ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 27; ಪ್ರಮುಖ 14 ಜಲಾಶಯಗಳ ಪೈಕಿ 8 ಭರ್ತಿ, ಯಾವ ಜಲಾಶಯದಲ್ಲಿ ಎಷ್ಟು ನೀರು, ಪೂರ್ತಿ ವಿವರ ಹೀಗಿದೆ
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 27; ಪ್ರಮುಖ 14 ಜಲಾಶಯಗಳ ಪೈಕಿ 8 ಭರ್ತಿ, ಯಾವ ಜಲಾಶಯದಲ್ಲಿ ಎಷ್ಟು ನೀರು ಇದೆ ಎಂಬುದರ ಪೂರ್ತಿ ವಿವರ ಹೀಗಿದೆ. ಈ ನಡುವೆ, ರಾಜ್ಯದಲ್ಲಿ ಮಳೆ ಮುಂದುವರಿದಿರುವ ಕಾರಣ ಈ ಬಾರಿ ಎಲ್ಲ ಜಲಾಶಯಗಳು ಕೂಡ ಭರ್ತಿಯಾಗುವ ನಿರೀಕ್ಷೆಯಲ್ಲಿದ್ದಾರೆ ಜನ.
ಬೆಂಗಳೂರು: ಕರ್ನಾಟಕದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ರಾಜ್ಯದ ಪ್ರಮುಖ 14 ಜಲಾಶಯಗಳ ಪೈಕಿ 8 ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಕೆಲವು ಜಲಾಶಯ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ಪ್ರಕಾರ ಇಂದು (ಜುಲೈ 27) ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ, ರಾಜ್ಯದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಪ್ರಕಟಿಸಿದ್ದು, ತುಂಗಭದ್ರಾ, ಕೆಆರ್‌ಎಸ್, ಹಾರಂಗಿ, ಘಟಪ್ರಭಾ ಮತ್ತು ಇತರೆ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಹರಿಯಿಸಲಾಗುತ್ತಿದೆ. ಚಿಕ್ಕಮಗಳೂರಿನ ಬೆಟ್ಟದಮನೆ ಉಪನದಿ (ಕಾವೇರಿ ನದಿ ) ಮತ್ತು ಚಾಮರಾಜನಗರದ ಕೊಳ್ಳೇಗಾಲ ಉಪನದಿ (ಕಾವೇರಿ ನದಿ) ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ನದಿದಂಡೆಗಳ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ. ಅದೇ ರೀತಿ ಶಿವಮೊಗ್ಗದಲ್ಲಿ ತುಂಗಭದ್ರಾ ನದಿಯ ಉಪನದಿ ಮಹಿಷಿ, ಶಿಮೊಗ್ಗದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತ ಪ್ರವಾಹ ಪರಿಸ್ಥಿತಿ ಉಂಟುಮಾಡಿದೆ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 27 2024
1) ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ – 108 (ಟಿಎಂಸಿ)
ಒಳ ಹರಿವು - 65,167 ಕ್ಯೂಸೆಕ್
ಹೊರ ಹರಿವು - 1,853 ಕ್ಯೂಸೆಕ್
2) ಸುಪಾ ಜಲಾಶಯ
ನೀರಿನ ಮಟ್ಟ – 86.89 (ಟಿಎಂಸಿ)
ಒಳ ಹರಿವು - 35,786 ಕ್ಯೂಸೆಕ್
ಹೊರ ಹರಿವು - 000 ಕ್ಯೂಸೆಕ್
