ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 9 ಆರೋಪಿಗಳ ಡಿಎನ್‌ಎ ಪರೀಕ್ಷೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದ ಪೊಲೀಸರು

ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 9 ಆರೋಪಿಗಳ ಡಿಎನ್‌ಎ ಪರೀಕ್ಷೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದ ಪೊಲೀಸರು

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದ ಪೊಲೀಸರು ಅಲ್ಲಿ, ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 9 ಆರೋಪಿಗಳನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದಾರೆ. ಇದರ ವಿವರ ವರದಿ ಇಲ್ಲಿದೆ.

ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 9 ಆರೋಪಿಗಳ ಡಿಎನ್‌ಎ ಪರೀಕ್ಷೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದ ಪೊಲೀಸರು
ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 9 ಆರೋಪಿಗಳ ಡಿಎನ್‌ಎ ಪರೀಕ್ಷೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದ ಪೊಲೀಸರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್ ತೂಗುದೀಪ ಸೇರಿ 9 ಆರೋಪಿಗಳ ಡಿಎನ್‌ಎ ಪರೀಕ್ಷೆಯನ್ನು ಇಂದು (ಜೂನ್ 19 ) ನಡೆಸಲಾಗಿದೆ. ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಕ್ಕೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಅತ್ಯಂತ ಎಚ್ಚರಿಕೆಯನ್ನು ನಡೆಸುತ್ತಿದ್ದಾರೆ. ಹೈ ಪ್ರೊಫೈಲ್ ಕೇಸ್ ಆಗಿರುವ ಕಾರಣ, ಹೆಚ್ಚಿನ ಕಾಳಜಿವಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ, ಪವನ್‌, ವಿನಯ್‌, ರಾಘವೇಂದ್ರ ಸೇರಿ 9 ಆರೋಪಿಗಳನ್ನು ಇಂದು (ಬುಧವಾರ) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು, ಅವರ ರಕ್ತ, ಕೂದಲು ಪಡೆದುಕೊಂಡು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದರು.

ದರ್ಶನ್ ತೂಗುದೀಪ ಕೇಸ್‌; ಡಿಎನ್‌ಎ ಪರೀಕ್ಷೆ ಯಾಕೆ

ರೇಣುಕಾಸ್ವಾಮಿ ಹತ್ಯೆ ಮಾಡಿದ ಪಟ್ಟಣಗೆರೆ ಶೆಡ್‌ನಲ್ಲಿ ಸಿಕ್ಕ ರಕ್ತದ ಮಾದರಿ, ಕೂದಲುಗಳ ಮಾದರಿಗಳನ್ನು ಮತ್ತು ಇತರೆ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ಅವುಗಳನ್ನೂ ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಇವುಗಳ ಡಿಎನ್‌ಎ ಮತ್ತು ಆರೋಪಿಗಳ ಡಿಎನ್‌ಎ ಹೊಂದಾಣಿಕೆಯಾದರೆ ಕೇಸ್‌ನ ಸಾಕ್ಷ್ಯ ಬಲವಾಗುತ್ತದೆ. ಹೀಗಾಗಿ ಪೊಲೀಸರು ಡಿಎನ್ಎ ಪರೀಕ್ಷೆಯ ಮೊರೆ ಹೋಗಿದ್ದಾರೆ

ಟ್ರೆಂಡಿಂಗ್​ ಸುದ್ದಿ

ತಾಂತ್ರಿಕ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳನ್ನೂ ಸಂಗ್ರಹಿಸುತ್ತಿರುವ ಪೊಲೀಸರು, ಅವುಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ, ಸಿಡಿಆರ್ ಕರೆ ಇನ್ನಿತರ ಸಾಕ್ಷ್ಯಾಧಾರಗಳನ್ನೂ ಕಲೆ ಹಾಕುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಕೇಸ್ - ಏನಿದು

ನಟ ದರ್ಶನ್ ತೂಗುದೀಪ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣ ಇದು. ರೇಣುಕಾಸ್ವಾಮಿ ಬೇನಾಮಿ ಇನ್‌ಸ್ಟಾಗ್ರಾಂ ಖಾತೆಯಿಂದ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ, ಆತನನ್ನು ಪತ್ತೆ ಹಚ್ಚಿ, ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿ ದಾರುಣವಾಗಿ ಹತ್ಯೆ ಮಾಡಲಾಗಿತ್ತು.

ಈ ಅಪಹರಣ ಮತ್ತು ಹತ್ಯೆ ಪ್ರಕರಣ ಜೂನ್ 8ಕ್ಕೆ ನಡೆದಿದ್ದು, 9ಕ್ಕೆ ಕಾಮಾಕ್ಷಿಪಾಳ್ಯದಲ್ಲಿ ಶವ ಪತ್ತೆಯಾದ ಬಳಿಕ ಬೆಳಕಿಗೆ ಬಂದಿದೆ. ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಶವ ಪತ್ತೆಯಾದ ಬಳಿಕ, ಗಿರಿನಗರ ಮೂಲದ ಮೂವರು ಜೂನ್ 10ರಂದು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು. ಹಣಕಾಸಿನ ವಿಚಾರದಲ್ಲಿ ಜಗಳವಾಗಿದ್ದು, ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದರು. ಅವರ ನಡವಳಿಕೆ ಸಂದೇಹ ಮೂಡಿಸಿದ ಕಾರಣ, ಪೊಲೀಸರು ಆ ಆರೋಪಿಗಳನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದಾಗ ನಟ ದರ್ಶನ್ ಆಪ್ತ ವಿನಯ್‌ ಪ್ರಕರಣದಲ್ಲಿ ಸಿಲುಕಿಕೊಂಡರು. ಬಳಿಕ ನಟ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಹೀಗೆ ಆರೋಪಿಗಳ ಸಂಖ್ಯೆ 19ಕ್ಕೆ ಏರಿತು.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾದರೆ, ದರ್ಶನ್ ತೂಗುದೀಪ ಎರಡನೇ ಆರೋಪಿ, ಪವಿತ್ರ ಗೌಡ ಸಹಚರ ಪವನ್ ಮೂರನೇ ಆರೋಪಿ. ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ನಾಳೆ ಕೊನೆಗೊಳ್ಳುತ್ತಿದ್ದು, ಅಷ್ಟರೊಳಗೆ ಪೊಲೀಸರು ತನಿಖೆಯ ಒಂದಷ್ಟು ವಿವರ ಮತ್ತು ಸಾಕ್ಷ್ಯಾಧಾರ ವಿವರಗಳನ್ನು ಕೋರ್ಟ್‌ಗೆ ಒಪ್ಪಿಸಬೇಕಾಗಿದೆ. ಆರೋಪಿಗಳನ್ನು ವಿಚಾರಣೆಗಾಗಿ ಇನ್ನೂ ಕೆಲವು ದಿನ ಒಪ್ಪಿಸಲು ಅವಕಾಶ ಕೇಳಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.