಮೀನು, ಕೋಳಿಪ್ರಿಯರಿಗೆ ಹಬ್ಬ-dakshina kannada news fish prawns chicken rate down in coastal karnataka as monsoon restriction for fisheries over hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಗಡಿ ಮೀನು ಅಗ್ಗ, ಬ್ರಾಯ್ಲರ್ ಕೋಳಿಯ ದರವೂ ಇಳಿಕೆ: ಕರಾವಳಿಯಲ್ಲೀಗ ಮೀನು, ಕೋಳಿಪ್ರಿಯರಿಗೆ ಹಬ್ಬ

ಸಿಗಡಿ ಮೀನು ಅಗ್ಗ, ಬ್ರಾಯ್ಲರ್ ಕೋಳಿಯ ದರವೂ ಇಳಿಕೆ: ಕರಾವಳಿಯಲ್ಲೀಗ ಮೀನು, ಕೋಳಿಪ್ರಿಯರಿಗೆ ಹಬ್ಬ

ಮೀನುಗಾರಿಕೆ ಟ್ರೋಲಿಂಗ್ ನಿಷೇಧದ ಅವಧಿ ಮುಕ್ತಾಯಗೊಂಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಸುಮಾರು 52 ದಿನಗಳ ನಿಷೇಧದ ಬಳಿಕ ಮೀನುಗಾರಿಕೆ ಸಕ್ರಿಯವಾಗಿ ಆರಂಭಗೊಂಡ ಕಾರಣ ಸಿಗಡಿ, ಮೀನು ಈಗ ಹೇರಳವಾಗಿ ಸಿಗಲಾರಂಭಿಸಿದೆ. ಸಿಗಡಿ ಮತ್ತು ಮೀನಿನ ದರವೂ ಕುಸಿದಿದೆ. (ವರದಿ: ಹರೀಶ ಮಾಂಬಾಡಿ)

ಸಿಗಡಿ ಮೀನು ಅಗ್ಗ, ಬ್ರಾಯ್ಲರ್ ಕೋಳಿಯ ದರವೂ ಇಳಿಕೆ: ಕರಾವಳಿಯಲ್ಲೀಗ ಮೀನು, ಕೋಳಿಪ್ರಿಯರಿಗೆ ಹಬ್ಬ
ಸಿಗಡಿ ಮೀನು ಅಗ್ಗ, ಬ್ರಾಯ್ಲರ್ ಕೋಳಿಯ ದರವೂ ಇಳಿಕೆ: ಕರಾವಳಿಯಲ್ಲೀಗ ಮೀನು, ಕೋಳಿಪ್ರಿಯರಿಗೆ ಹಬ್ಬ

ಮಂಗಳೂರು: ಮಂಗಳೂರು ನಗರ ಸಹಿತ ಕರಾವಳಿ ಕರ್ನಾಟಕದಲ್ಲಿ ಮಳೆಯ ಅಬ್ಬರ ತಗ್ಗಿದೆ. ಸೆಖೆ, ಬಿಸಿಲು ಜಾಸ್ತಿಯಾಗಿದೆ. ಸೂರ್ಯನ ಬೆಳಕು ಕಾಣಿಸಿಕೊಳ್ಳಲಾರಂಭಿಸಿದೆ. ಮೀನುಗಾರರು ಸಮುದ್ರಕ್ಕಿಳಿದು ತಮ್ಮ ನಿತ್ಯದ ಕಸುಬಿನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಸಿಗಡಿ, ಮೀನು ಯಥೇಚ್ಛವಾಗಿ ದೊರಕಲಾರಂಭಿಸಿದೆ. ಜೂನ್ 9 ರಿಂದ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಇದೀಗ ಮೀನುಗಾರಿಕೆ ಟ್ರೋಲಿಂಗ್ ನಿಷೇಧದ ಅವಧಿ ಮುಕ್ತಾಯಗೊಂಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಸುಮಾರು 52 ದಿನಗಳ ನಿಷೇಧದ ಬಳಿಕ ಮೀನುಗಾರಿಕೆ ಸಕ್ರಿಯವಾಗಿ ಆರಂಭಗೊಂಡ ಕಾರಣ ಸಿಗಡಿ, ಮೀನು ಈಗ ಹೇರಳವಾಗಿ ಸಿಗಲಾರಂಭಿಸಿದೆ. ಸಿಗಡಿ ಮತ್ತು ಮೀನಿನ ದರವೂ ಕುಸಿದಿದೆ.

