ಕನ್ನಡ ಸುದ್ದಿ  /  Karnataka  /  Dalit Couple In Chikkaballapur Refused Permission To Wed In Temple

Chikkaballapur News: ದಲಿತ ಜೋಡಿಗೆ ದೇವಸ್ಥಾನದಲ್ಲಿ ಮದುವೆಯಾಗಲು ನಿರಾಕರಿಸಿದ ಆಡಳಿತ ಮಂಡಳಿ

ಕರ್ನಾಟಕದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದಲ್ಲಿ ದಲಿತ ಜೋಡಿಗೆ ಮದುವೆಯಾಗಲು ಆಡಳಿತ ಮಂಡಳಿ ನಿರಾಕರಿಸಿರುವ ಘಟನೆ ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಕರ್ನಾಟಕದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದಲ್ಲಿ ದಲಿತ ಜೋಡಿಗೆ ಮದುವೆಯಾಗಲು ಆಡಳಿತ ಮಂಡಳಿ ನಿರಾಕರಿಸಿರುವ ಘಟನೆ ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಬ್ರಾಹ್ಮಣರ ಹಳ್ಳಿಯ ನಿವಾಸಿ ಆವುಲುಕೊಂಡಪ್ಪ ಎಂಬುವರು ಮದುವೆಗೆ ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. ದೇವಸ್ಥಾನದ ಕಾರ್ಯದರ್ಶಿ ಮಾಚವಲಹಳ್ಳಿ ವೆಂಕಟರಾಯಪ್ಪ ಅವರು ಸಮುದಾಯ ಭವನವು ಈಗಾಗಲೇ ಬುಕ್ ಆಗಿದ್ದು, ಲಭ್ಯವಿಲ್ಲ ಎಂದು ತಿಳಿಸಿದ್ದರು

ಆದರೆ ನಿಜಕ್ಕೂ ಅಂದು ದೇವಸ್ಥಾನದ ಸಮುದಾಯ ಭವನ ಬುಲ್​ ಆಗಿರಲಿಲ್ಲ. ವಧು-ವರರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ದೇವಸ್ಥಾನದ ಕಾರ್ಯದರ್ಶಿ ಸುಳ್ಳು ಹೇಳಿದ್ದರು. ಬಳಿಕ ಈ ಜೋಡಿ ಬೀಗ ಹಾಕಿದ್ದ ದೇವಾಲಯದ ಮುಂದೆ ವಿವಾಹವಾಗಿದ್ದಾರೆ.

ನಾನು ಮತ್ತು ಪತ್ನಿ ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಮದುವೆ ಮಂಟಪವನ್ನು ಬಾಡಿಗೆಗೆ ನೀಡಿಲ್ಲ ಎಂದು ಅವುಲುಕೊಂಡಪ್ಪ ಆರೋಪಿಸಿದ್ದಾರೆ. ಈ ಕುರಿತು ಗುಡಿಬಂಡೆ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ದಲಿತ ಸಂಘಟನೆಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಜ್ಯೋತಿಷ್ಯ ನಂಬಿ ಹೆಂಡತಿ, ಮಗುವನ್ನು ಹೊರಹಾಕಿದ ಪತಿರಾಯ

ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಕುಟುಂಬಕ್ಕೆ ಅದೃಷ್ಟದ ಬದಲು ದುರಾದೃಷ್ಟ ತರಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಮಾತು ಕೇಳಿದ ಈ ವ್ಯಕ್ತಿ, ತಾನು ತಾಳಿ ಕಟ್ಟಿ ವಿವಾಹವಾದ ಪತ್ನಿ ಹಾಗೂ ಮೂರು ವರ್ಷದ ಮಗನನ್ನು ಮನೆಯಿಂದ ಹೊರ ಹಾಕಿದ್ದಾನೆ. ಹೀಗೆಂದು ಸಂತ್ರಸ್ತ ಮಹಿಳೆಯು ರಾಮನಗರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದುವೆಯಾದಾಗಿನಿಂದಲೂ ಪತಿ ವರದಕ್ಷಿಣೆಗಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಮಗನ ಮೂಲ ನಕ್ಷತ್ರದ ಜನನದ ಬಗ್ಗೆ ತಿಳಿದ ಬಳಿಕ ಆತ ನಿತ್ಯ ಪೀಡಿಸುತ್ತಿದ್ದಾನೆ ಎಂದು ಮಹಿಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ದಂಪತಿ ನಡುವಿನ ಪ್ರಮುಖ ಸಮಸ್ಯೆ ವರದಕ್ಷಿಣೆ. ಅದಕ್ಕೆ ನೆಪವಾಗಿ, ಆ ಮಗು ಕುಟುಂಬಕ್ಕೆ ದುರಾದೃಷ್ಟ ತರುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಹಿನ್ನೆಲೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರು ತನ್ನನ್ನು ಹೊರಹಾಕಿದ್ದಾರೆ ಎಂದು ಶ್ರುತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರ ಪ್ರಕಾರ, ಈ ದಂಪತಿಗೆ 2020ರ ಜನವರಿ 22ರಂದು ಗಂಡು ಮಗುವಾಗಿದೆ. ಮಗುವಿನ ಭವಿಷ್ಯ ಕೇಳುವ ಸಲುವಾಗಿ ಪತಿ ಜ್ಯೋತಿಷಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಗು ಮೂಲ ನಕ್ಷತ್ರದಲ್ಲಿ ಹುಟ್ಟಿರುವುದರಿಂಧ ತಂದೆ ಹಾಗೂ ಕುಟುಂಬಕ್ಕೆ ದುರದೃಷ್ಟಕರ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಬಳಿಕ ನವೀನ್ ತನ್ನ ಹೆಂಡತಿ ಮತ್ತು ಮಗುವಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನಂತೆ.

ವಿಭಾಗ