ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ; ಕಬಿನಿ, ಹಾರಂಗಿ, ಕೆಆರ್‌ಎಸ್, ಹೇಮಾವತಿ, ಭದ್ರಾ, ತುಂಗ ಭದ್ರಾ ಜಲಾಶಯ ಭರ್ತಿ, ಪ್ರವಾಹದ ಎಚ್ಚರಿಕೆ
Karnataka Dam Water Level Today July 31: ವ್ಯಾಪಕ ಮಳೆಯಾಗುತ್ತಿರುವ ಕಾರಣ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕಬಿನಿ, ಹಾರಂಗಿ, ಕೆಆರ್‌ಎಸ್, ಹೇಮಾವತಿ, ಭದ್ರಾ, ತುಂಗ ಭದ್ರಾ ಜಲಾಶಯ ಭರ್ತಿಯಾಗಿವೆ. ಇಲ್ಲಿಂದ ನೀರಿನ ಹೊರ ಹರಿವು ಹೆಚ್ಚಳವಾಗಿರುವ ಕಾರಣ, ತಗ್ಗಿನ ಪ್ರದೇಶಗಳಲ್ಲಿ, ನದಿ ದಂಡೆಯ ಪ್ರದೇಶಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು: ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದೆ. ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿರುವ ಕಾರಣ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ದಂಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ರಾಜ್ಯದ 14 ಪ್ರಮುಖ ಜಲಾಶಯಗಳ ಪೈಕಿ 7 ಭರ್ತಿಯಾಗಿದ್ದು, ಅವುಗಳಿಂದ ಹೊರ ಹರಿವು ಹೆಚ್ಚಾಗಿದೆ.
ಕಬಿನಿ ಜಲಾಶಯಕ್ಕೆ ಕೇರಳದಿಂದ ನೀರು ಹರಿದು ಬಂದಿದ್ದು, ಈ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಕಾರಣ ಕೃಷ್ಣಾ ನದಿ ಮತ್ತು ಅದರ ಉಪನದಿಗಳಲ್ಲಿ ಕೂಡ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗೋಕಾಕ್ ಭಾಗದಲ್ಲಿ 800 ಮನೆಗಳು ಮುಳುಗಡೆಯಾಗಿವೆ ಎಂದು ಸ್ಥಳೀಯಾಡಳಿತದ ಮೂಲಗಳು ತಿಳಿಸಿವೆ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 31 2024
1) ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ – 124.60 (ಟಿಎಂಸಿ)
ಒಳ ಹರಿವು - 50710 ಕ್ಯೂಸೆಕ್
ಹೊರ ಹರಿವು - 3757 ಕ್ಯೂಸೆಕ್
2) ಸುಪಾ ಜಲಾಶಯ
ನೀರಿನ ಮಟ್ಟ – 100.14 (ಟಿಎಂಸಿ)
ಒಳ ಹರಿವು - 36661 ಕ್ಯೂಸೆಕ್
ಹೊರ ಹರಿವು - 000 ಕ್ಯೂಸೆಕ್
3) ವಾರಾಹಿ ಜಲಾಶಯ
ನೀರಿನ ಮಟ್ಟ – 31.10 ಟಿಎಂಸಿ
ಒಳ ಹರಿವು - 8810 ಕ್ಯೂಸೆಕ್
ಹೊರಹರಿವು - 000
4) ಹಾರಂಗಿ ಜಲಾಶಯ
ನೀರಿನ ಮಟ್ಟ - 7.83 ಟಿಎಂಸಿ
ಒಳ ಹರಿವು - 12,317 ಕ್ಯೂಸೆಕ್
ಹೊರ ಹರಿವು - 7666 ಕ್ಯೂಸೆಕ್
5) ಹೇಮಾವತಿ ಜಲಾಶಯ
ನೀರಿನ ಮಟ್ಟ 36.12 ಟಿಎಂಸಿ
ಒಳ ಹರಿವು - 26600 ಕ್ಯೂಸೆಕ್
ಹೊರ ಹರಿವು - 16935 ಕ್ಯೂಸೆಕ್
6) ಕೆಆರ್‌ಎಸ್ ಜಲಾಶಯ
ನೀರಿನ ಮಟ್ಟ – 46.701 ಟಿಎಂಸಿ
ಒಳಹರಿವು - 68192 ಕ್ಯೂಸೆಕ್
ಹೊರಹರಿವು - 107783 ಕ್ಯೂಸೆಕ್
7) ಕಬಿನಿ ಜಲಾಶಯ