ಸಿಗಡಿ ಬೆಲೆ 100ರಿಂದ 160 ರೂ

ಮೀನುಗಾರಿಕೆ ನಿಷೇಧಕ್ಕೆ ಮೊದಲು ಒಂದು ಕೆ.ಜಿ.ಗೆ 350 ರೂಗಳಿಂದ 400 ರೂಗಳಷ್ಟು ಇದ್ದ ಸಿಗಡಿ ಬೆಲೆ ಈಗ 100ರಿಂದ 160 ರೂಗಳಿಗೆ ಇಳಿದಿದೆ. ಇದಲ್ಲದೆ ಭೂತಾಯಿ ಮೀನು, ಬಂಗುಡೆ ಮೀನಿನ ಬೆಲೆ ಇಳಿಯುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಹಾಗಾಗಿಲ್ಲ. ಭೂತಾಯಿ 300ರಿಂದ 350 ರೂಗಳಿದ್ದರೆ, ಬಂಗುಡೆ ಮೀನು 260 ರೂಗಳಿಂದ 260ರೂಗಳವರೆಗೆ ಇದೆ. ಇನ್ನೂ ಹೇರಳವಾಗಿ ಈ ಮೀನುಗಳು ದೊರಕಿದರೆ, ಇದರ ದರ ಕಡಿಮೆ ಆಗಲೂಬಹುದು.

ಕೋಳಿ ದರವೂ ಇಳಿಕೆ

ಕರ್ನಾಟಕ, ಕೇರಳದಲ್ಲಿ ಹಬ್ಬಗಳು ಆರಂಭಗೊಳ್ಳುತ್ತಿದೆ. ಕೇರಳದಲ್ಲಿ ಓಣಂ ಎಂದರೆ ವಿಶೇಷ. ಕಾಸರಗೋಡು ಪ್ರದೇಶ ಸೇರಿದಂತೆ ಕರ್ನಾಟಕ, ಕೇರಳ ಗಡಿಭಾಗಗಳಲ್ಲಿ ಓಣಂ ಆಚರಣೆ ನಡೆಯುತ್ತದೆ. ಇದಕ್ಕೆ ಹಲವು ದಿನಗಳಿದ್ದರೂ ಹಬ್ಬದ ಗಮ್ಮತ್ತು ಈಗಾಗಲೇ ಆರಂಭಗೊಳ್ಳುತ್ತಿವೆ. ಅದಕ್ಕೆ ತಕ್ಕುದಾಗಿ ಕೋಳಿ ಬೆಲೆ ಇಳಿಯುತ್ತಿದೆ. ವಾರದ ಮೊದಲು ಪ್ರತಿ ಕೆ.ಜಿ.ಗೆ 160ರಿಂದ 170 ರೂಗಳಿಗೆ ದೊರಕುತ್ತಿದ್ದ ಬ್ರಾಯ್ಲರ್ ಕೋಳಿ 100 ರೂಗೆ ಕುಸಿದಿದೆ. ಹೀಗಾಗಿ ಕೋಳಿ ಖರೀದಿಸಲು ಜನರು ಧಾವಿಸುತ್ತಿದ್ದಾರೆ. ಕೋಳಿ ಮಾಂಸದ ಬೆಲೆ ಇಳಿಕೆ ಕೇವಲ ಬ್ರಾಯ್ಲರ್ ಕೋಳಿಗಷ್ಟೇ ಇದೆ. ಟೈಸನ್ ಕೋಳಿ ಬೆಲೆ ಈಗಲೂ 175 ರೂಗಳ ಆಸುಪಾಸಿದೆ.

ಹೀಗಾಗಿ ಸಿಗಡಿ ಮೀನು ಜತೆಗೆ ಬ್ರಾಯ್ಲರ್ ಕೋಳಿಯ ಕಡೆ ಮಾಂಸಾಹಾರಿಗಳ ಕಣ್ಣು ನೆಟ್ಟಿದೆ. ಹೇಳಿಕೇಳಿ ಕರಾವಳಿ ಎಂದರೆ ಮೀನಿಗೆ ಫೇಮಸ್ಸು. ಸಿಗಡಿ, ಕೋಳಿಯ ನಾನಾ ಖಾದ್ಯಗಳನ್ನು ಸವಿಯಲು ಹುಮ್ಮಸ್ಸಿರುವವರು ಈಗಾಗಲೇ ಒಂದು ಕೈ ನೋಡೋಣ ಎಂದು ದರ ಕಡಿಮೆ ಇರುವ ಹಿನ್ನೆಲೆಯಲ್ಲಿ ಅಡುಗೆಮನೆಯಲ್ಲಿ ಸವಿಯೂಟ ಮಾಡುತ್ತಿದ್ದಾರೆ.