ಧಾರಾಕಾರ ಮಳೆಗೆ ತುಂಬಿ ಹರಿದಿವೆ ನದಿಗಳು, ಕೆಆರ್‌ಎಸ್, ಕಬಿನಿ, ಹಾರಂಗಿ ಸೇರಿ ಬಹುತೇಕ ಜಲಾಶಯ ಭರ್ತಿ, 13 ಜಲಾಶಯಗಳ ನೀರಿನ ಮಟ್ಟ ಹೀಗಿದೆ
Reservoir Water level Updates; ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಹೆಚ್ಚಿನ ಪ್ರಮುಖ ಜಲಾಶಯಗಳಲ್ಲಿ ನೀರು ಭರ್ತಿಯಾಗಿವೆ. ಕೆಆರ್‌ಎಸ್, ಕಬಿನಿ, ಹಾರಂಗಿ ಸೇರಿ ಬಹುತೇಕ ಜಲಾಶಯ ಭರ್ತಿಯಾಗಿದ್ದು, 13 ಜಲಾಶಯಗಳ ನೀರಿನ ಮಟ್ಟ ಹೀಗಿದೆ ಗಮನಿಸಿ.
ಬೆಂಗಳೂರು: ರಾಜ್ಯದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಬಹುತೇಕ ನದಿ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, ಕೆಲವು ವರ್ಷಗಳ ಮಳೆಕೊರತೆಯನ್ನು ನೀಗಿಸಿತೊಡಗಿದೆ. ರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೃಷ್ಣಾ ಮತ್ತು ಅದರ ಉಪನದಿಗಳು ಉತ್ತರ ಕರ್ನಾಟಕ ಭಾಗದಲ್ಲಿ ತುಂಬಿ ಹರಿದರೆ, ಮೈಸೂರು ಮಂಡ್ಯ ಭಾಗದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಕರಾವಳಿ ಕರ್ನಾಟಕ ಭಾಗದಲ್ಲಿ ಅಘನಾಶಿನಿ, ನೇತ್ರಾವತಿ, ಕುಮಾರ ಧಾರಾ ನದಿಗಳು ಭೋರ್ಗರೆದು ಹರಿಯುತ್ತಿವೆ.
ರಾಜ್ಯದ ಪ್ರಮುಖ 13 ಜಲಾಶಯಗಳಲ್ಲಿ ನೀರು ಭರ್ತಿಯಾಗತೊಡಗಿದೆ. ಮಂಡ್ಯದ ಕೆಆರ್‌ಎಸ್ ಬಹುತೇಕ ಭರ್ತಿಯಾಗಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ. ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ಬೃಹತ್ ಪ್ರಮಾಣದಲ್ಲಿ ನೀರು ಹರಿದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅದೇ ರೀತಿ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಕಾರಣ ಕೃಷ್ಣಾ ನದಿ ಮತ್ತು ಅದರ ಉಪನದಿಗಳು ಮೈದುಂಬಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 3-4, 2024
1) ಕೆಆರ್‌ಎಸ್ ಜಲಾಶಯ (ಕಾವೇರಿ)
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 123.27 ಅಡಿ
ಒಳ ಹರಿವು: 73,500 ಲಕ್ಷ ಕ್ಯೂಸೆಕ್
ಹೊರ ಹರಿವು: 58,667 ಲಕ್ಷ ಕ್ಯೂಸೆಕ್
2) ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 2,859 ಅಡಿ