ನೀರಿನ ಮಟ್ಟ - 18.95 ಟಿಎಂಸಿ
ಒಳಹರಿವು - 57,819 ಕ್ಯೂಸೆಕ್
ಹೊರಹರಿವು - 80,000 ಕ್ಯೂಸೆಕ್
8) ಭದ್ರಾ ಜಲಾಶಯ
ನೀರಿನ ಮಟ್ಟ 68.01 ಟಿಎಂಸಿ
ಒಳ ಹರಿವು - 20774 ಕ್ಯೂಸೆಕ್
ಹೊರ ಹರಿವು - 1964 ಕ್ಯೂಸೆಕ್
9) ತುಂಗಭದ್ರಾ ಜಲಾಶಯ
ನೀರಿನ ಮಟ್ಟ -100.68 ಟಿಎಂಸಿ
ಒಳ ಹರಿವು - 1,31,821 ಕ್ಯೂಸೆಕ್
ಹೊರ ಹರಿವು - 93,979 ಕ್ಯೂಸೆಕ್
10) ಘಟಪ್ರಭಾ ಜಲಾಶಯ
ನೀರಿನ ಮಟ್ಟ - 47.16 ಟಿಎಂಸಿ
ಒಳ ಹರಿವು - 38012 ಕ್ಯುಸೆಕ್
ಹೊರ ಹರಿವು - 35721 ಕ್ಯೂಸೆಕ್
11) ಮಲಪ್ರಭಾ ಜಲಾಶಯ
ನೀರಿನ ಮಟ್ಟ - 30.57 ಟಿಎಂಸಿ
ಒಳ ಹರಿವು -7707 ಕ್ಯುಸೆಕ್
ಹೊರ ಹರಿವು -4177 ಕ್ಯೂಸೆಕ್
12) ಆಲಮಟ್ಟಿ ಜಲಾಶಯ
ನೀರಿನ ಮಟ್ಟ - 67.86 ಟಿಎಂಸಿ
ಒಳ ಹರಿವು - 302573 ಕ್ಯುಸೆಕ್
ಹೊರ ಹರಿವು - 302573 ಕ್ಯೂಸೆಕ್
13) ನಾರಾಯಣಪುರ ಜಲಾಶಯ
ನೀರಿನ ಮಟ್ಟ – 23.50 ಟಿಎಂಸಿ
ಒಳ ಹರಿವು - 2,90,646 ಕ್ಯೂಸೆಕ್
ಹೊರ ಹರಿವು - 2,96,577 ಕ್ಯೂಸೆಕ್
14) ವಾಣಿ ವಿಲಾಸ ಸಾಗರ ಜಲಾಶಯ
ನೀರಿನ ಮಟ್ಟ 18.35 ಟಿಎಂಸಿ
ಒಳ ಹರಿವು - 4737 ಕ್ಯುಸೆಕ್
ಹೊರ ಹರಿವು -147 ಕ್ಯೂಸೆಕ್
ಕರ್ನಾಟಕದ ಜಲಾಶಯಗಳಿಗೆ ನೀರು ಒಳಹರಿವು, ಜುಲೈ 31ರ ಮುನ್ನೋಟ; ಪ್ರವಾಹದ ಎಚ್ಚರಿಕೆ
ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಕಾರಣ, ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಹಾರಂಗಿ, ಹೇಮಾವತಿ ಜಲಾಶಯಗಳಿಂದ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ 68,192 ಕ್ಯುಸೆಕ್ ಇದೆ. ಹೀಗಾಗಿ, 1.10 ಲಕ್ಷ ಕ್ಯುಸೆಕ್ ನೀರನ್ನು ಕೆಆರ್‌ಎಸ್‌ನಿಂದ ಹೊರಬಿಡಲಾಗುತ್ತಿದೆ.
ಆದ್ದರಿಂದ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ನದಿಯ ಎರಡೂ ದಂಡೆಗಳಲ್ಲಿರುವ ಜನರು, ತಗ್ಗು ಪ್ರದೇಶದಲ್ಲಿ ವಾಸಿಸುವವರು ತಮ್ಮ ಆಸ್ತಿಪಾಸ್ತಿ, ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಇಲಾಖೆಯ ಎಂಜಿನಿಯರ್ ಕೋರಿದ್ದಾರೆ.
ಇನ್ನೊಂದೆಡೆ, ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾನದಿ ಅಬ್ಬರಿಸುತ್ತಿದೆ. ಹೀಗಾಗಿ, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಜಲಾಶಯದಿಂದ ಮಂಗಳವಾರ ರಾತ್ರಿ 3.50 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ಹೀಗಾಗಿ ಹಲವೆಡೆ ಪ್ರವಾಹ ಭೀತಿ ಉಂಟಾಗಿದೆ. ಆಲಮಟ್ಟಿ ಜಲಾಶಯದ ಮುಂಭಾಗ, ನಾರಾಯಣಪುರ ಜಲಾಶಯದ ಹಿನ್ನೀರು ಪ್ರದೇಶದ ನದಿ ತೀರದ ಮತ್ತಷ್ಟು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)