ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 8; ಘಟಪ್ರಭಾ, ಅಘನಾಶಿನಿ ನದಿ ಪಾತ್ರದಲ್ಲಿ ಪ್ರವಾಹದ ಎಚ್ಚರಿಕೆ-dam water level today august 8 krs tungabhadra alamatti dam reservoir water level updates karnataka monsoon 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 8; ಘಟಪ್ರಭಾ, ಅಘನಾಶಿನಿ ನದಿ ಪಾತ್ರದಲ್ಲಿ ಪ್ರವಾಹದ ಎಚ್ಚರಿಕೆ

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 8; ಘಟಪ್ರಭಾ, ಅಘನಾಶಿನಿ ನದಿ ಪಾತ್ರದಲ್ಲಿ ಪ್ರವಾಹದ ಎಚ್ಚರಿಕೆ

Reservoir Water level Updates; ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಇಂದು ಮಳೆಯ ತೀವ್ರತೆ ಕಡಿಮೆಯಾಗಿದೆ. ಆದಾಗ್ಯೂ ಇತ್ತೀಚಿನ ಮಳೆಯ ಕಾರಣ ಬಹುತೇಕ ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಹೆಚ್ಚಿನ ಜಲಾಶಯಗಳು ಭರ್ತಿಯಾಗಿವೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 8ರಂದು ಘಟಪ್ರಭಾ, ಅಘನಾಶಿನಿ ನದಿ ಪಾತ್ರದಲ್ಲಿ ಪ್ರವಾಹದ ಎಚ್ಚರಿಕೆ ಘೋಷಣೆಯಾಗಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 8; ಘಟಪ್ರಭಾ, ಅಘನಾಶಿನಿ ನದಿ ಪಾತ್ರದಲ್ಲಿ ಪ್ರವಾಹದ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರ ನೀಡಿದೆ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 8; ಘಟಪ್ರಭಾ, ಅಘನಾಶಿನಿ ನದಿ ಪಾತ್ರದಲ್ಲಿ ಪ್ರವಾಹದ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರ ನೀಡಿದೆ.

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗಿದ್ದು ಅಲ್ಲಲ್ಲಿ ಭಾರಿ ಮಳೆಯಾಗುತ್ತಿದ್ದು. ಆಗಸ್ಟ್ 8 ರಿಂದ ಮಳೆ ತೀವ್ರತೆ ಕಡಿಮೆಯಾಗಲಿದ್ದು, ನಿನ್ನೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡುಜಿಲ್ಲೆಗಳಲ್ಲಿ ಚದುರಿದಿಂದ ಅಲ್ಲಲ್ಲಿ ವ್ಯಾಪಕವಾಗಿ ತುಂತುರು ಮಳೆಯಾಗಿದೆ.

ಇನ್ನುಳಿದಂತೆ ಭಾರತೀಯ ಹವಾಮಾನ ಇಲಾಖೆಯಿಂದ ಯಾವುದೇ ಎಚ್ಚರಿಕೆ ನೀಡಿಲ್ಲ. ಈ ನಡುವೆ, ಕರ್ನಾಟಕದ ಪ್ರಮುಖ 13 ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಕೆಲವು ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿದೆ. ಆದಾಗ್ಯೂ ಒಂದೆರಡು ಜಲಾಶಯಗಳ ನೀರಿನ ಹರಿವು ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಆ ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 7-8, 2024


1) ಕೆಆರ್‌ಎಸ್ ಜಲಾಶಯ (ಕಾವೇರಿ)

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ಮಟ್ಟ: 124.18 ಅಡಿ

ಒಳ ಹರಿವು: 13,734 ಲಕ್ಷ ಕ್ಯೂಸೆಕ್

ಹೊರ ಹರಿವು: 6,665 ಲಕ್ಷ ಕ್ಯೂಸೆಕ್

2) ಹಾರಂಗಿ ಜಲಾಶಯ

ಗರಿಷ್ಠ ಮಟ್ಟ: 2,859 ಅಡಿ

ಇಂದಿನ ಮಟ್ಟ: 2,856.81 ಅಡಿ

ಒಳ ಹರಿವು: 6,085 ಕ್ಯೂಸೆಕ್‌

ಹೊರ ಹರಿವು: 2,058 ಕ್ಯೂಸೆಕ್


3) ಕಬಿನಿ ಜಲಾಶಯ

ಗರಿಷ್ಠ ಮಟ್ಟ: 2,284 ಅಡಿ

ಇಂದಿನ ಮಟ್ಟ: 2,283.46

ಒಳ ಹರಿವು: 7,359 ಕ್ಯೂಸೆಕ್

ಹೊರ ಹರಿವು: 4,079

4) ಹೇಮಾವತಿ ಜಲಾಶಯ (ಗೊರೂರು)

ಗರಿಷ್ಠ ಮಟ್ಟ: 2,922

ಇಂದಿನ ಮಟ್ಟ: 2,922

ಒಳ ಹರಿವು: 4283 ಕ್ಯೂಸೆಕ್

ಹೊರ ಹರಿವು: 3680 ಕ್ಯೂಸೆಕ್


5) ಲಿಂಗನಮಕ್ಕಿ ಜಲಾಶಯ (ಶರಾವತಿ)

