ಕರ್ನಾಟಕದ ಜಲಾಶಯದ ಮಟ್ಟ ಜೂನ್ 11; ರಾಜ್ಯದ ಅಣೆಕಟ್ಟೆಗಳಿಗೆ ಒಳಹರಿವು ಹೆಚ್ಚಳ, ಆಲಮಟ್ಟಿ, ಕೆಆರ್‌ಎಸ್ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಜಲಾಶಯದ ಮಟ್ಟ ಜೂನ್ 11; ಮುಂಗಾರು ಮಳೆ ರಾಜ್ಯವನ್ನು ವ್ಯಾಪಿಸುತ್ತಿದ್ದು, ವಿವಿಧ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ರಾಜ್ಯದ ಅಣೆಕಟ್ಟೆಗಳಿಗೆ ಒಳಹರಿವು ಹೆಚ್ಚಳವಾಗಿದೆ, ಆಲಮಟ್ಟಿ, ಕೆಆರ್‌ಎಸ್ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ.
ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗತೊಡಗಿದೆ. ವಿಶೇಷವಾಗಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಲಿ ಕೃಷ್ಣರಾಜ ಸಾಗರ (ಕೆ ಆರ್ ಸಾಗರ) ಅಣೆಕಟ್ಟೆಯ ಒಳಹರಿವು ಹೆಚ್ಚಳವಾಗಿದೆ. ಸೋಮವಾರ ಜಲಾಶಯದ ನೀರಿನ ಮಟ್ಟ 1455 ಕ್ಯೂಸೆಕ್ಸ್ ಏರಿಕೆಯಾಗಿತ್ತು. ಅಣೆಕಟ್ಟೆಯ ಗರಿಷ್ಠ ಮಟ್ಟದ ಒಳಹರಿವು ಶುರುವಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಬಿದ್ದ ಕಾರಣ, ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾಗಿದೆ. ರಾಜಾಪುರ ಬ್ಯಾರಕ್‌ನಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಮೂಲಕ ಕೃಷ್ಣಾ ನದಿಗೆ 960 ಕ್ಯೂಸೆಕ್ ನೀರು ಹರಿಯತೊಡಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25ರ ಒಳಗೆ ಇದೆ. 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 55 ರಿಂದ ಶೇಕಡ 75 ನಡುವೆ ಇದೆ. ಇನ್ನೂ ಏಳು ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25 ರಿಂದ ಶೇಕಡ 55ರ ನಡುವೆ ಇದೆ. ಸದ್ಯ ಮಳೆಯಾಗುತ್ತಿರುವ ಕಾರಣ ಕೆಲವು ಕಡೆ ಜಲಾಶಯಗಳಿಗೆ ನೀರಿನ ಒಳ ಹರಿವು ಉಂಟಾಗಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಇಂದು (ಜೂನ್ 11) ಹೀಗಿದೆ.
ಕರ್ನಾಟಕದ ಜಲಾಶಯ ಮಟ್ಟ ಜೂನ್ 11
1) ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ - 14.50 (ಟಿಎಂಸಿ)
ಒಳಹರಿವು - 4222 ಕ್ಯೂಸೆಕ್
ಹೊರಹರಿವು 2170 ಕ್ಯೂಸೆಕ್
2) ಸುಪಾ ಜಲಾಶಯ
ನೀರಿನ ಮಟ್ಟ - 32.36 (ಟಿಎಂಸಿ)
ಒಳಹರಿವು - 476 ಕ್ಯೂಸೆಕ್
ಹೊರ ಹರಿವು - 2445 ಕ್ಯೂಸೆಕ್
3) ವಾರಾಹಿ ಜಲಾಶಯ
ನೀರಿನ ಮಟ್ಟ - 3.50 ಟಿಎಂಸಿ
ಒಳಹರಿವು - 584 ಕ್ಯೂಸೆಕ್
ಹೊರ ಹರಿವು -
4) ಹಾರಂಗಿ ಜಲಾಶಯ
ನೀರಿನ ಮಟ್ಟ - 3.12 ಟಿಎಂಸಿ
ಒಳ ಹರಿವು - 520 ಕ್ಯೂಸೆಕ್
ಹೊರ ಹರಿವು - 200 ಕ್ಯೂಸೆಕ್
5) ಹೇಮಾವತಿ ಜಲಾಶಯ
ನೀರಿನ ಮಟ್ಟ 10.14 ಟಿಎಂಸಿ
ಒಳಹರಿವು - 1376 ಕ್ಯೂಸೆಕ್
ಹೊರ ಹರಿವು - 250 ಕ್ಯೂಸೆಕ್
6) ಕೆಆರ್‌ಎಸ್ ಜಲಾಶಯ
ನೀರಿನ ಮಟ್ಟ - 13.38 ಟಿಎಂಸಿ
ಒಳಹರಿವು - 1759 ಕ್ಯೂಸೆಕ್
ಹೊರ ಹರಿವು - 450 ಕ್ಯೂಸೆಕ್
7) ಕಬಿನಿ ಜಲಾಶಯ
ನೀರಿನ ಮಟ್ಟ - 10.39 ಟಿಎಂಸಿ
ಒಳ ಹರಿವು - 2263 ಕ್ಯೂಸೆಕ್
ಹೊರ ಹರಿವು - 300 ಕ್ಯೂಸೆಕ್
8) ಭದ್ರಾ ಜಲಾಶಯ
ನೀರಿನ ಮಟ್ಟ 14.66 ಟಿಎಂಸಿ
ಒಳಹರಿವು - 2911 ಕ್ಯೂಸೆಕ್
ಹೊರ ಹರಿವು - 341 ಕ್ಯೂಸೆಕ್
9) ತುಂಗಭದ್ರಾ ಜಲಾಶಯ
ನೀರಿನ ಮಟ್ಟ 4.92 ಟಿಎಂಸಿ
ಒಳಹರಿವು - 4024 ಕ್ಯೂಸೆಕ್
ಹೊರ ಹರಿವು - 54 ಕ್ಯೂಸೆಕ್
10) ಘಟಪ್ರಭಾ ಜಲಾಶಯ
ನೀರಿನ ಮಟ್ಟ - 8.36 ಟಿಎಂಸಿ
ಒಳಹರಿವು - 348 ಕ್ಯುಸೆಕ್
ಹೊರ ಹರಿವು - 348 ಕ್ಯೂಸೆಕ್
11) ಮಲಪ್ರಭಾ ಜಲಾಶಯ
ನೀರಿನ ಮಟ್ಟ 6.60 ಟಿಎಂಸಿ
ಒಳಹರಿವು -
ಹೊರ ಹರಿವು -194 ಕ್ಯೂಸೆಕ್
12) ಆಲಮಟ್ಟಿ ಜಲಾಶಯ
ನೀರಿನ ಮಟ್ಟ - 23.47 ಟಿಎಂಸಿ
ಒಳಹರಿವು - 21251 ಕ್ಯುಸೆಕ್
ಹೊರ ಹರಿವು - 430 ಕ್ಯೂಸೆಕ್
13) ನಾರಾಯಣಪುರ ಜಲಾಶಯ
ನೀರಿನ ಮಟ್ಟ - 20.29 ಟಿಎಂಸಿ
ಒಳಹರಿವು - 3653 ಕ್ಯೂಸೆಕ್
ಹೊರಹರಿವು - 193 ಕ್ಯೂಸೆಕ್
14) ವಾಣಿ ವಿಲಾಸ ಸಾಗರ ಜಲಾಶಯ
ನೀರಿನ ಮಟ್ಟ 18.36 ಟಿಎಂಸಿ
ಒಳಹರಿವು - 0 ಕ್ಯುಸೆಕ್
ಹೊರ ಹರಿವು 147 ಕ್ಯೂಸೆಕ್
ಮುಂದಿನ 3 ರಿಂದ 4 ದಿನ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ
ಕರ್ನಾಟಕ, ಕೇರಳ, ಲಕ್ಷದ್ವೀಪ ಮತ್ತು ಆಂಧ್ರಪ್ರದೇಶದಲ್ಲಿ ಮುಂದಿನ 3 ರಿಂದ 4 ದಿನಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಬೆಳಗಾವಿ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಗಾಳಿಯೊಂದಿಗೆ ಭಾರಿ ಮಳೆ ಸಂಭವಿಸುವ ಸಾಧ್ಯತೆಯಿದೆ. ಮೈಸೂರು, ಹಾಸನ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ತಿಳಿಸಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)