3) ವಾರಾಹಿ ಜಲಾಶಯ
ನೀರಿನ ಮಟ್ಟ – 14.66 ಟಿಎಂಸಿ
ಒಳ ಹರಿವು - 7,537 ಕ್ಯೂಸೆಕ್
ಹೊರಹರಿವು - 000
4) ಹಾರಂಗಿ ಜಲಾಶಯ
ನೀರಿನ ಮಟ್ಟ - 7.44 ಟಿಎಂಸಿ
ಒಳ ಹರಿವು - 9,288 ಕ್ಯೂಸೆಕ್
ಹೊರ ಹರಿವು - 13,916 ಕ್ಯೂಸೆಕ್
5) ಹೇಮಾವತಿ ಜಲಾಶಯ
ನೀರಿನ ಮಟ್ಟ 35.22 ಟಿಎಂಸಿ
ಒಳ ಹರಿವು - 52,999 ಕ್ಯೂಸೆಕ್
ಹೊರ ಹರಿವು - 63,580 ಕ್ಯೂಸೆಕ್
6) ಕೆಆರ್‌ಎಸ್ ಜಲಾಶಯ
ನೀರಿನ ಮಟ್ಟ – 48.64 ಟಿಎಂಸಿ
ಒಳಹರಿವು - 1,11,599 ಕ್ಯೂಸೆಕ್
ಹೊರಹರಿವು - 1,13,506 ಕ್ಯೂಸೆಕ್
7) ಕಬಿನಿ ಜಲಾಶಯ
ನೀರಿನ ಮಟ್ಟ - 18.46 ಟಿಎಂಸಿ
ಒಳಹರಿವು - 30,769 ಕ್ಯೂಸೆಕ್
ಹೊರಹರಿವು - 30,000 ಕ್ಯೂಸೆಕ್
8) ಭದ್ರಾ ಜಲಾಶಯ
ನೀರಿನ ಮಟ್ಟ 45.04 ಟಿಎಂಸಿ
ಒಳ ಹರಿವು - 46876 ಕ್ಯೂಸೆಕ್
ಹೊರ ಹರಿವು - 186 ಕ್ಯೂಸೆಕ್
9) ತುಂಗಭದ್ರಾ ಜಲಾಶಯ
ನೀರಿನ ಮಟ್ಟ -100.523 ಟಿಎಂಸಿ
ಒಳ ಹರಿವು - 1,03,676 ಕ್ಯೂಸೆಕ್
ಹೊರ ಹರಿವು - 1,17,571 ಕ್ಯೂಸೆಕ್
10) ಘಟಪ್ರಭಾ ಜಲಾಶಯ
ನೀರಿನ ಮಟ್ಟ - 101.73 ಟಿಎಂಸಿ
ಒಳ ಹರಿವು - 87,766 ಕ್ಯುಸೆಕ್
ಹೊರ ಹರಿವು - 84,149 ಕ್ಯೂಸೆಕ್
11) ಮಲಪ್ರಭಾ ಜಲಾಶಯ
ನೀರಿನ ಮಟ್ಟ - 25.46 ಟಿಎಂಸಿ
ಒಳ ಹರಿವು -21,606 ಕ್ಯುಸೆಕ್
ಹೊರ ಹರಿವು -194 ಕ್ಯೂಸೆಕ್
12) ಆಲಮಟ್ಟಿ ಜಲಾಶಯ
ನೀರಿನ ಮಟ್ಟ - 76.698 ಟಿಎಂಸಿ
ಒಳ ಹರಿವು - 2,18,230 ಕ್ಯುಸೆಕ್
ಹೊರ ಹರಿವು - 2,96,794 ಕ್ಯೂಸೆಕ್
13) ನಾರಾಯಣಪುರ ಜಲಾಶಯ
ನೀರಿನ ಮಟ್ಟ – 26.86 ಟಿಎಂಸಿ
ಒಳ ಹರಿವು - 2,61,397 ಕ್ಯೂಸೆಕ್
ಹೊರ ಹರಿವು - 2,65,494 ಕ್ಯೂಸೆಕ್
14) ವಾಣಿ ವಿಲಾಸ ಸಾಗರ ಜಲಾಶಯ
ನೀರಿನ ಮಟ್ಟ 17.89 ಟಿಎಂಸಿ
ಒಳ ಹರಿವು - 0 ಕ್ಯುಸೆಕ್
ಹೊರ ಹರಿವು -147 ಕ್ಯೂಸೆಕ್
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು ಮತ್ತು ಪ್ರವಾಹದ ಎಚ್ಚರಿಕೆ
ಪ್ರವಾಹದ ಎಚ್ಚರಿಕೆ: ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ನದಿಯು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೇಮಾವತಿ ನದಿಯು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರದಿಂದಿರಲು ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)