ಕನ್ನಡ ಸುದ್ದಿ  /  Karnataka  /  Dalit Family Fined <Span Class='webrupee'>₹</span>60000 In Kolar Karnataka What Is Untouchability In India Explained

Dalit family fined 60000: ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ಬಾಲಕನಿಗೆ 60 ಸಾವಿರ ದಂಡ, ಏನಿದು ಅಸ್ಪೃಶ್ಯತೆ, ಸಂವಿಧಾನ ಹೇಳಿದ್ದೇನು?

Untouchability: ರಾಜ್ಯದಲ್ಲಿ ಇನ್ನೂ ಅಸ್ಪಶ್ಯತೆ ಜೀವಂತವಾಗಿರುವುದಕ್ಕೆ ಸಾಕ್ಷಿಯೆಂಬಂತೆ ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ಇತ್ತೀಚೆಗೆ ದಲಿತ ಬಾಲಕನಿಗೆ ಗ್ರಾಮದ ಕೆಲವು ಒಕ್ಕಲಿಗ ಮುಖಂಡರು 60 ಸಾವಿರ ರೂ. ದಂಡ ವಿಧಿಸಿ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಗ್ರಾಮದ ಸದಸ್ಯ ಸೇರಿದಂತೆ ಎಂಟು ಜನರ ವಿರುದ್ಧ ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dalit family fined  ₹60000: ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ದಂಡ, ಪ್ರಕರಣ ದಾಖಲಿಸಿದ ಪೊಲೀಸರು
Dalit family fined ₹60000: ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ದಂಡ, ಪ್ರಕರಣ ದಾಖಲಿಸಿದ ಪೊಲೀಸರು

Untouchability: ರಾಜ್ಯದಲ್ಲಿ ಇನ್ನೂ ಅಸ್ಪಶ್ಯತೆ ಜೀವಂತವಾಗಿರುವುದಕ್ಕೆ ಸಾಕ್ಷಿಯೆಂಬಂತೆ ದೇವರ ಗುಜ್ಜಕೋಲು ಮುಟ್ಟಿದ್ದಕ್ಕೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ಇತ್ತೀಚೆಗೆ ದಲಿತ ಬಾಲಕನಿಗೆ ಗ್ರಾಮದ ಕೆಲವು ಒಕ್ಕಲಿಗ ಮುಖಂಡರು 60 ಸಾವಿರ ರೂ. ದಂಡ ವಿಧಿಸಿ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಗ್ರಾಮದ ಸದಸ್ಯ ಸೇರಿದಂತೆ ಎಂಟು ಜನರ ವಿರುದ್ಧ ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ಕೋಲಾರ ಜಿಲ್ಲೆಯ ಟೇಕಲ್‌ ಹೋಬಳಿಯ ಉಳ್ಳೇರಹಳ್ಳಿ ಗ್ರಾಮ ದೇವತೆ ಭೂತಮ್ಮನ ಮೆರವಣಿಗೆಯಲ್ಲಿ ಪರಿಶಿಷ್ಟ ಜಾತಿಯ ರಮೇಶ್‌ ಮತ್ತು ಶೋಭಾ ದಂಪತಿಯ ಹದಿನೈದು ವರ್ಷದ ಮಗನಾದ ಚೇತನ್‌ ಗುಜ್ಜಗೋಲು ಮುಟ್ಟಿದನೆಂದು ಆರೋಪಿಸಿ ಗ್ರಾಮದ ಕೆಲವರು ಬಾಲಕನ ಕುಟುಂಬಕ್ಕೆ 60 ಸಾವಿರ ರೂ. ದಂಡ ವಿಧಿಸಿದ್ದರು. ಈ ಘಟನೆ ಸೆಪ್ಟೆಂಬರ್‌ ಎಂಟರಂದು ನಡೆದಿತ್ತು. ಅಕ್ಟೋಬರ್‌ 1ರೊಳಗೆ ದಂಡ ಪಾವತಿಸದೆ ಇದ್ದರೆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂದು ಬಾಲಕನ ತಾಯಿ ಶೋಭಾ ನಿನ್ನೆ ಪೊಲೀಸ್‌ ದೂರು ನೀಡಿದ್ದರು.

ಈ ಘಟನೆ ಕುರಿತು ವಿವಿಧ ಪತ್ರಿಕೆಗಳು ವರದಿ ಮಾಡಿದ್ದು, ವಿಷಯ ತಿಳಿದ ಅಂಬೇಡ್ಕರ್‌ ಸೇವಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷರಾದ ಕೆ.ಎಂ. ಸಂದೇಶ್‌ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಬಳಿಕ ಪೊಲೀಸ್‌ ದೂರು ನೀಡಲಾಗಿತ್ತು. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ನಾರಾಯಣಸ್ವಾಮಿ, ವೆಂಕಟೇಶಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಸ್ತಿ ಠಾಣೆಯ ಪೊಲೀಸ್ ನಿರೀಕ್ಷಕ ವಸಂತ್ ಹೇಳಿದ್ದಾರೆ.