ಇಂದಿನ ಮಟ್ಟ: 2,854.33 ಅಡಿ
ಒಳ ಹರಿವು: 10,214 ಕ್ಯೂಸೆಕ್
ಹೊರ ಹರಿವು: 15,312 ಕ್ಯೂಸೆಕ್
3) ಕಬಿನಿ ಜಲಾಶಯ
ಗರಿಷ್ಠ ಮಟ್ಟ: 2,284 ಅಡಿ
ಇಂದಿನ ಮಟ್ಟ: 2,281.60
ಒಳ ಹರಿವು: 32,559 ಕ್ಯೂಸೆಕ್
ಹೊರ ಹರಿವು: 35,121
4) ಹೇಮಾವತಿ ಜಲಾಶಯ (ಗೊರೂರು)
ಗರಿಷ್ಠ ಮಟ್ಟ: 2,922
ಇಂದಿನ ಮಟ್ಟ: 2,920.05
ಒಳ ಹರಿವು: 24,100 ಕ್ಯೂಸೆಕ್
ಹೊರ ಹರಿವು: 22,425 ಕ್ಯೂಸೆಕ್
5) ಲಿಂಗನಮಕ್ಕಿ ಜಲಾಶಯ (ಶರಾವತಿ)
ಗರಿಷ್ಠ ಮಟ್ಟ: 1,819 ಅಡಿ
ಇಂದಿನ ಮಟ್ಟ: 1,815.35
ಒಳ ಹರಿವು: 61,835 ಕ್ಯೂಸೆಕ್
ಹೊರ ಹರಿವು: 3,590 ಕ್ಯೂಸೆಕ್
6) ಸೂಪಾ ಜಲಾಶಯ (ಕಾಳಿ)
ಗರಿಷ್ಠ ಮಟ್ಟ: 564 ಮೀಟರ್
ಇಂದಿನ ಮಟ್ಟ: 556.47
ಒಳ ಹರಿವು: 40,463 ಕ್ಯೂಸೆಕ್
ಹೊರ ಹರಿವು: 3,534 ಕ್ಯೂಸೆಕ್
7) ಮಾಣಿ ಜಲಾಶಯ (ವರಾಹಿ)
ಗರಿಷ್ಠ ಮಟ್ಟ: 595 ಅಡಿ
ಇಂದಿನ ಮಟ್ಟ: 587.66
ಒಳ ಹರಿವು: 7,933 ಕ್ಯೂಸೆಕ್
ಹೊರ ಹರಿವು: ---
8) ತುಂಗಭದ್ರಾ ಡ್ಯಾಂ (ಹೊಸಪೇಟೆ)
ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,631.14
ಒಳ ಹರಿವು: 1.71 ಲಕ್ಷ ಕ್ಯೂಸೆಕ್
ಹೊರ ಹರಿವು: 1.75 ಲಕ್ಷ ಕ್ಯೂಸೆಕ್
9) ಮಲಪ್ರಭಾ
ಗರಿಷ್ಠ ಮಟ್ಟ: 2,079.5 ಅಡಿ
ಇಂದಿನ ಮಟ್ಟ: 2,076
ಒಳ ಹರಿವು: 17,397 ಕ್ಯೂಸೆಕ್
ಹೊರ ಹರಿವು: 15,844 ಕ್ಯೂಸೆಕ್
10) ಘಟಪ್ರಭಾ
ಗರಿಷ್ಠ ಮಟ್ಟ: 2,175 ಅಡಿ
ಇಂದಿನ ಮಟ್ಟ: 2,170.63
ಒಳ ಹರಿವು: 34,387 ಕ್ಯೂಸೆಕ್
ಹೊರ ಹರಿವು: 34,387 ಕ್ಯೂಸೆಕ್
11) ಭದ್ರಾ ಡ್ಯಾಂ
ಗರಿಷ್ಠ ಮಟ್ಟ: 2158 ಅಡಿ
ಇಂದಿನ ಮಟ್ಟ: 2152.75 ಅಡಿ
ಒಳ ಹರಿವು: 30,350 ಕ್ಯೂಸೆಕ್
ಹೊರ ಹರಿವು: 56,032 ಕ್ಯೂಸೆಕ್
12) ಆಲಮಟ್ಟಿ (ಕೃಷ್ಣಾ)
ಗರಿಷ್ಠ ಮಟ್ಟ: 519.6 ಮೀಟರ್
ಇಂದಿನ ಮಟ್ಟ: 515.62 ಮೀಟರ್
ಒಳ ಹರಿವು: 3.2 ಲಕ್ಷ ಕ್ಯೂಸೆಕ್
ಹೊರ ಹರಿವು: 3.02 ಲಕ್ಷ ಕ್ಯೂಸೆಕ್
13) ನಾರಾಯಣಪುರ (ಕೃಷ್ಣಾ)
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ಮಟ್ಟ: 489.02 ಮೀಟರ್
ಒಳ ಹರಿವು: 3 ಲಕ್ಷ ಕ್ಯೂಸೆಕ್
ಹೊರ ಹರಿವು: 2.9 ಲಕ್ಷ ಕ್ಯೂಸೆಕ್