ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28; ಕೆಆರ್‌ಎಸ್‌, ಹಾರಂಗಿ, ಕಬಿನಿ ಜಲಾಶಯಗಳು ಭರ್ತಿ, ನೀರಿನ ಹೊರ ಹರಿವು ಹೆಚ್ಚಳ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28; ಕೆಆರ್‌ಎಸ್‌, ಹಾರಂಗಿ, ಕಬಿನಿ ಜಲಾಶಯಗಳು ಭರ್ತಿ, ನೀರಿನ ಹೊರ ಹರಿವು ಹೆಚ್ಚಳ

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28; ಕೆಆರ್‌ಎಸ್‌, ಹಾರಂಗಿ, ಕಬಿನಿ ಜಲಾಶಯಗಳು ಭರ್ತಿ, ನೀರಿನ ಹೊರ ಹರಿವು ಹೆಚ್ಚಳ

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28; ರಾಜ್ಯದ 14 ಪ್ರಮುಖ ಜಲಾಶಯಗಳ ಪೈಕಿ ಕೆಆರ್‌ಎಸ್‌, ಹಾರಂಗಿ, ಹೇಮಾವತಿ, ಕಬಿನಿ, ತುಂಗಭದ್ರಾ ಜಲಾಶಯಗಳು ಭರ್ತಿಯಾಗಿವೆ. ಈ ಭಾಗದಲ್ಲಿ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು ಪ್ರವಾಹ ಪರಿಸ್ಥಿತಿ ಇದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28; ಕೆಆರ್‌ಎಸ್‌, ಹಾರಂಗಿ, ಕಬಿನಿ ಜಲಾಶಯಗಳು ಭರ್ತಿ, ನೀರಿನ ಹೊರ ಹರಿವು ಹೆಚ್ಚಳ
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28; ಕೆಆರ್‌ಎಸ್‌, ಹಾರಂಗಿ, ಕಬಿನಿ ಜಲಾಶಯಗಳು ಭರ್ತಿ, ನೀರಿನ ಹೊರ ಹರಿವು ಹೆಚ್ಚಳ

ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ವಿವಿಧ ಜಲಾಶಯಗಳ ಪ್ರದೇಶಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ಪ್ರಕಾರ ಇಂದು (ಜುಲೈ 28) ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆ ಮುಂದುವರಿಯಲಿದ್ದು, ಆರೆಂಜ್ ಅಲರ್ಟ್ ಘೋ‍ಷಣೆಯಾಗಿದೆ. ಇನ್ನುಳಿದಂತೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಪ್ರಕಟಿಸಿದ್ದು, ತುಂಗಭದ್ರಾ, ಕೆಆರ್‌ಎಸ್‌, ಹಾರಂಗಿ, ಘಟಪ್ರಭಾ ಮತ್ತು ಇತರೆ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಹರಿಯುತ್ತಿರುವುದನ್ನು ದೃಢೀಕರಿಸಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 28 2024

1) ಲಿಂಗನಮಕ್ಕಿ ಜಲಾಶಯ

ನೀರಿನ ಮಟ್ಟ – 114.58 (ಟಿಎಂಸಿ)

ಒಳ ಹರಿವು - 74,514 ಕ್ಯೂಸೆಕ್‌

ಹೊರ ಹರಿವು - 2,909 ಕ್ಯೂಸೆಕ್

2) ಸುಪಾ ಜಲಾಶಯ

ನೀರಿನ ಮಟ್ಟ – 91.67 (ಟಿಎಂಸಿ)

