ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್ ತೂಗುದೀಪ ಕೇಸ್‌; ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶ, ಪೈಶಾಚಿಕ ಕೃತ್ಯಗಳ ಕಾರಣ ಆಂತರಿಕ ರಕ್ತಸ್ರಾವ

ದರ್ಶನ್ ತೂಗುದೀಪ ಕೇಸ್‌; ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶ, ಪೈಶಾಚಿಕ ಕೃತ್ಯಗಳ ಕಾರಣ ಆಂತರಿಕ ರಕ್ತಸ್ರಾವ

ದರ್ಶನ್ ತೂಗುದೀಪ ಕೇಸ್‌; ಚಿತ್ರದುರ್ಗದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳು ದಾಖಲಾಗಿದೆ. ಪೈಶಾಚಿಕ ಕೃತ್ಯಗಳ ಕಾರಣ ಆಂತರಿಕ ರಕ್ತಸ್ರಾವ ಉಂಟಾಗಿ ರೇಣುಕಾಸ್ವಾಮಿ ಸಾವು ಸಂಭವಿಸಿದೆ ಎಂಬ ಅಂಶ ಕೇಸ್ ಅನ್ನು ಬಿಗಿಗೊಳಿಸಿದೆ.

ದರ್ಶನ್ ತೂಗುದೀಪ ಕೇಸ್‌; ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಇದೆ. ಪೈಶಾಚಿಕ ಕೃತ್ಯಗಳ ಕಾರಣ ಆಂತರಿಕ ರಕ್ತಸ್ರಾವ ಉಂಟಾಗಿ ಸಾವು ಸಂಭವಿಸಿದೆ.
ದರ್ಶನ್ ತೂಗುದೀಪ ಕೇಸ್‌; ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಇದೆ. ಪೈಶಾಚಿಕ ಕೃತ್ಯಗಳ ಕಾರಣ ಆಂತರಿಕ ರಕ್ತಸ್ರಾವ ಉಂಟಾಗಿ ಸಾವು ಸಂಭವಿಸಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ವರದಿಯ ಅಂಶಗಳನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ವಿದ್ಯುತ್ ಶಾಕ್‌ ಮತ್ತು ಪೈಶಾಚಿಕ ಹಲ್ಲೆಗಳ ಕಾರಣ ಉಂಟಾದ ಆಂತರಿಕ ರಕ್ತಸ್ರಾವದಿಂದಾಗಿ ಅವರ ಸಾವು ಸಂಭವಿಸಿದೆ.

ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಅವರ ಮರ್ಮಾಂಗವನ್ನು ತುಳಿದು ಛಿದ್ರಗೊಳಿಸಲಾಗಿತ್ತು. ಅದರ ಜೊತೆಗೆ ಪದೇಪದೆ ವಿದ್ಯುತ್ ಶಾಕ್ ನೀಡಲಾಗಿತ್ತು. ಇದೇ ವಿಚಾರ ಪೊಲೀಸ್ ವಿಚಾರಣೆ ವೇಳೆ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಸಹಚರರು ಹೇಳಿದ್ದಾರೆ ಎಂಬುದು ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿದೆ.

ರೇಣುಕಾಸ್ವಾಮಿ ಅವರ ದೇಹದಾದ್ಯಂತ 15 ಗಂಭೀರ ಗಾಯಗಳಾಗಿವೆ ಎಂದು ಹಿಂದೂಸ್ತಾನ್ ಟೈಮ್ಸ್ ಈ ಹಿಂದೆ ವರದಿ ಮಾಡಿದೆ. ಇದೇ ಅಂಶಗಳಿರುವ ಫೋರೆನ್ಸಿಕ್ ಪುರಾವೆಗಳು ಅವರ ತಲೆಯನ್ನು ಬಲವಂತವಾಗಿ ವಾಹನಕ್ಕೆ ಡಿಕ್ಕಿ ಹೊಡೆಸಲಾಗಿದೆ ಎಂಬ ಅಂಶವೂ ವರದಿಯಲ್ಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ರೇಣುಕಾಸ್ವಾಮಿ ಸಾವಿಗೆ ಕಾರಣ ಕೈ, ಕಾಲು, ಬೆನ್ನು ಮತ್ತು ಎದೆ ಭಾಗದಲ್ಲಿ ರಕ್ತಸ್ರಾವ, ಮರ್ಮಾಂಗ ಛಿದ್ರ

