ಕರ್ನಾಟಕದ ಜಲಾಶಯದ ಮಟ್ಟ ಜುಲೈ 20; ಕೆಆರ್‌ಎಸ್, ಕಬಿನಿ, ಹೇಮಾವತಿ ಭರ್ತಿಗೆ ಇನ್ನು ಕೆಲವೇ ಅಡಿ ಬಾಕಿ
ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಹೇಮಾವತಿ, ಕಬಿನಿ, ಕೆಆರ್‌ಎಸ್, ನಾರಾಯಣಪುರ ಜಲಾಶಯಗಳು ಭರ್ತಿಯಾಗಲು ಇನ್ನು ಕೆಲವೇ ಅಡಿ ಬಾಕಿ ಇದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು ಹೀಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿ ಕರ್ನಾಟಕ, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಬೀಳುತ್ತಿದೆ. ಇದರಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗತೊಡಗಿವೆ. ಕೆಆರ್‌ಎಸ್, ಹೇಮಾವತಿ, ಕಬಿನಿ, ನಾರಾಯಣಪುರ ಜಲಾಶಯ ಭರ್ತಿಯಾಗಲು ಇನ್ನು ಕೆಲವೇ ಅಡಿಗಳು ಬಾಕಿ ಇರುವಂಥದ್ದು. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಬೀಳಲಿದೆ. ಈಗ ಬಿದ್ದ ಮಳೆಗೆ ಕರ್ನಾಟಕದ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಹಾರಂಗಿ, ಕಬಿನಿ, ಕೆಆರ್‌ಎಸ್, ನಾರಾಯಣಪುರ ಜಲಾಶಯಗಳು ಭರ್ತಿಯಾಗಲು ಇನ್ನು ಕೆಲವೇ ಅಡಿ ಬಾಕಿ ಇದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ವಿವರಗಳ ಕಡೆಗೆ ಗಮನ ಹರಿಸೋಣ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಇಂದು (ಜುಲೈ 20) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಹಾರಂಗಿ, ಜಲಾಶಯ ಭರ್ತಿಯಾಗಲು ಇನ್ನು 2 ಟಿಎಂಸಿ ನೀರು ಬೇಕು. ಹೇಮಾವತಿ ಜಲಾಶಯಕ್ಕೆ 3 ಟಿಎಂಸಿ, ಕೆಆರ್‌ಎಸ್ ಭರ್ತಿಯಾಗಲು 6 ಟಿಎಂಸಿ ನೀರು ಬೇಕಾಗಿದೆ. ಇನ್ನುಳಿದಂತೆ ಎಲ್ಲ ಜಲಾಶಯಗಳ ನೀರಿನ ಒಳ ಹರಿವು ಹೆಚ್ಚಾಗಿದೆ. ಈ ಪೈಕಿ ಲಿಂಗನಮಕ್ಕಿ, ಸುಪಾ, ವಾರಾಹಿ ಜಲಾಶಯಗಳಲ್ಲಿ ಹೊರ ಹರಿವು ನಿಲ್ಲಿಸಲಾಗಿದೆ. ಅಲ್ಲಿ ಇನ್ನೂ ಜಲಾಶಯ ಅರ್ಧದಷ್ಟೂ ಭರ್ತಿಯಾಗಿಲ್ಲ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಜುಲೈ 20
1) ಲಿಂಗನಮಕ್ಕಿ ಜಲಾಶಯ
ನೀರಿನ ಮಟ್ಟ – 82.49 (ಟಿಎಂಸಿ)
ಒಳ ಹರಿವು - 69,724 ಕ್ಯೂಸೆಕ್
ಹೊರ ಹರಿವು - 000 ಕ್ಯೂಸೆಕ್
2) ಸುಪಾ ಜಲಾಶಯ
ನೀರಿನ ಮಟ್ಟ – 67.92 (ಟಿಎಂಸಿ)
ಒಳ ಹರಿವು - 41,275 ಕ್ಯೂಸೆಕ್
ಹೊರ ಹರಿವು - 000 ಕ್ಯೂಸೆಕ್
3) ವಾರಾಹಿ ಜಲಾಶಯ
ನೀರಿನ ಮಟ್ಟ – 11.51 ಟಿಎಂಸಿ
ಒಳ ಹರಿವು - 7414 ಕ್ಯೂಸೆಕ್