ಒಳ ಹರಿವು - 55,131 ಕ್ಯೂಸೆಕ್‌

ಹೊರ ಹರಿವು - 000 ಕ್ಯೂಸೆಕ್

3) ವಾರಾಹಿ ಜಲಾಶಯ

ನೀರಿನ ಮಟ್ಟ – 15.59 ಟಿಎಂಸಿ

ಒಳ ಹರಿವು - 10,798 ಕ್ಯೂಸೆಕ್

ಹೊರಹರಿವು - 000

4) ಹಾರಂಗಿ ಜಲಾಶಯ

ನೀರಿನ ಮಟ್ಟ - 7.15 ಟಿಎಂಸಿ

ಒಳ ಹರಿವು - 13,877 ಕ್ಯೂಸೆಕ್

ಹೊರ ಹರಿವು - 17,291 ಕ್ಯೂಸೆಕ್

5) ಹೇಮಾವತಿ ಜಲಾಶಯ

ನೀರಿನ ಮಟ್ಟ 34.01 ಟಿಎಂಸಿ

ಒಳ ಹರಿವು - 63.162 ಕ್ಯೂಸೆಕ್

ಹೊರ ಹರಿವು - 77,095 ಕ್ಯೂಸೆಕ್‌

6) ಕೆಆರ್‌ಎಸ್‌ ಜಲಾಶಯ

ನೀರಿನ ಮಟ್ಟ – 48.64 ಟಿಎಂಸಿ

ಒಳಹರಿವು - 1,11,599 ಕ್ಯೂಸೆಕ್

ಹೊರಹರಿವು - 1,13,506 ಕ್ಯೂಸೆಕ್

7) ಕಬಿನಿ ಜಲಾಶಯ

ನೀರಿನ ಮಟ್ಟ - 18.47 ಟಿಎಂಸಿ

ಒಳಹರಿವು - 30,769 ಕ್ಯೂಸೆಕ್

ಹೊರಹರಿವು - 30,000 ಕ್ಯೂಸೆಕ್

8) ಭದ್ರಾ ಜಲಾಶಯ

ನೀರಿನ ಮಟ್ಟ 61.82 ಟಿಎಂಸಿ

ಒಳ ಹರಿವು - 49,801 ಕ್ಯೂಸೆಕ್

ಹೊರ ಹರಿವು - 206 ಕ್ಯೂಸೆಕ್

9) ತುಂಗಭದ್ರಾ ಜಲಾಶಯ

ನೀರಿನ ಮಟ್ಟ -100.523 ಟಿಎಂಸಿ

ಒಳ ಹರಿವು - 1,03,676 ಕ್ಯೂಸೆಕ್

ಹೊರ ಹರಿವು - 1,17,571 ಕ್ಯೂಸೆಕ್

10) ಘಟಪ್ರಭಾ ಜಲಾಶಯ

ನೀರಿನ ಮಟ್ಟ - 47.22 ಟಿಎಂಸಿ

ಒಳ ಹರಿವು - 43,951 ಕ್ಯುಸೆಕ್‌

ಹೊರ ಹರಿವು - 38,596 ಕ್ಯೂಸೆಕ್

11) ಮಲಪ್ರಭಾ ಜಲಾಶಯ

ನೀರಿನ ಮಟ್ಟ - 27.07 ಟಿಎಂಸಿ

ಒಳ ಹರಿವು -18,874 ಕ್ಯುಸೆಕ್‌

ಹೊರ ಹರಿವು -194 ಕ್ಯೂಸೆಕ್

12) ಆಲಮಟ್ಟಿ ಜಲಾಶಯ

ನೀರಿನ ಮಟ್ಟ - 76.70 ಟಿಎಂಸಿ

ಒಳ ಹರಿವು - 2,18,230 ಕ್ಯುಸೆಕ್‌

ಹೊರ ಹರಿವು - 2,96,794 ಕ್ಯೂಸೆಕ್

13) ನಾರಾಯಣಪುರ ಜಲಾಶಯ

ನೀರಿನ ಮಟ್ಟ – 25.66 ಟಿಎಂಸಿ

ಒಳ ಹರಿವು - 2,90,042 ಕ್ಯೂಸೆಕ್

ಹೊರ ಹರಿವು - 3,03,925 ಕ್ಯೂಸೆಕ್

14) ವಾಣಿ ವಿಲಾಸ ಸಾಗರ ಜಲಾಶಯ

ನೀರಿನ ಮಟ್ಟ 17.88 ಟಿಎಂಸಿ

ಒಳ ಹರಿವು - 0 ಕ್ಯುಸೆಕ್‌

ಹೊರ ಹರಿವು -147 ಕ್ಯೂಸೆಕ್‌

ಕರ್ನಾಟಕದ ಜಲಾಶಯಗಳಿಗೆ ನೀರು ಒಳಹರಿವು, ಜುಲೈ 28ರ ಮುನ್ನೋಟ

ಕರ್ನಾಟಕದ ಜಲಾಶಯಗಳಿಗೆ ನೀರು ಒಳಹರಿವು, ಜುಲೈ 28ರ ಮುನ್ನೋಟ
ಕರ್ನಾಟಕದ ಜಲಾಶಯಗಳಿಗೆ ನೀರು ಒಳಹರಿವು, ಜುಲೈ 28ರ ಮುನ್ನೋಟ

ಮುಂದಿನ 5 ದಿನಗಳ ಮಳೆ ಮುನ್ಸೂಚನೆ

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಇಂದು ಜೋರಾದ ಗಾಳಿಯೊಂದಿಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಈ ಭಾಗದಲ್ಲಿ ಆರೆಂಜ್ಅಲರ್ಟ್ ನೀಡಲಾಗಿದೆ. ಜುಲೈ 28 ರಿಂದ 31 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ, ಜುಲೈ 27 ರಿಂದ 31 ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner