ಕುಕ್ಕೆ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ, ಭಕ್ತರ ದರ್ಶನದ ಸಮಯ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  ಕುಕ್ಕೆ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ, ಭಕ್ತರ ದರ್ಶನದ ಸಮಯ ವ್ಯತ್ಯಯ

ಕುಕ್ಕೆ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ, ಭಕ್ತರ ದರ್ಶನದ ಸಮಯ ವ್ಯತ್ಯಯ

Kukke Subramanya temple: ಸೆಪ್ಟೆಂಬರ್​ 12ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಭಕ್ತರ ದರ್ಶನದ ಸಮಯ ವ್ಯತ್ಯಯವಾಗಲಿದೆ.

ಕುಕ್ಕೆ ಸುಬ್ರಹ್ಮಣ್ಯ.
ಕುಕ್ಕೆ ಸುಬ್ರಹ್ಮಣ್ಯ.

ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆಪ್ಟೆಂಬರ್ 12ರಂದು ಗುರುವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ನೆರವೇರಲಿದೆ. ಈ ನಿಮಿತ್ತ ಪ್ರಾತಃಕಾಲ 5.15 ಕ್ಕೆ ಶ್ರೀಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 7.30 ಕ್ಕೆ ತೆನೆ ತರುವುದು ಹಾಗೂ ಕದಿರು ಪೂಜೆ ನಡೆಯಲಿದೆ. ಬೆಳಗ್ಗೆ 8ರ ಬಳಿಕ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತರಿಗೆ ಕದಿರು ವಿತರಣೆ ನಡೆಯಲಿದೆ. 

ದರುಶನದಲ್ಲಿ ವ್ಯತ್ಯಯ: ಈ ದಿನ ಬೆಳಗ್ಗೆ 10 ಗಂಟೆಯ ನಂತರ ಶ್ರೀ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಆಶ್ಲೇಷ ಬಲಿ ಸೇವೆಯು ಬೆಳಗ್ಗೆ 9 ಗಂಟೆಯ ನಂತರ 2 ಪಾಳಿಯಲ್ಲಿ ನಡೆಯಲಿದೆ. ಭಕ್ತಾಧಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ. ಹಾಗಾಗಿ ಭಕ್ತರು ಈ ಸಮಯವನ್ನು ನೋಡಿಕೊಂಡು ದರ್ಶನಕ್ಕೆ ಹೋದರೆ ಅನುಕೂಲವಾಗಲಿದೆ.

ತೆನೆ ಹಬ್ಬವು ಹಿಂದೂಗಳಲ್ಲಿ ಚೌತಿ, ನೋಂಪು-(ಚೌತಿಯ  ನಂತರದ 10ನೇ ದಿನ) ಷಷ್ಠಿ, ನವರಾತ್ರಿ ಸಂದರ್ಭದಲ್ಲಿ ಮನೆ ತುಂಬಿಸುವುದು ಎಂಬ ಕ್ರಮದಲ್ಲಿ ನಡೆಯುತ್ತದೆ. ಕ್ರೈಸ್ತರಲ್ಲಿ ಕನ್ಯ ಮರಿಯಮ್ಮ ಜನ್ಮ ದಿನಾಚರಣೆ ಉದ್ದೇಶವಾಗಿ ಕರಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಚೌತಿಹಬ್ಬಕ್ಕೆ ತೆನೆ ಬೇಕಾದರೆ ನಿರ್ದಿಷ್ಟವಾಗಿ ಸುಮಾರು 110 -120ದಿನಗಳ ಬೆಳವಣಿಗೆ  ಪಡೆದು ತೆನೆ ಬಾಗಿದ ಗಿಡವನ್ನೇ ನೀಡಬೇಕಾಗಿದೆ. ಚೌತಿ ಹಬ್ಬಕ್ಕಾಗಿ ಕಳೆದ ಮೇ ತಿಂಗಳಂದು ಭತ್ತದ ನಾಟಿಯನ್ನು ಮಾಡಲಾಗಿದೆ.

ತೆನೆ ಪೂಜೆ ಎಂಬುದು ಪ್ರಕೃತಿ ಆರಾಧನೆ. ದೇಗುಲದಿಂದ ಕದಿರನ್ನು ಭಕ್ತರು ಅವರವರ ಮನೆಗೆ ಕೊಂಡುಹೋಗಿ ದೇವರ ಮಂಟಪ, ಛಾವಣಿ, ಅಡುಗೆ ಕೋಣೆ, ಅಕ್ಕಿ ತುಂಬಿಸಿಡುವ ಪಾತ್ರೆಗೆ ಕಟ್ಟುವ ಸಂಪ್ರದಾಯ ಕರಾವಳಿಯೆಲ್ಲೆಡೆ ನಡೆಯುತ್ತದೆ. ಗದ್ದೆ ಹೊಂದಿರುವವರು ತೆನೆಯನ್ನು ಮನೆಗೆ ತಂದು ಪೂಜೆ ಮಾಡಿ, ಪುದ್ವಾರ್‌ ಊಟ ಮಾಡುತ್ತಾರೆ.ವಾಹನ, ಅಂಗಡಿ, ಕಚೇರಿಗಳಿಗೆ, ಬಾವಿ ದಂಡೆ ಮರ, ತೆಂಗು, ಹಲಸು ಮರಗಳಿಗೂ ಕದಿರನ್ನು ಕಟ್ಟಿ ತೆನೆ ಹಬ್ಬ ಆಚರಿಸಲಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳ ಗುಚ್ಛ ಇಲ್ಲಿದೆ

ಮೈಸೂರು ದಸರಾ ವಿಐಪಿ ಆನೆಗಳ ಆಹಾರ ಏನಿರುತ್ತೆ?: ಮೈಸೂರು: ಆನೆಗಳ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಮಾತೊಂದಿದೆ. ಮೈಸೂರು ದಸರಾಕ್ಕೆ ಬರುವ ಆನೆಗಳಿಗೂ ಈ ಮಾತು ಎರಡು ಪಟ್ಟು ಅನ್ವಯಿಸುತ್ತದೆ. ಏಕೆಂದರೆ ಇವು ಎರಡು ತಿಂಗಳ ಕಾಲ ಸಾಮಾನ್ಯ ಆನೆಗಳಲ್ಲ. ದಸರಾ ಮುಗಿಯುವವರೆಗೂ ಇವುಗಳಿಗೆ ವಿವಿಐಪಿ ಆತಿಥ್ಯ. ಆನೆಗಳ ಆಹಾರ, ಆರೋಗ್ಯ, ಜಂಬೂಸವಾರಿ ದಿನದ ಉಡುಗೆ ಸಹಿತ ಎಲ್ಲಾ ವಿಚಾರದಲ್ಲೂ ವಿಶೇಷ ಕಾಳಜಿ. ಈ ಕುರಿತ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ: ಉಡುಪಿ: ಉಡುಪಿಯಿಂದ ಬೈಂದೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಎನ್ನಲಾದ ಘನವಾಹನದಲ್ಲಿದ್ದ ಆಯಿಲ್ ಮಾದರಿ ವಸ್ತು ಸೋರಿಕೆಯಾದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಗೌರಿ ಗಣೇಶ ಹಬ್ಬದ ದಿನ ರಾತ್ರಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೈಲ ಸೋರಿಕೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಮಾರು 25ಕ್ಕೂ ಅಧಿಕ ಬೈಕುಗಳು ಮತ್ತು ಚತುಷ್ಚಕ್ರ ವಾಹನಗಳ ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Whats_app_banner