ಹೊರಹರಿವು - 000
4) ಹಾರಂಗಿ ಜಲಾಶಯ
ನೀರಿನ ಮಟ್ಟ - 6.75 ಟಿಎಂಸಿ
ಒಳ ಹರಿವು - 16560 ಕ್ಯೂಸೆಕ್
ಹೊರ ಹರಿವು - 17291 ಕ್ಯೂಸೆಕ್
5) ಹೇಮಾವತಿ ಜಲಾಶಯ
ನೀರಿನ ಮಟ್ಟ 34.06 ಟಿಎಂಸಿ
ಒಳ ಹರಿವು - 40267 ಕ್ಯೂಸೆಕ್
ಹೊರ ಹರಿವು - 12079 ಕ್ಯೂಸೆಕ್
6) ಕೆಆರ್‌ಎಸ್ ಜಲಾಶಯ
ನೀರಿನ ಮಟ್ಟ – 42.92 ಟಿಎಂಸಿ
ಒಳಹರಿವು - 51,375 ಕ್ಯೂಸೆಕ್
ಹೊರಹರಿವು - 4124 ಕ್ಯೂಸೆಕ್
7) ಕಬಿನಿ ಜಲಾಶಯ
ನೀರಿನ ಮಟ್ಟ - 17.49 ಟಿಎಂಸಿ
ಒಳಹರಿವು - 45658 ಕ್ಯೂಸೆಕ್
ಹೊರಹರಿವು - 40292 ಕ್ಯೂಸೆಕ್
8) ಭದ್ರಾ ಜಲಾಶಯ
ನೀರಿನ ಮಟ್ಟ 45.04 ಟಿಎಂಸಿ
ಒಳ ಹರಿವು - 46876 ಕ್ಯೂಸೆಕ್
ಹೊರ ಹರಿವು - 186 ಕ್ಯೂಸೆಕ್
9) ತುಂಗಭದ್ರಾ ಜಲಾಶಯ
ನೀರಿನ ಮಟ್ಟ 65.11 ಟಿಎಂಸಿ
ಒಳ ಹರಿವು - 107198 ಕ್ಯೂಸೆಕ್
ಹೊರ ಹರಿವು - 1436 ಕ್ಯೂಸೆಕ್
10) ಘಟಪ್ರಭಾ ಜಲಾಶಯ
ನೀರಿನ ಮಟ್ಟ - 33.65 ಟಿಎಂಸಿ
ಒಳ ಹರಿವು - 25697 ಕ್ಯುಸೆಕ್
ಹೊರ ಹರಿವು - 1630 ಕ್ಯೂಸೆಕ್
11) ಮಲಪ್ರಭಾ ಜಲಾಶಯ
ನೀರಿನ ಮಟ್ಟ 17.22 ಟಿಎಂಸಿ
ಒಳ ಹರಿವು -15090 ಕ್ಯುಸೆಕ್
ಹೊರ ಹರಿವು -194 ಕ್ಯೂಸೆಕ್
12) ಆಲಮಟ್ಟಿ ಜಲಾಶಯ
ನೀರಿನ ಮಟ್ಟ - 97.42 ಟಿಎಂಸಿ
ಒಳ ಹರಿವು - 65480 ಕ್ಯುಸೆಕ್
ಹೊರ ಹರಿವು - 65480 ಕ್ಯೂಸೆಕ್
13) ನಾರಾಯಣಪುರ ಜಲಾಶಯ
ನೀರಿನ ಮಟ್ಟ – 30.00 ಟಿಎಂಸಿ
ಒಳ ಹರಿವು - 64178 ಕ್ಯೂಸೆಕ್
ಹೊರ ಹರಿವು - 70730 ಕ್ಯೂಸೆಕ್
14) ವಾಣಿ ವಿಲಾಸ ಸಾಗರ ಜಲಾಶಯ
ನೀರಿನ ಮಟ್ಟ 17.95 ಟಿಎಂಸಿ
ಒಳ ಹರಿವು - 0 ಕ್ಯುಸೆಕ್
ಹೊರ ಹರಿವು -147 ಕ್ಯೂಸೆಕ್
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಂದು ಹೀಗಿದೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ವರ್ಷ ದತ್ತಾಂಶದ ಜೊತೆಗೆ ಇಂದಿನ ದತ್ತಾಂಶದ ಹೋಲಿಕೆ ಅನುಕೂಲಕರ ದತ್ತಾಂಶ ಪಟ್ಟಿ ಮೇಲಿರುವಂಥದ್ದು.
ರಾಜ್ಯದಲ್ಲಿ ಜಿಲ್ಲಾವಾರು ನೈಋತ್ಯ ಮುಂಗಾರು ಮಳೆ ನಕ್ಷೆ (ಜೂನ್1 ರಿಂದ ಜುಲೈ20, 2024) ರವರೆಗಿನ ಮತ್ತು ಜಿಲ್ಲಾವಾರು ಮಾಸಿಕ ಮಳೆ ನಕ್ಷೆ (ಜುಲೈ1 ರಿಂದ ಜುಲೈ20, 2024) ವಿವರ ಮೇಲಿನ ಟ್ವೀಟ್‌ನಲ್ಲಿರುವ ನಕ್ಷೆಯಲ್ಲಿದ್ದು, ಕೋಲಾರ ಜಿಲ್ಲೆಯಲ್ಲಿ ಮಳೆ ಕೊರತೆ ಫಲವಾಗಿ ಕೆಂಪು ಬಣ್ಣದಲ್ಲಿ ಚಿತ್ರಿಸಲಾಗಿದೆ. ಅಲ್ಲಿ ಶೇಕಡ 30ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ.