ಕರ್ನಾಟಕದ ಜಲಾಶಯ ಮಟ್ಟ ಜೂನ್ 8; ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಸೇರಿ ಯಾವ್ಯಾವ ಅಣೆಕಟ್ಟೆಗಳಲ್ಲಿ ನೀರು ಎಷ್ಟಿದೆ
ಕರ್ನಾಟಕದಲ್ಲಿ ಇಂದು (ಜೂನ್ 8) ಮಳೆಯಾಗುತ್ತಿದ್ದು, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದರೆ, 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಈ ನಡುವೆ, ಕರ್ನಾಟಕದ ಜಲಾಶಯ ಮಟ್ಟ ಜೂನ್ 8 ರಂದು ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದು, ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಸೇರಿ ಯಾವ್ಯಾವ ಅಣೆಕಟ್ಟೆಗಳಲ್ಲಿ ನೀರು ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದ ಉದ್ದಗಲಕ್ಕೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಒಳಹರಿವು ಉಂಟಾಗತೊಡಗಿದೆ. ಕರಾವಳಿ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾದರೆ, ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಇಂದು ಮಳೆಯಾಗುತ್ತಿದೆ. ಜನವರಿ ತಿಂಗಳಿಂದ ಮೇ ಮಧ್ಯಭಾಗದ ತನಕ ಬಿರುಬಿಸಿಲು ಅನುಭವಿಸಿದ್ದ ರಾಜ್ಯದ ಭೂಮಿ ಈಗ ತಂಪಾಗತೊಡಗಿದೆ. ಈ ನಡುವೆ, ಜಲಾಶಯಗಳಿಗೆ ನೀರು ಹರಿಯತೊಡಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25ರ ಒಳಗೆ ಇದೆ. 7 ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 55 ರಿಂದ ಶೇಕಡ 75 ನಡುವೆ ಇದೆ. ಇನ್ನೂ ಏಳು ಜಲಾಶಯಗಳಲ್ಲಿ ನೀರಿನ ಮಟ್ಟ ಶೇಕಡ 25 ರಿಂದ ಶೇಕಡ 55ರ ನಡುವೆ ಇದೆ. ಸದ್ಯ ಮಳೆಯಾಗುತ್ತಿರುವ ಕಾರಣ ಕೆಲವು ಕಡೆ ಜಲಾಶಯಗಳಿಗೆ ನೀರಿನ ಒಳ ಹರಿವು ಉಂಟಾಗಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಇಂದು (ಜೂನ್ 8) ಹೀಗಿದೆ.
ಕರ್ನಾಟಕದ ಜಲಾಶಯ ಮಟ್ಟ ಜೂನ್ 8
1) ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ - 13.32 (ಟಿಎಂಸಿ)
ಒಳಹರಿವು 924 ಕ್ಯೂಸೆಕ್
ಹೊರಹರಿವು 2456 ಕ್ಯೂಸೆಕ್
2) ಸುಪಾ ಜಲಾಶಯ
ನೀರಿನ ಮಟ್ಟ - 32.51 (ಟಿಎಂಸಿ)
ಒಳಹರಿವು - 476 ಕ್ಯೂಸೆಕ್
ಹೊರ ಹರಿವು - 2459 ಕ್ಯೂಸೆಕ್
3) ವಾರಾಹಿ ಜಲಾಶಯ
ನೀರಿನ ಮಟ್ಟ - 3.37 ಟಿಎಂಸಿ
ಒಳಹರಿವು - 116 ಕ್ಯೂಸೆಕ್
ಹೊರ ಹರಿವು -
4) ಹಾರಂಗಿ ಜಲಾಶಯ
ನೀರಿನ ಮಟ್ಟ - 3.06 ಟಿಎಂಸಿ
ಒಳ ಹರಿವು - 289 ಕ್ಯೂಸೆಕ್
ಹೊರ ಹರಿವು - 200 ಕ್ಯೂಸೆಕ್
5) ಹೇಮಾವತಿ ಜಲಾಶಯ
ನೀರಿನ ಮಟ್ಟ 10.01 ಟಿಎಂಸಿ
ಒಳಹರಿವು - 388 ಕ್ಯೂಸೆಕ್
ಹೊರ ಹರಿವು - 250 ಕ್ಯೂಸೆಕ್
6) ಕೆಆರ್‌ಎಸ್ ಜಲಾಶಯ
ನೀರಿನ ಮಟ್ಟ - 13.14 ಟಿಎಂಸಿ
ಒಳಹರಿವು - 1423 ಕ್ಯೂಸೆಕ್
ಹೊರ ಹರಿವು - 444 ಕ್ಯೂಸೆಕ್
7) ಕಬಿನಿ ಜಲಾಶಯ
ನೀರಿನ ಮಟ್ಟ - 7.82 ಟಿಎಂಸಿ
ಒಳ ಹರಿವು - 1658 ಕ್ಯೂಸೆಕ್
ಹೊರ ಹರಿವು - 300 ಕ್ಯೂಸೆಕ್
8) ಭದ್ರಾ ಜಲಾಶಯ
ನೀರಿನ ಮಟ್ಟ 14.38 ಟಿಎಂಸಿ
ಒಳಹರಿವು - 445 ಕ್ಯೂಸೆಕ್
ಹೊರ ಹರಿವು - 341 ಕ್ಯೂಸೆಕ್
9) ತುಂಗಭದ್ರಾ ಜಲಾಶಯ
ನೀರಿನ ಮಟ್ಟ 3.94 ಟಿಎಂಸಿ
ಒಳಹರಿವು - 1490 ಕ್ಯೂಸೆಕ್
ಹೊರ ಹರಿವು - 43 ಕ್ಯೂಸೆಕ್
10) ಘಟಪ್ರಭಾ ಜಲಾಶಯ
ನೀರಿನ ಮಟ್ಟ - 8.41 ಟಿಎಂಸಿ
ಒಳಹರಿವು - 201 ಕ್ಯುಸೆಕ್
ಹೊರ ಹರಿವು - 1606 ಕ್ಯೂಸೆಕ್
11) ಮಲಪ್ರಭಾ ಜಲಾಶಯ
ನೀರಿನ ಮಟ್ಟ 6.65 ಟಿಎಂಸಿ
ಒಳಹರಿವು -
ಹೊರ ಹರಿವು -194 ಕ್ಯೂಸೆಕ್
12) ಆಲಮಟ್ಟಿ ಜಲಾಶಯ
ನೀರಿನ ಮಟ್ಟ - 20.83 ಟಿಎಂಸಿ
ಒಳಹರಿವು - 2578 ಕ್ಯುಸೆಕ್
ಹೊರ ಹರಿವು - 530 ಕ್ಯೂಸೆಕ್
13) ನಾರಾಯಣಪುರ ಜಲಾಶಯ
ನೀರಿನ ಮಟ್ಟ - 18.47 ಟಿಎಂಸಿ
ಒಳಹರಿವು - 12357 ಕ್ಯೂಸೆಕ್
ಹೊರಹರಿವು - 210 ಕ್ಯೂಸೆಕ್
14) ವಾಣಿ ವಿಲಾಸ ಸಾಗರ ಜಲಾಶಯ
ನೀರಿನ ಮಟ್ಟ 18.41 ಟಿಎಂಸಿ
ಒಳಹರಿವು - 1400 ಕ್ಯುಸೆಕ್
ಹೊರ ಹರಿವು 147 ಕ್ಯೂಸೆಕ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