ಗರಿಷ್ಠ ಮಟ್ಟ: 1,819 ಅಡಿ

ಇಂದಿನ ಮಟ್ಟ: 1,816.30

ಒಳ ಹರಿವು: 21,345 ಕ್ಯೂಸೆಕ್

ಹೊರ ಹರಿವು: 16,035 ಕ್ಯೂಸೆಕ್

6) ಸೂಪಾ ಜಲಾಶಯ (ಕಾಳಿ)

ಗರಿಷ್ಠ ಮಟ್ಟ: 564 ಮೀಟರ್

ಇಂದಿನ ಮಟ್ಟ: 558.15 ಮೀಟರ್‌

ಒಳ ಹರಿವು: 15,064 ಕ್ಯೂಸೆಕ್

ಹೊರ ಹರಿವು: 4,662 ಕ್ಯೂಸೆಕ್‌


7) ಮಾಣಿ ಜಲಾಶಯ (ವರಾಹಿ)

ಗರಿಷ್ಠ ಮಟ್ಟ: 595 ಅಡಿ

ಇಂದಿನ ಮಟ್ಟ: 588.42

ಒಳ ಹರಿವು: 2,343 ಕ್ಯೂಸೆಕ್

ಹೊರ ಹರಿವು: ---

8) ತುಂಗಭದ್ರಾ ಡ್ಯಾಂ (ಹೊಸಪೇಟೆ)

ಗರಿಷ್ಠ ಮಟ್ಟ: 1,633 ಅಡಿ

ಇಂದಿನ ಮಟ್ಟ: 1,632

ಒಳ ಹರಿವು: 67,394 ಕ್ಯೂಸೆಕ್

ಹೊರ ಹರಿವು: 50,665 ಕ್ಯೂಸೆಕ್

9) ಮಲಪ್ರಭಾ

ಗರಿಷ್ಠ ಮಟ್ಟ: 2,079.5 ಅಡಿ

ಇಂದಿನ ಮಟ್ಟ: 2,076.65

ಒಳ ಹರಿವು: 8,359 ಕ್ಯೂಸೆಕ್‌

ಹೊರ ಹರಿವು: 5,303 ಕ್ಯೂಸೆಕ್

10) ಘಟಪ್ರಭಾ

ಗರಿಷ್ಠ ಮಟ್ಟ: 2,175 ಅಡಿ

ಇಂದಿನ ಮಟ್ಟ: 2,173.10

ಒಳ ಹರಿವು: 18,1521 ಕ್ಯೂಸೆಕ್

ಹೊರ ಹರಿವು: 10,883 ಕ್ಯೂಸೆಕ್

11) ಭದ್ರಾ ಡ್ಯಾಂ

ಗರಿಷ್ಠ ಮಟ್ಟ: 2158 ಅಡಿ

ಇಂದಿನ ಮಟ್ಟ: 2152 ಅಡಿ

ಒಳ ಹರಿವು: 7,561 ಕ್ಯೂಸೆಕ್

ಹೊರ ಹರಿವು: 7,223 ಕ್ಯೂಸೆಕ್

12) ಆಲಮಟ್ಟಿ (ಕೃಷ್ಣಾ)

ಗರಿಷ್ಠ ಮಟ್ಟ: 519.6 ಮೀಟರ್

ಇಂದಿನ ಮಟ್ಟ: 517.73 ಮೀಟರ್

ಒಳ ಹರಿವು: 2.96 ಲಕ್ಷ ಕ್ಯೂಸೆಕ್

ಹೊರ ಹರಿವು: 2.02 ಲಕ್ಷ ಕ್ಯೂಸೆಕ್

13) ನಾರಾಯಣಪುರ (ಕೃಷ್ಣಾ)

ಗರಿಷ್ಠ ಮಟ್ಟ: 492.25 ಮೀಟರ್

ಇಂದಿನ ಮಟ್ಟ: 490.93 ಮೀಟರ್

ಒಳ ಹರಿವು: 2.04 ಲಕ್ಷ ಕ್ಯೂಸೆಕ್

ಹೊರ ಹರಿವು: 2.03 ಲಕ್ಷ ಕ್ಯೂಸೆಕ್

ಘಟಪ್ರಭಾ, ಅಘನಾಶಿನಿ ಪ್ರವಾಹದ ಎಚ್ಚರಿಕೆ

ಕೃಷ್ಣ ಜಲಾನಯನ ಪ್ರದೇಶದ ನದಿಗಳಲ್ಲಿ ಘಟಪ್ರಭಾ ನದಿಯು ಬಾಗಲಕೋಟೆ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಹಾಗೂ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅಘನಾಶಿನಿ ನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿರುವದರಿಂದ ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿಹಾರ ಕೇಂದ್ರ ಎಚ್ಚರಿಸಿದೆ.