"ರೇಣುಕಾಸ್ವಾಮಿಯ ಕೈ, ಕಾಲು, ಬೆನ್ನು ಮತ್ತು ಎದೆಯಲ್ಲಿ ರಕ್ತಸ್ರಾವವಾಗಿತ್ತು. ತೀವ್ರ ಹಲ್ಲೆಯಿಂದಾಗಿ ಆಂತರಿಕವಾಗಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾರೆ. ಮರದ ದೊಣ್ಣೆ ಮತ್ತು ಬೆಲ್ಟ್ ಬಳಸಿ ಹಲ್ಲೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಾಯಿಗಳು ವ್ಯಕ್ತಿಯ ಮುಖ ಮತ್ತು ಅವನ ಮೃತ ದೇಹದ ಕೆಲವು ಭಾಗಗಳನ್ನು ತಿಂದು ಹಾಕಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ”ಎಂದು ವರದಿಯನ್ನು ಓದಿ ತಿಳಿದುಕೊಂಡ ಅಧಿಕಾರಿಯೊಬ್ಬರು ಎಚ್‌ಟಿಗೆ ತಿಳಿಸಿದರು.

ಇನ್ನೊಂದೆಡೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿಯ ಜೊತೆಗೆ ನಾಳೆ (ಜೂನ್ 20) ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಲಿರುವ ರಿಮಾಂಡ್ ಅರ್ಜಿಯಲ್ಲಿ ಆರೋಪಿಗಳ ಇನ್ನಷ್ಟು ವಿಚಾರಣೆಗೆ ಅವಕಾಶ ಕೋರಲಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ಈಟಿವಿ ಭಾರತ ವರದಿಮಾಡಿದೆ.

ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್‌ ಹೇಳಿಕೆ ದಾಖಲು

ಚಿತ್ರದುರ್ಗದ ರೇಣುಕಾಸ್ವಾಮಿಯ‌ ಹತ್ಯೆ ನಡೆದ ಪಟ್ಟಣಗೆರೆಯ ಶೆಡ್‌ನ ಸೆಕ್ಯುರಿಟಿ ಗಾರ್ಡ್ ವಿಚಾರಣೆ ನಡೆಸಿದ್ದ ಪೊಲೀಸರು ಈಗ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದನ್ನು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ಸಹಾಯದಿಂದ ಭಾಷಾಂತರಿಸಲಾಗಿದೆ. ರಿಮಾಂಡ್ ಅರ್ಜಿಯ ಜೊತೆಗೆ ಈ ಹೇಳಿಕೆಯನ್ನು ಕೂಡ ಪೊಲೀಸರು ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ವರದಿ ಹೇಳಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಜೂನ್ 8 ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಇಲ್ಲಿಗೆ ಕರೆತಂದು ಪೈಶಾಚಿಕ ಕೃತ್ಯ ಎಸಗಲಾಗಿದೆ. ಈ ಕೃತ್ಯದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದು, ಪ್ರಕರಣದ ಗಾಂಭೀರ್ಯವನ್ನು ಹೆಚ್ಚಿಸಿದೆ. ಸ್ಟಾರ್ ನಟನೊಬ್ಬ ಇದರಲ್ಲಿ ಭಾಗಿಯಾಗಿರುವ ಕಾರಣ ದೇಶದ ಗಮನ ಸೆಳೆದ ಈ ಕೇಸ್‌ ನಿರ್ಣಾಯಕ ಘಟ್ಟಕ್ಕೆ ಬಂದಿದ್ದು, ನಾಳೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಕೊನೆಗೊಳ್ಳುತ್ತಿದೆ.