ಮೆರವಣಿಗೆ ವೇಳೆ ದೇವರ ವಿಗ್ರಹಕ್ಕೆ ಅಡಿಪಾಯವಾಗಿದ್ದ ಗುಜ್ಜಕೋಲು ಕೆಳಗೆ ಬಿದ್ದಿತ್ತು. ತಕ್ಷಣ ಈ ಕೋಲನ್ನು ಚೇತನ್‌ ಎತ್ತಿದ್ದಾನೆ. ಇದನ್ನು ಗಮನಿಸಿದ ಒಕ್ಕಲಿಗ ಸಮುದಾಯದ ನಾರಾಯಣ ಸ್ವಾಮಿ, ರಮೇಶ್‌, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾರಾಯಣ ಸ್ವಾಮಿಯು ನನ್ನ ಮಗನಿಗೆ ಹೊಡೆದಿದ್ದಾರೆ ಎಂದು ಶೋಭಾ ದೂರಿನಲ್ಲಿ ತಿಳಿಸಿದ್ದಾರೆ. ದೇವಾಲಯ ಮೈಲಿಗೆಯಾಗಿದ್ದು, ದೇಗುಲಕ್ಕೆ ಪೇಂಟ್‌ ಮಾಡಬೇಕಿದೆ, ಇದಕ್ಕಾಗಿ ದಂಡ ಪಾವತಿಸುವಂತೆ ಅವರು ಆಗ್ರಹಿಸಿದ್ದರು. ಈ ಸಮಯದಲ್ಲಿ ನನ್ನಲ್ಲಿ ಹಣವಿಲ್ಲವೆಂದು ಕಷ್ಟಪಟ್ಟು ಕೆಲಸ ಮಾಡಿ, ಸಾಲ ಮಾಡಿ 5 ಸಾವಿರ ರೂ. ಹಣ ಹೊಂದಿಸಿ ನೀಡಲು ಶೋಭಾ ಮುಂದಾಗಿದ್ದರು.

ಅಸ್ಪೃಶ್ಯತೆ ಎಂದರೇನು? (What is untouchability class)

ಒಂದು ಗುಂಪನ್ನು ಸಮಾಜದಿಂದ ನಿರಾಕರಿಸಿದ ವರ್ಗ ಎಂದು ಪರಿಗಣಿಸುವುದನ್ನು ಅಸ್ಪಶ್ಯತೆ ಎನ್ನಬಹುದು. ಸಾಮಾನ್ಯವಾಗಿ ಉನ್ನತ ಜಾತಿಯ ವ್ಯಕ್ತಿಗಳಿಂದ ಜಾತಿ ವ್ಯವಸ್ಥೆಯಿಂದ ಹೊರಗಿಡಲ್ಪಟ್ಟ ವ್ಯಕ್ತಿಗಳಿಗೆ ನೀಡುವ ಕಿರುಕುಳ, ತೊಂದರೆಗಳನ್ನು ಅಸ್ಪಶ್ಯತೆ ಎಂದು ಪರಿಗಣಿಸಲಾಗುತ್ತದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಹೀಗಿದ್ದರೂ, ಅಲ್ಲಲ್ಲಿ ಅಸ್ಪಶ್ಯತೆ ಘಟನೆಗಳು ನಡೆಯುತ್ತಲೇ ಇರುತ್ತವೆ.

ಭಾರತದ ಸಂವಿಧಾನದ 17ನೇ ವಿಧಿ ಹೇಳುವುದೇನು? (What is untouchability in Indian Constitution)

ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಭಾರತದ ಸಂವಿಧಾನದ 17ನೇ ವಿಧಿಯು ಸ್ಪಷ್ಟವಾಗಿ ತಿಳಿಸಿದೆ. ಅದರ ಪ್ರಕಾರ, "ಅಸ್ಪೃಶ್ಯತೆಯನ್ನು ನಿರ್ಮೂಲನಗೊಳಿಸಲಾಗಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ. ಅಸ್ಪೃಶ್ಯತೆಯಿಂದ ಉದ್ಭವಿಸುವ ಯಾವುದೇ ಅಸಮರ್ಥತೆಯನ್ನು ಆಚರಣೆಗೆ ತರುವುದು ಕಾನೂನಿನ ಅನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು ಎಂದು ಹೇಳಲಾಗಿದೆ.

ವಿಭಾಗ