ಕನ್ನಡ ಸುದ್ದಿ  /  ಕರ್ನಾಟಕ  /  ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ, ಇನ್ನು ಹಣ ಹಾಕಬೇಡಿ ಎಂದ ಹೆತ್ತವರು

ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ, ಇನ್ನು ಹಣ ಹಾಕಬೇಡಿ ಎಂದ ಹೆತ್ತವರು

ದಕ್ಷಿಣ ಕನ್ನಡ ಜಿಲ್ಲೆಯ ಕೋಣಾಜೆಯ ಐದು ತಿಂಗಳ ಹಸುಗೂಸು ಪ್ರಿಯೋನ್ ಸ್ಯಾಮ್ ಮೊಂತೇರೋ ಶಸ್ತ್ರ ಚಿಕಿತ್ಸೆಗೆ 50 ಲಕ್ಷದ ಅವಶ್ಯಕತೆ ಇತ್ತು. ಸೋಷಿಯಲ್‌ ಮೀಡಿಯಾದಲ್ಲಿ ನೆರವು ಕೋರಿದಾಗ ದಾನಿಗಳಿಂದ 24 ಗಂಟೆಯಲ್ಲಿ 60 ಲಕ್ಷ ರೂಗೂ ಹೆಚ್ಚು ಹಣ ಸಂಗ್ರಹವಾಗಿದೆ. (ವರದಿ: ಹರೀಶ್‌ ಮಾಂಬಾಡಿ)

ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ
ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ

ಮಂಗಳೂರು: ಆ ಮಗುವಿಗೆ ಹುಟ್ಟಿದ ಐದೇ ತಿಂಗಳಲ್ಲಿ ಮಾರಕ ಕಾಯಿಲೆ. ಐದು ತಿಂಗಳ ಹಸುಗೂಸು ಪ್ರಿಯೋನ್ ಸ್ಯಾಮ್ ಮೊಂತೇರೋ ಶಸ್ತ್ರ ಚಿಕಿತ್ಸೆಗೆ 50 ಲಕ್ಷದ ಅವಶ್ಯಕತೆ ಇತ್ತು. ಎರಡು ದಿನಗಳ ಹಿಂದೆ ಹೆತ್ತವರು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಮಾಡಿ ಎಂದು ಸಂದೇಶ ಹಾಕಿದ್ದರು.

ಟ್ರೆಂಡಿಂಗ್​ ಸುದ್ದಿ

ಮನವಿಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು. ಎರಡೇ ದಿನಗಳಲ್ಲಿ ಅಂದರೆ 48 ಗಂಟೆಗಳ ಅವಧಿಯಲ್ಲಿ 60.62 ಲಕ್ಷ ರೂ ಸಂಗ್ರಹವಾಯಿತು. ಹೀಗಾಗಿ ಹೆತ್ತವರು ಮತ್ತೊಂದು ಸಂದೇಶವನ್ನು ನೀಡಬೇಕಾಯಿತು. ದಾನಿಗಳಿಗೆ ಕೃತಜ್ಞತೆ. ಮಗುವಿನ ಚಿಕಿತ್ಸೆಗೆ ಬೇಕಾದ ಹಣ ಸಂಗ್ರಹಣೆ ಆಗಿರುವುದರಿಂದ ಈ ಖಾತೆಗೆ ಇನ್ನು ಹಣ ನೀಡುವುದು ಬೇಡ ಎಂದು ಮಗುವಿನ ಹೆತ್ತವರಾದ ಕೊಣಾಜೆ ನಿವಾಸಿ ಸಂತೋಷ್ ಮೊಂತೇರೋ ಮತ್ತು ಪ್ರಿಯಾ ಹೇಳಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ವಿಚಾರದ ಕುರಿತು ಮಾಹಿತಿ ನೀಡಿದರು.

ಪ್ರಿಯೋನ್ ಸ್ಯಾಮ್‍ಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಹೆತ್ತವರು ತನ್ನ ಬಳಿಗೆ ಬಂದು ಸಹಕರಿಸುವಂತೆ ತಿಳಿಸಿದ್ದರು. ಅವರ ಒಪ್ಪಿಗೆಯ ಮೇರೆಗೆ ಮಗುವಿನ ತಾಯಿ ಪ್ರಿಯಾ ಅವರು ಮಗುವಿನ ಸ್ಥಿತಿಯ ಕುರಿತು ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ವಿಡಿಯೋ ರೆಕಾರ್ಡ್ ಮಾಡಿ ನಮ್ಮ ಫೇಸ್‍ಬುಕ್ ಪೇಜ್ ಸೇರಿದಂತೆ ವಾಟ್ಸಪ್ ಗ್ರೂಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆವು. 48 ಗಂಟೆಗಳಲ್ಲಿ ದೇಶ ವಿದೇಶಗಳಿಂದ ಉತ್ತಮ ಸ್ಪಂದನೆ ಸಿಕ್ಕಿತು. ಒಂದು ರೂ,. ವಿನಿಂದ ಒಂದು ಲಕ್ಷ ರೂ, ವರೆಗೆ ದಾನಿಗಳಿಂದ ಸಹಾಯಹಸ್ತ ದೊರಕಿತು. ಮಗುವಿನ ತಾಯಿ ಮತ್ತು ತಂದೆಯ ಬ್ಯಾಂಕ್ ಖಾತೆಗೆ ಹಣ ಹರಿದು ಬಂದಿದ್ದು ಒಟ್ಟು 60.62 ಲಕ್ಷ ರೂ ಸಂಗ್ರಹಣೆಯಾಗಿದೆ. ಈ ಹಣ ಸಂಗ್ರಹಕ್ಕೆ ಕ್ಯಾಥೋಲಿಕ್ ಸಂಘಟನೆಗಳು ಸೇರಿದಂತೆ ಎಲ್ಲಾ ಜಾತಿ ಧರ್ಮಗಳ ಸಂಘ ಸಂಸ್ಥೆಗಳು, ದಾನಿಗಳು ಸಹಾಯಹಸ್ತ ನೀಡಿದ್ದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಚಿಕಿತ್ಸೆಯ ಮೊತ್ತ ಸಂಗ್ರಹವಾಗಿರುವುದು ವಿಶೇಷ ಎಂದು ಫಯಾಝ್ ತಿಳಿಸಿದರು.

ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ಒಂದು ಹಂತದ ಶಸ್ತ್ರಚಿಕಿತ್ಸೆ ನಡೆದಿದ್ದು, ಮಗು ಆರೋಗ್ಯವಾಗಿದೆ. ಈ ಮಗುವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಹಣ ಜಮಾವಣೆಗೊಂಡ ಕಾರಣ ದಾನಿಗಳು ಇನ್ನು ಹಣ ನೀಡುವುದು ಬೇಡ ಈ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ಎಲ್ಲಾ ದಾನಿಗಳಿಗೂ ನಮ್ಮ ತುಂಬು ಹೃದಯದ ಕೃತಜ್ಞತೆಗಳು ಎಂದು ಮಗುವಿನ ಹೆತ್ತವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇವೇಗೌಡರ ಕುಟುಂಬವನ್ನು “420” ಎಂದು ಕರೆಯುವುದಿಲ್ಲ: ಡಿ.ಕೆ.ಸುರೇಶ್

ಬೆಂಗಳೂರು: ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಹಾಗೆ ಕರೆದರೆ ಅವರ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಪೆನ್ ಡ್ರೈವ್ ಈ ಕುಟುಂಬದ ಆಸ್ತಿ, ತೆನೆಹೊತ್ತ ಮಹಿಳೆ ಈಗ ಪೆನ್ ಡ್ರೈವ್ ಹೊರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಜನ ಹಾಡಿ, ಹೊಗಳುತ್ತಿದ್ದಾರೆ” ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದಾರೆ.

ಡಿ.ಕೆ ಬ್ರದರ್ಸ್ 420 ಎಂದು ಟೀಕೆ ಮಾಡಿರುವ ವಿಚಾರವಾಗಿ ಮಾಧ್ಯಮಗಳು ಕೇಳಿದಾಗ ಸುರೇಶ್ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. “ಅವರ ಕುಟುಂಬವನ್ನ ಇಡೀ ಪ್ರಪಂಚ ಕೊಂಡಾಡುತ್ತಿದೆ, ಹೊಗಳುತ್ತಿದೆ. ಜನರು ಹೇಳಿದ ಮಾತನ್ನು ನಾನು ಹೇಳುತ್ತಿದ್ದೇನೆ. ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದರೆ ನಾಲ್ಕು ಮಾತು ನಮ್ಮನ್ನು ಬೈದುಕೊಳ್ಳಲಿ. ಆದರೆ ನನಗೆ ಈ ರಾಜ್ಯದ ಹೆಣ್ಣು ಮಕ್ಕಳ ಮಾನವನ್ನು ಕಾಪಾಡುವ ಕೆಲಸ ಮೊದಲು ಆಗಬೇಕಿದೆ.

ಮಾಜಿ ಪ್ರಧಾನಿಗಳು ಸಣ್ಣ, ಸಣ್ಣ ವಿಚಾರಕ್ಕೂ ಮಾಧ್ಯಮಗೋಷ್ಠಿ ನಡೆಸಿ ಹೇಳಿಕೆ ನೀಡಿ, ಪಿಟಿಷನ್ ಬರೆಯುತ್ತಾರಲ್ಲವೇ? ಅದೇ ರೀತಿ ಈ ವಿಚಾರವಾಗಿಯೂ ಹೇಳಿಕೆ ನೀಡಲಿ ಹಾಗು ನೂಲಿನಂತೆ ಸೀರೆ ಎನ್ನುವ ಮಾತನ್ನು ಅರ್ಥೈಸಲಿ.ಪೆನ್ ಡ್ರೈವ್ ವಿಚಾರದಲ್ಲಿ ಬಿಜೆಪಿಯನ್ನು ಗುರಿ ಮಾಡಲಾಗುತ್ತಿದೆ ಎಂದು ಕೇಳಿದಾಗ “ಮೈತ್ರಿಯಲ್ಲಿ ಮೋದಿ ಅವರೂ ಪಾಲುದಾರರು. ಅವರು ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಬೇಕು. ಘಟನೆಯ ಕುರಿತು ಕ್ರಮ ತೆಗೆದುಕೊಳ್ಳಲು ಒತ್ತಾಯ ಮಾಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಇತ್ತೀಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point